ರಾಯಬಾಗದ ಕರ್ನಾಟಕ ಪಬ್ಲಿಕ್ ಸರ್ಕಾರಿ ಪ್ರೌಢಶಾಲೆ ಸಾಧಕ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಉಪಪ್ರಾಚಾರ್ಯ ಬಿ.ಎಂ.ಮಾಳಿ, ಕೆ.ಡಿ.ತೋಳೆ, ಶಿಕ್ಷಕರಾದ ಜಿ.ಡಿ.ನಾಯಿಕ, ಉಮೇಶ ಶಿರಾಗಾಂವಿ, ಎಂ.ಬಿ.ಕಂಬಾರ, ಬಿ.ಪಿ.ಕಳ್ಳಿಗುದ್ದಿ, ಮಂಜುನಾಥ ಕಾಂಬಳೆ, ವಿನಾಯಕ ಒಡೆಯರ, ಎಸ್.ಎಸ್.ನನ್ನಾರಿ, ಎಂ.ಎ.ಜಮಖಂಡಿ ಇದ್ದರು.
ರಾಯಬಾಗ: ಪಟ್ಟಣದ ಕರ್ನಾಟಕ ಪಬ್ಲಿಕ್ ಸರ್ಕಾರಿ ಪ್ರೌಢಶಾಲೆ ಎಸ್‌ಎಸ್‌ಎಲ್‌ಸಿ ಲಿತಾಂಶ ಶೇ.90ರಷ್ಟು ಆಗಿದೆ. ನಿರ್ಮಲಾ ಮೇತ್ರಿ 584 ಅಂಕ ಪಡೆದು ಪ್ರಥಮ, ಸುನೀಲ ನಾಯಿಕವಾಡಿ 563 ಅಂಕ ಪಡೆದು ದ್ವಿತೀಯ, ಹಾಲಪ್ಪ ನಾಯಿಕ 549 ಅಂಕ ಪಡೆದು ತೃತೀಯ, ಸಾಕ್ಷಿ ಕೊಚೇರಿ 544 ಅಂಕ ಪಡೆದು ಚತುರ್ಥ ಸ್ಥಾನ ಗಳಿಸಿದ್ದಾರೆ. ಸಮಾಜ ವಿಜ್ಞಾನದಲ್ಲಿ ಅಕ್ಕವ್ವ ಗಡ್ಕರಿ 100ಕ್ಕೆ 100ಅಂಕ ಪಡೆದು ಸಾಧನೆ ಮಾಡಿದ್ದಾರೆ.