ನಿಪ್ಪಾಣಿ: ಇಲ್ಲಿನ ಅಶೋಕನಗರ, ಕೊಠಿವಾಲೆ ಕಾರ್ನರ್, ಚನ್ನಮ್ಮ ವೃತ್ತ ಪ್ರದೇಶದಲ್ಲಿ ನಗರ ಪಾಲಿಕೆ ವತಿಯಿಂದ ಮಂಗಳವಾರ ರಸ್ತೆ ಅತಿಕ್ರಮಣ ವಿರುದ್ಧ ಕಾರ್ಯಾಚರಣೆ ಕೈಗೊಂಡು ತೆರವುಗೊಳಿಸಲಾಯಿತು.
ರಸ್ತೆ ಅತಿಕ್ರಮಸಿದ್ದ ಅನೇಕ ಅಂಗಡಿಗಳು, ಕೈಗಾಡಿಗಳು ಹಾಗೂ ಚರಂಡಿ ಮೇಲಿನ ಅನಽಕೃತ ಕಟ್ಟಡ ನಿರ್ಮಾಣಗಳನ್ನು ತೆರವುಗೊಳಿಸಲಾಯಿತು. ಅತಿಕ್ರಮಣದಿಂದ ನಗರದಲ್ಲಿ ಸುಗಮ ಸಂಚಾರ ದೊಡ್ಡ ಸಮಸ್ಯೆಯಾಗಿತ್ತು. ಶಾಲೆ ಮತ್ತು ಕಚೇರಿ ಸಮಯದಲ್ಲಿ ಸಂಚಾರ ಕಷ್ಟಕರವಾಗಿತ್ತು.
ಸಂಚಾರ ದಟ್ಟಣೆಗೆ ಬೇಸತ್ತ ನಾಗರಿಕರು ಪಾಲಿಕೆಗೆ ಹಲವು ಬಾರಿ ದೂರು ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ನಗರಪಾಲಿಕೆ ಯೋಜಿತ ರೀತಿಯಲ್ಲಿ ಅತಿಕ್ರಮಣ ತೆರವುಗೊಳಿಸಲು ಕ್ರಮವಹಿಸಿದೆ.
ಪಾಲಿಕೆ ಅಧಿಕಾರಿಗಳಾದ ಪ್ರವೀಣ ಕಣಗಲೆ, ವಿವೇಕ ಜೋಶಿ, ವಿನಾಯಕ ಜಾಧವ, ಸಾಗರ, ವಿಶಾಲ ಲಟವಡೆ ಹಾಗೂ ಸಿಬ್ಬಂದಿ ಸೇರಿದಂತೆ ೨೦೦ ಜನರ ತಂಡ ಕಾರ್ಯಾಚರಣೆಯಲ್ಲಿ ಭಾಗವಹಿಸಿತ್ತು. ಅತಿಕ್ರಮಣ ತೆರವಿಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.