ಸಿಎ ಸಂಘಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ

ಸಂಜೀವ ದೇಶಪಾಂಡೆ
ಸಂಜೀವ ದೇಶಪಾಂಡೆ
Published on
ಬೆಳಗಾವಿ: ಭಾರತೀಯ ಲೆಕ್ಕ ಪರಿಶೋಧಕರ ಸಂಸ್ಥೆಯ ದಕ್ಷಿಣ ಭಾರತ ಪ್ರಾದೇಶಿಕ ಮಂಡಳಿ ಬೆಳಗಾವಿ ಶಾಖೆಗೆ ನೂತನ ಅಧ್ಯಕ್ಷರಾಗಿ ಸಂಜೀವ ಆರ್.ದೇಶಪಾಂಡೆ ಹಾಗೂ ಉಪಾಧ್ಯಕ್ಷರಾಗಿ ಸಚಿನ ಖಡಬಡಿ ಅಧಿಕಾರ ವಹಿಸಿಕೊಂಡರು.
ಈಚೆಗೆ ಜರುಗಿದ ಸಮಾರಂಭವನ್ನು ನಿರ್ಗಮಿತ ಅಧ್ಯಕ್ಷ ವೀರಣ್ಣ ಮುರಗೋಡ ಉದ್ಘಾಟಿಸಿದರು. ಪ್ರಸಾದ ಸೋಲಾಪುರಮಠ ಕಾರ್ಯದರ್ಶಿ, ವೀರಣ್ಣ ಮುರಗೋಡ ಖಜಾಂಚಿ, ಸಿಎ ವಿದ್ಯಾರ್ಥಿ ಘಟಕದ ಚೇರ್ಮನ್‌ರಾಗಿ ಯಾಸೀನ್ ದೇವಲಾಪುರ ಹಾಗೂ ಅನಿಲ ರಾಮದುರ್ಗ ಐಟಿಟಿ ಸಹ ಸಂಯೋಜಕರಾಗಿ ಅಧಿಕಾರ ವಹಿಸಿಕೊಂಡರು. ಹಿರಿಯ ಲೆಕ್ಕ ಪರಿಶೋಧಕ ಸತೀಶ ಮೆಹ್ತಾ ಪ್ರಮಾಣ ವಚನ ಬೋಧನೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net