ಪ್ರಧಾನಮಂತ್ರಿ ನರೇಂದ್ರ ಮೋದಿ ಸುದೀರ್ಘ ಸಾಧನೆ ಹಿನ್ನೆಲೆಯಲ್ಲಿ ಹಾರೂಗೇರಿಯಲ್ಲಿ ಬಿಜೆಪಿ ಕಾರ್ಯಕರ್ತರು ಮಾಜಿ ಶಾಸಕ ಪಿ.ರಾಜೀವ ನೇತೃತ್ವದಲ್ಲಿ ಸಂಭ್ರಮಾಚರಣೆ ಮಾಡಿದರು. ಶ್ರೀಧರ ಮೂಡಲಗಿ, ಜ್ಞಾನೇಶ್ವರ ಧರ್ಮಟ್ಟಿ, ಬಸವರಾಜ ಅರಕೇರಿ, ಬಸನಗೌಡ ಆಸಂಗಿ ಇತರರಿದ್ದರು.
ಪ್ರಧಾನಮಂತ್ರಿ ನರೇಂದ್ರ ಮೋದಿ ಸುದೀರ್ಘ 12 ವರ್ಷಗಳ ರಾಷ್ಟ್ರಸೇವೆ ಸಾಧನೆ ಹಿನ್ನೆಲೆಯಲ್ಲಿ ಚನ್ನವೃಷಭೇಂದ್ರ ದೇವರಕೊಂಡ ಅಜ್ಜನ ಮೂರ್ತಿಗೆ ಬುಧವಾರ ವಿಶೇಷ ಪೂಜೆ ನೆರವೇರಿಸಿ, ಕೆರೆ ಆವರಣದಲ್ಲಿ ಸಸಿ ನೆಟ್ಟು ಮಾತನಾಡಿದ ಅವರು, ಬಿಜೆಪಿ ಕಾರ್ಯಕರ್ತರು ಮೋದಿ ಸಾಧನೆಗಳನ್ನು ಎಲ್ಲರಿಗೂ ತಿಳಿಸಬೇಕು ಎಂದರು.
ಬಿಜೆಪಿ ಕುಡಚಿ ಮಂಡಲ ಅಧ್ಯಕ್ಷ ಶ್ರೀಧರ ಮೂಡಲಗಿ, ಪುರಸಭೆ ಅಧ್ಯಕ್ಷ ಜ್ಞಾನೇಶ್ವರ ಧರ್ಮಟ್ಟಿ, ಉಪಾಧ್ಯಕ್ಷ ಬಸವರಾಜ ಅರಕೇರಿ, ಮುಖಂಡರಾದ ಬಸನಗೌಡ ಆಸಂಗಿ, ವಸಂತ ಲಾಳಿ, ಸುನೀಲಗೌಡ ಪಾಟೀಲ, ಶಿವಗೊಂಡ ಧರ್ಮಟ್ಟಿ, ಹನುಮಂತ ಯಲಶೆಟ್ಟಿ, ಅಪ್ಪಾಸಾಹೇಬ ಕುಲಕರ್ಣಿ, ಡಿ.ಸಿ.ಸದಲಗಿ, ತಮ್ಮಾಣಿ ಕುರಿ ಇತರರಿದ್ದರು.