ಮನಸ್ಸಿಗೆ ಶಾಂತಿ ನೀಡುವ ಸಂಗೀತ

ಬೆಳಗಾವಿಯ ನಾಗಸುಧಾ ಸಂಗೀತ ಶಾಲೆಯಲ್ಲಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಜರುಗಿತು. ಲೇಖಕಿ ಆಶಾ ಯಮಕನಮರಡಿ ಉದ್ಘಾಟಿಸಿದರು. ಎಂ.ಎಸ್.ಸತ್ಯನಾರಾಯಣ, ಎಂ.ಜಿ.ರಾವ್, ಪೂರ್ಣಿಮಾ ಪತ್ತಾರ ಇತರರಿದ್ದರು.
ಬೆಳಗಾವಿಯ ನಾಗಸುಧಾ ಸಂಗೀತ ಶಾಲೆಯಲ್ಲಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಜರುಗಿತು. ಲೇಖಕಿ ಆಶಾ ಯಮಕನಮರಡಿ ಉದ್ಘಾಟಿಸಿದರು. ಎಂ.ಎಸ್.ಸತ್ಯನಾರಾಯಣ, ಎಂ.ಜಿ.ರಾವ್, ಪೂರ್ಣಿಮಾ ಪತ್ತಾರ ಇತರರಿದ್ದರು.
Published on
ಬೆಳಗಾವಿ: ಸಂಗೀತ ಮನಃಶಾಂತಿ ನೀಡುವ ಜಗತ್ತಿನ ಏಕೈಕ ಶಾಶ್ವತ ಕಲಾ ಮಾಧ್ಯಮವಾಗಿದೆ. ಇದಕ್ಕೆ ಎಂದಿಗೂ ಸಾವಿಲ್ಲ. ಆದರೆ ಇಂದು ಎಐ ಪ್ರವೇಶದಿಂದ ಈ ಕ್ಷೇತ್ರಕ್ಕೂ ಭಯ ಆವರಿಸಿಕೊಂಡಿದೆ ಎಂದು ಲೇಖಕಿ ಆಶಾ ಯಮಕನಮರಡಿ ಹೇಳಿದರು.
ನಗರದ ಟಿಳಕವಾಡಿಯ ನಾದಸುಧಾ ಸುಗಮ ಸಂಗೀತ ಶಾಲೆಯಲ್ಲಿ ಭಾನುವಾರ ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಇಂದು ದೇಶಭಕ್ತಿ ಗೀತೆ, ಭಕ್ತಿ ಗೀತೆ, ಭಾವಗೀತೆ ಮುಂತಾದ ಎಲ್ಲ ಪ್ರಕಾರದ ಗೀತೆಗಳನ್ನು ಮಕ್ಕಳಿಗೆ ಕಲಿಸಬೇಕಿದೆ. ಈ ಕ್ಷೇತ್ರದಲ್ಲೂ ತಂತ್ರಜ್ಞಾನ ಸಾಕಷ್ಟು ಮುಂದುವರಿದಿದೆ. ಆದರೆ ಎಷ್ಟೇ ಬದಲಾವಣೆಗಳಾದರೂ ಮೂಲ ಸಂಗೀತ ಉಳಿಸಿಕೊಂಡು ಹೋಗುವ ಕಾರ್ಯವಾಗಬೇಕು ಎಂದರು.
ಬಹುಭಾಷಾ ಸಂಗೀತ ಸಾಧಕಿ ಶ್ರೇಯಾ ಮನವಾಡಿಗೆ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು. ಸಂಗೀತ ವಿದ್ವಾನ್ ಎಂ.ಜಿ.ರಾವ್, ನಾದ ಸುಧಾ ಸಂಗೀತ ಶಾಲೆ ಸಂಸ್ಥಾಪಕ ಎಂ.ಎಸ್.ಸತ್ಯನಾರಾಯಣ, ಪೂರ್ಣಿಮಾ ಪತ್ತಾರ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net