ಮುರುಘೇಂದ್ರ ಶ್ರೀ ಬದುಕು ದಾರಿದೀಪ

ಅಥಣಿ ಗಚ್ಚಿನಮಠದಲ್ಲಿ ಹಮ್ಮಿಕೊಂಡಿದ್ದ ಜೀವನದರ್ಶನ ಪ್ರವಚನ ಉದ್ಘಾಟನಾ ಕಾರ್ಯಕ್ರಮದಲ್ಲಿ ಶಿವಬಸವ ಸ್ವಾಮೀಜಿ, ಸಿದ್ಧರಾಮ ಸ್ವಾಮೀಜಿ, ಪ್ರಕಾಶ ಮಹಾಜನ, ಶಿವಾನಂದ ದಿವಾನಮಳ ಇತರರಿದ್ದರು.
ಅಥಣಿ ಗಚ್ಚಿನಮಠದಲ್ಲಿ ಹಮ್ಮಿಕೊಂಡಿದ್ದ ಜೀವನದರ್ಶನ ಪ್ರವಚನ ಉದ್ಘಾಟನಾ ಕಾರ್ಯಕ್ರಮದಲ್ಲಿ ಶಿವಬಸವ ಸ್ವಾಮೀಜಿ, ಸಿದ್ಧರಾಮ ಸ್ವಾಮೀಜಿ, ಪ್ರಕಾಶ ಮಹಾಜನ, ಶಿವಾನಂದ ದಿವಾನಮಳ ಇತರರಿದ್ದರು.
Published on
ಅಥಣಿ: ಅಥಣಿ ನೆಲವನ್ನು ಪುಣ್ಯಭೂಮಿಯನ್ನಾಗಿಸಿ ಪಾವನಗೊಳಿಸಿದ ಮಹಾತಪಸ್ವಿ ಮುರುಘೇಂದ್ರ ಶಿವಯೋಗಿಗಳ ಬದುಕು ನಮಗೆಲ್ಲ ದಾರಿದೀಪ ಎಂದು ಗಚ್ಚಿನಮಠದ ಶಿವಬಸವ ಸ್ವಾಮೀಜಿ ಹೇಳಿದರು.
ಪಟ್ಟಣದ ಗಚ್ಚಿನಮಠದಲ್ಲಿ ಶಿವರಾತ್ರಿ ಅಂಗವಾಗಿ ಶನಿವಾರ ಹಮ್ಮಿಕೊಂಡಿದ್ದ ಜೀವನದರ್ಶನ ಪ್ರವಚನ ಉದ್ಘಾಟಿಸಿ ಮಾತನಾಡಿ, ಶ್ರೀಮಠಕ್ಕೆ ಆಗಮಿಸುವ ಭಕ್ತರಿಗೆ ಅರಿವು, ಆಚಾರ, ದಾಸೋಹದ ಮಹತ್ವ ತಿಳಿಸಿದರು. ಬಸವಣ್ಣನವರ ವಚನ ಬದುಕಿನಲ್ಲಿ ಅಳವಡಿಸಿಕೊಂಡು ಅದರಂತೆ ಸಾಗಿ ಮಹಾಶಿವಯೋಗಿಯಾದರು. ಅಸಂಖ್ಯಾತ ಭಕ್ತ ಸಮೂಹ ಹೊಂದಿರುವ ಗಚ್ಚಿನಮಠದ ಮಠಾಧಿಪತಿಯಾಗದೆ ಸೇವಕರಂತೆ ಕೆಲಸ ಮಾಡಿ, ಶಿಷ್ಯನನ್ನೇ ಮಠಾಧಿಪತಿಯನ್ನಾಗಿ ಮಾಡಿದ ಹಿರಿಮೆ ಅವರದು. ಅಂಥವರ ಆದರ್ಶದಿಂದ ಬದುಕನ್ನು ಹಸನಾಗಿಸಿಕೊಳ್ಳೋಣ ಎಂದರು.
ಮುಧೋಳ ಸಿದ್ಧಾರೂಢಮಠದ ಸಿದ್ಧರಾಮ ಸ್ವಾಮೀಜಿ ಮಾತನಾಡಿ, ಗಚ್ಚಿನ ಮಠದಲ್ಲಿ ಶಿವರಾತ್ರಿ ಅಂಗವಾಗಿ ಜರುಗುವ ಸಾಂಸ್ಕೃತಿಕ ಕಾರ್ಯಕ್ರಮಗಳು ಮಾದರಿಯಾಗಿದೆ. ಇಲ್ಲಿನ ಪ್ರವಚನಕ್ಕೆ ಆಗಮಿಸಿರುವುದು ಸಂತಸ ತಂದಿದೆ ಎಂದರು.
ಹಿರಿಯರಾದ ಪ್ರಕಾಶ ಮಹಾಜನ, ಶಿವಾನಂದ ದಿವಾನಮಳ, ಹನುಮಂತ ಕಾಲುವೆ, ಈರನಗೌಡ ಪಾಟೀಲ, ಬಸವರಾಜ ಕೋಟಿ, ಗಿರೀಶ ದಿವಾನಮಳ, ಸೋಮು ವಾಂಗಿ, ಅಶೋಕ ಹೊಸೂರ, ಚಿದಾನಂದ ನರಗಟ್ಟಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net