ಚಿಕ್ಕೋಡಿ: ಹಣಕಾಸಿನ ವಿಷಯಕ್ಕೆ ತಂದೆಯೇ ಮಗನ ಕೊಲೆ ಮಾಡಿ, ಹೃದಯಾಘಾತ ನಂಬಿ, ನಂತರ ಸಿಕ್ಕಿ ಬಿದ್ದ ಘಟನೆ ಪಟ್ಟಣದ ಇಂದಿರಾ ನಗರದಲ್ಲಿ ನಡೆದಿದ್ದು , ತಡವಾಗಿ ಬೆಳಕಿಗೆ ಬಂದಿದೆ.
ಪಟ್ಟಣ ಇಂದಿರಾ ನಗರದ ನಿವಾಸಿ ಬಾಳಾಸಾಹೇಬ ಉರ್ಫ ಕಿರಣ ನಿಜಗುಣಿ ಆಲೂರೆ ( ೩೧) ಕೊಲೆಯಾದ ಯುವಕ . ಈತನ ತಂದೆ ನಿಜಗುಣಿ ಆಲೂರೆ ಕೊಲೆ ಮಾಡಿರುವ ಆರೋಪಿ.
ಜ.5 ರಂದು ಕಿರಣನ ತಂದೆ ಹಣ ನೀಡುತ್ತೇನೆ ಎಂದು ತಾಲೂಕಿನ ಉಮರಾಣಿ ಬಳಿ ಕರೆಸಿ ಕುತ್ತಿಗೆಗೆ ವೈಯರ್‌ನಿಂದ ಬಿಗಿದು ಕೊಲೆ ಮಾಡಿದ್ದಾರೆ. ನಂತರ ಇದು ಸಹಜ ಹೃದಯಾಘಾತದಿಂದ ಸಾವಾಗಿದೆ ಎಂದು ನಾಟಕವಾಡಿ, ಅಂತ್ಯಸಂಸ್ಕಾರವನ್ನು ತರಾತುರಿಯಲ್ಲಿ ಮುಗಿಸಿದರು.
ಸ್ನೇಹಿತರಿಂದ ಪ್ರಕರಣ ಬೆಳಕಿಗೆ :
ಕೊಲೆಯಾದ ಕಿರಣ ಆಲೂರೆಯ ಅಂತ್ಯ ಸಂಸ್ಕಾರದ ವೇಳೆ ಕಿರಣ ಆಲೂರೆ ತಂದೆಯ ಆತುರದ ನಿರ್ಧಾರದಿಂದ ಸಂಶಯ ಮೂಡಿದೆ, ಮೃತದೇಹದ ಕುತ್ತಿಗೆ ಬಳಿ ಗಾಯಗಳು ಸಂಶಯ ಹೆಚ್ಚಿಸಿದೆ. ಮರುದಿನ ಕಿರಣ ಸ್ನೇಹಿತರು ಆರೋಪಿ ಕೆಲಸ ಮಾಡುತ್ತಿರುವ ಹೋಟೆಲ್ ಮಾಲೀಕನನ್ನು ವಿಚಾರಿಸಿದಾಗ ಸತ್ಯಾಂಶ ಹೊರ ಬಂದಿದೆ. ಹಣಕ್ಕಾಗಿ ತಂದೆ ಮಗನ ನಡುವೇ ಕುಟುಂಬದಲ್ಲಿ ಜಗಳವಾಗುತ್ತಿತ್ತು. ಇದರಿಂದ ಕುಪಿತಗೊಂಡ ಕೊಲೆ ಮಾಡಿದ ಆರೋಪಿ ನಿಜಗುಣಿ ಆಲೂರೆ ಒಪ್ಪಿಕೊಂಡಿದ್ದಾನೆ. ಈ ಕುರಿತು ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ ಚಿಕ್ಕೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.