ಮುರಗೋಡ ಬಳೆಗೆ ಘಟಕದ ಮೆರುಗು

ಮುರಗೋಡ ಬಳೆ ತಯಾರಿ
ಮುರಗೋಡ ಬಳೆ ತಯಾರಿ
Published on
ಡಿ.ವಿ.ಕಮ್ಮಾರ
ಬೆಳಗಾವಿ : ಫ್ಯಾನ್ಸಿ ಬಳೆಗಳಫ್ಯಾನ್ಸಿ ಬಳೆಗಳ ಹಾವಳಿ ನಡುವೆಯೂ ಸಾಂಪ್ರದಾಯಿಕ ಗಾಜಿನ ಬಳೆ ತಯಾರಿಕೆಯನ್ನು ಇಂದಿಗೂ ಜೀವಂತವಾಗಿಟ್ಟುಕೊಂಡಿರುವ ಬೈಲಹೊಂಗಲ ತಾಲೂಕಿನ ಮುರಗೋಡ ಗ್ರಾಮದಲ್ಲಿ ದೇಶದ ಎರಡನೇ ಹಾಗೂ ದಕ್ಷಿಣ ಭಾರತದ ಮೊದಲ ಅತ್ಯಾಧುನಿಕ ಬಳೆ ತಯಾರಿಕಾ ಘಟಕ ಸ್ಥಾಪನೆಯಾಗಲಿದೆ.
ಉತ್ತರ ಪ್ರದೇಶ ರಾಜ್ಯದ ಫಿರೋಜಾಬಾದ್‌ನಲ್ಲಿ ಮಾತ್ರ ಬಳೆ ತಯಾರಿಕೆಯ ದೊಡ್ಡ ಘಟಕವಿದ್ದು, ದಕ್ಷಿಣ ಭಾರತದಲ್ಲಿ ಎಲ್ಲೂ ಇಲ್ಲ. ಈಗ ?ರೋಜಾಬಾದ್ ಮಾದರಿಯಲ್ಲೇ ಮುರಗೋಡದಲ್ಲೂ ಅತ್ಯಾಧುನಿಕ ಬಳೆ ತಯಾರಿಕಾ ಘಟಕ ಸ್ಥಾಪಿಸಲು ಕಾರ್ಮಿಕರೇ ಕಟ್ಟಿಕೊಂಡ ಸಂಸ್ಥೆ ‘ಮುರಗೋಡ ಬಳೆ ತಯಾರಿಕಾ ಫೌಂಡೇಶನ್ ಮುಂದಾಗಿದ್ದು, ಸರ್ಕಾರ ಗ್ರಾಮದ ಹೊರಗೆ ಐದು ಎಕರೆ ಜಾಗವನ್ನು 35 ವರ್ಷಗಳಿಗೆ ಉಚಿತವಾಗಿ ಗುತ್ತಿಗೆ ನೀಡಿದೆ. ಈಚೆಗೆ ಸಚಿವ ಸಂಪುಟದಲ್ಲಿ ಇದಕ್ಕೆ ಒಪ್ಪಿಗೆ ನೀಡಲಾಗಿದೆ.
ಸದ್ಯ ಗ್ರಾಮದಲ್ಲಿ 30 ಘಟಕಗಳಲ್ಲಿ 1,500ಕ್ಕೂ ಹೆಚ್ಚು ಜನ ಬಳೆ ತಯಾರಿಕೆಯಲ್ಲಿ ತೊಡಗಿದ್ದಾರೆ. ಈಚೆಗೆ ಫ್ಯಾನ್ಸಿ ಬಳೆ ಹಾವಳಿಯಿಂದ ಗಾಜಿನ ಬಳೆಗಳಿಗೆ ಬೇಡಿಕೆ ಕಡಿಮೆಯಾಗಿದ್ದರೂ, ಪೂಜಾ ಕಾರ್ಯಗಳಿಗೆ ಈ ಬಳೆಗಳೇ ಬೇಕಿದ್ದರಿಂದ ಬೇಡಿಕೆ ಇದ್ದು, ಲಾಭ-ನಷ್ಟದ ಲೆಕ್ಕ ಹಾಕದೇ ವೃತ್ತಿ ಮುಂದುವರಿಸಿದ್ದಾರೆ. ಇವರಿಗೆ ಬೇರೆ ಉದ್ಯೋಗವೂ ಗೊತ್ತಿಲ್ಲ. ಹೀಗಾಗಿ, ಈಚಿನ ಪೀಳಿಗೆಯ ಯುವಕರು, ಬಳೆ ತಯಾರಿಕೆಗೆ ಹೊಸ ಸ್ಪರ್ಶ ನೀಡುವ ಸಂಕಲ್ಪ ಮಾಡಿದ್ದು, ಘಟಕ ಸ್ಥಾಪನೆಗೆ ಮಹೂರ್ತ ಕೂಡಿ ಬಂದಿದೆ.
2018ರಲ್ಲಿ ಫೌಂಡೇಷನ್ ಮಾಡಿಕೊಂಡು ಬಳಿಕ ?ರೋಜಾಬಾದ್‌ಗೆ ತೆರಳಿ, ಅಲ್ಲಿನ ಘಟಕಗಳನ್ನು ನೋಡಿಕೊಂಡು ಬಂದು, ತಾವೇ ಒಂದು ಕ್ರಿಯಾಯೋಜನೆ ಸಿದಟಛಿಪಡಿಸಿ, ಜಿಲ್ಲಾ ಕೈಗಾರಿಕಾ ಕೇಂದ್ರದ ಮೂಲಕ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದ್ದರು. ಸ್ಥಳೀಯ ಶಾಸಕರ ಮೂಲಕವೂ ಸರ್ಕಾರದ ಮೇಲೆ ಒತ್ತಡ
ಹಾಕಿದ್ದರು. ಈಗ ಜಾಗ ಸಿಕ್ಕಿರುವುದರಿಂದ ಸದ್ಯ ಕಟ್ಟಿಗೆ ಬಳಸುತ್ತಿರುವ
ಭಟ್ಟಿಗಳನ್ನೆಲ್ಲ ಒಂದೇ ಸೂರಿನಡಿ ತಂದು, ಗ್ಯಾಸ್ ಮೂಲಕ ಗಾಜಿನ
ದ್ರವ ಕಾಯಿಸುವ ತಂತ್ರಜ್ಞಾನ ಬಳಸುವ ಯೋಜನೆ ರೂಪಿಸಿದ್ದಾರೆ.
ಬಳೆ ತಯಾರಿಕೆ ವಿಧಾನ
ಸದ್ಯ ಭಟ್ಟಿಯಲ್ಲಿ ಮಣ್ಣಿನ ಮಡಿಕೆಯಿಟ್ಟು, ಒಂದು ರಂಧ್ರದ ಮೂಲಕ ಬೆಂಕಿ ಹಾಕಿ ಆರು ಒಲೆಗಳಲ್ಲಿನ ಮಡಿಕೆಯಲ್ಲಿ ಗಾಜಿನ ಚೂರುಗಳನ್ನು ಕಾಯಿಸಿ, ಒಂದೊಂದು
ಒಲೆ ಮುಂದೆ ಇಬ್ಬರು ಕುಳಿತುಕೊಂಡು, ಒಬ್ಬರು ಮಡಿಕೆಯಿಂದ ಗಾಜಿನ ದ್ರವ ಪುಟ್ಟ ಗೋಲಿಯಷ್ಟು ತೆಗೆದುಕೊಂಡು, ತಿರುಗಿಸುತ್ತ, ಉಂಗುರಾಕೃತಿಗೆ ತಂದ ತಕ್ಷಣ ಪಕ್ಕದಲ್ಲಿರುವವರು, ಶಂಕಾಕೃತಿ ಉಪಕರಣಕ್ಕೆ ಅದನ್ನು ಸಿಕ್ಕಿಸಿ ಬಳೆ ರೂಪ ನೀಡುತ್ತಾರೆ. ಇದೆಲ್ಲವೂ 15 ಸೆಕೆಂಡ್‌ನಲ್ಲಿ ಮುಗಿಯಬೇಕು. ಅಷ್ಟು ತೀವ್ರಗತಿಯಲ್ಲಿ ಇವರ ಕೈಗಳು ಕೆಲಸ ಮಾಡಬೇಕು.
"

ಮೊದಲು ಮಿರಜನಲ್ಲಿ ಸಿಗುತ್ತಿದ್ದಬಳೆ ಚೂರುಗಳು ಈಗ ಸಿಗುತ್ತಿಲ್ಲ.ಕಟ್ಟಿಗೆ ಬೆಲೆಯೂ ಹೆಚ್ಚಾಗಿದೆ. ಆದರೂವೃತ್ತಿಯನ್ನು ಉಳಿಸಿ, ಬೆಳೆಸಲುಆಧುನಿಕ ಯಂತ್ರೋಪಕರಣ,ತಂತ್ರಜ್ಞಾನ ಬಳಿಸಿ ಗ್ಯಾಸ್ ಮೂಲಕಇತರೆ ಗಾಜುಗಳನ್ನು ಕರಗಿಸಿ, ಬಳೆಜತೆಗೆ ಗಾಜಿನ ಆಲಂಕಾರಿಕ ವಸ್ತುಗಳನ್ನು ತಯಾರಿಸುವಯೋಜನೆ ರೂಪಿಸಿದ್ದೇವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net