ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ರಕ್ತದಾನ ಶಿಬಿರ, ಶುದ್ಧ ಕುಡಿಯುವ ನೀರಿನ ಘಟಕ ಅಳವಡಿಕೆ, ಪ್ರತಿ ಗುರುವಾರ ಸರ್ಕಾರಿ ಆಸ್ಪತ್ರೆಗಳ ಹತ್ತಿರ 200 ಜನ ಅಗತ್ಯ ಇರುವವರಿಗೆ ಪೌಷ್ಟಿಕ ಆಹಾರ ವಿತರಣೆ, ಕೃತಕ ಜೈಪುರ ಕಾಲು ಜೋಡಣೆಯಂತಹ ಕಾರ್ಯ ಮಾಡಿದ್ದೇವೆ. ಈಗ ಹೊಸದಾಗಿ ಶಾಲಾ-ಕಾಲೇಜುಗಳ ವಿದ್ಯಾರ್ಥಿನಿಯರಿಗೆ ಕ್ಲಬ್‌ನಿಂದ ಶೌಚಾಲಯ ನಿರ್ಮಿಸಿಕೊಡಲು ನಿಧಿ ಸಂಗ್ರಹಿಸಲು ಈ ಸ್ಪರ್ಧೆ ಆಯೋಜಿಸಿದ್ದೇವೆ ಎಂದರು.