ಬೆಳಗಾವಿ ನಗರವು ಅತೀ ವೇಗದಿಂದ ಬೆಳೆಯುತ್ತಿದೆ. ಬೆಂಗಳೂರು ನಂತರ ಎರಡನೆಯ ರಾಜಧಾನಿ ಎಂದು ಪರಿಗಣಿಸಲ್ಪಡುವ ನಗರ, ಶಿಕ್ಷಣ, ಉದ್ಯಮಿಕರಣ, ಆರೋಗ್ಯ ಸೇವೆ, ಕೃಷಿ ಇತ್ಯಾದಿ ರಂಗದಲ್ಲಿ ಸಾಕಷ್ಟು ಪ್ರಗತಿ ಸಾಧಿಸುತ್ತಲ್ಲಿದೆ. ಈ ಮಾರ್ಗದಲ್ಲಿ ಸ್ಲೀಪರ್ ವಂದೇ ಭಾರತ ರೈಲು ಸಂಚಾರ ಪ್ರಾರಂಭಿಸಿದಲ್ಲಿ ಬೆಳಗಾವಿ ಸುತ್ತಮುತ್ತಲಿನ ತಾಲೂಕುಗಳ ಹಾಗೂ ಇತರೆ ಜಿಲ್ಲೆಗಳ ಅಭಿವೃದ್ಧಿಗೆ ಸಹಾಯಕಾರಿಯಾಗಲಿದೆ ಎಂದು ಮನವಿನಲ್ಲಿ ಕೇಳಿದ್ದಾರೆ.