50ಕ್ಕೂ ಹೆಚ್ಚು ಜನ ನೇತ್ರ ಶಸಚಿಕಿತ್ಸೆಗೆ ಆಯ್ಕೆ

ಸಂಬರಗಿ ಸಮೀಪದ ಶಿನಾಳ ಗ್ರಾಮದ ವಿಠ್ಠಲ-ರುಕ್ಷ್ಮಿಣಿ ದೇವಸ್ಥಾನದಲ್ಲಿ ಜನ್ಮದಿನದ ಅಂಗವಾಗಿ ಮಾಜಿ ಸಚಿವ ಶ್ರೀಮಂತ ಪಾಟೀಲ ಸಂತರೊಂದಿಗೆ ಕೀರ್ತನೆ ಮಾಡಿದರು. ಶ್ರೀನಿವಾಸ ಪಾಟೀಲ, ಯೋಗೇಶ ಪಾಟೀಲ, ಯೋಗೇಶ ಪಾಟೀಲ, ಅಪ್ಪಾಸಾಹೇಬ ಅವತಾಡೆ ಇತರರಿದ್ದರು.
ಸಂಬರಗಿ ಸಮೀಪದ ಶಿನಾಳ ಗ್ರಾಮದ ವಿಠ್ಠಲ-ರುಕ್ಷ್ಮಿಣಿ ದೇವಸ್ಥಾನದಲ್ಲಿ ಜನ್ಮದಿನದ ಅಂಗವಾಗಿ ಮಾಜಿ ಸಚಿವ ಶ್ರೀಮಂತ ಪಾಟೀಲ ಸಂತರೊಂದಿಗೆ ಕೀರ್ತನೆ ಮಾಡಿದರು. ಶ್ರೀನಿವಾಸ ಪಾಟೀಲ, ಯೋಗೇಶ ಪಾಟೀಲ, ಯೋಗೇಶ ಪಾಟೀಲ, ಅಪ್ಪಾಸಾಹೇಬ ಅವತಾಡೆ ಇತರರಿದ್ದರು.
Published on
ಕಾಗವಾಡ: ಮಾಜಿ ಸಚಿವ ಶ್ರೀಮಂತ ಪಾಟೀಲ ಜನ್ಮದಿನದ ಅಂಗವಾಗಿ ಶ್ರೀಮಂತ ಪಾಟೀಲ ಫೌಂಡೇಷನ್ ವತಿಯಿಂದ ಮಿರಜ್‌ನ ಸೇವಾಸದನ ಆಸ್ಪತ್ರೆ ಸಹಯೋಗದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಆರೋಗ್ಯ ಶಿಬಿರದಲ್ಲಿ ಸಾವಿರಾರು ಜನರು ಲಾಭ ಪಡೆದುಕೊಂಡಿದ್ದಾರೆ ಎಂದು ಫೌಂಡೇಷನ್ ಸಂಘಟಕ ಸಚಿನ ದೇಸಾಯಿ ಮತ್ತು ಅಬ್ದುಲ್ ಗಡ್ಡೇಕರ ತಿಳಿಸಿದರು.
ಈ ಕುರಿತು ಭಾನುವಾರ ಮಾಹಿತಿ ನೀಡಿದ ಅವರು, ನೇತ್ರ ತಪಾಸಣೆ ಮಾಡಿಸಿಕೊಂಡ ನೂರಾರು ಜನರಿಗೆ ಉಚಿತ ಕನ್ನಡಕ ವಿತರಿಸಲಾಯಿತು. 50ಕ್ಕೂ ಹೆಚ್ಚು ಜನರನ್ನು ಶಸ್ತ್ರಚಿಕಿತ್ಸೆಗಾಗಿ ಸಾಂಗಲಿಯ ನಂದಾದೀಪ ಕಣ್ಣಿನ ಆಸ್ಪತ್ರೆಗೆ ಕಳುಹಿಸಿಕೊಡಲಾಗಿದೆ. 700ಕ್ಕೂ ಹೆಚ್ಚು ಹೃದಯ ಸಂಬಂಧಿತ ಇಸಿಜಿ, ಎಂಜಿಯೋಗ್ರಾಫಿ, ಎಂಜಿಯೋಪ್ಲಾಸ್ಟಿ, ಬೈಪಾಸ್ ಸರ್ಜರಿ ಹಾಗೂ ಚಿಕ್ಕಮಕ್ಕಳ ಶಸ್ತ್ರಚಿಕಿತ್ಸೆಗಾಗಿ ಶಿಫಾರಸು ಮಾಡಲಾಗಿದೆ.ರಕ್ತದಾನ ಶಿಬಿರದಲ್ಲಿ ಹಲವಾರು ಜನರು ರಕ್ತದಾನ ಮಾಡಿದರು ಎಂದರು.
ಶ್ರೀಮಂತ ಪಾಟೀಲ ಫೌಂಡೇಷನ್ ಅಧ್ಯಕ್ಷ ಶ್ರೀನಿವಾಸ ಪಾಟೀಲ, ಸಂಘಟಕ ಸಚಿನ ದೇಸಾಯಿ, ಸಂಜಯಕುಮಾರ ಕಾಯಪುರೆ, ಅಬ್ದುಲ್ ಗಡ್ಡೇಕರ, ವಸಂತ ಪಾಟೀಲ, ಭರತ ಪಾಟೀಲ, ಶೇಖರ ಕಿನಂಗೆ, ಅಭಿಜಿತ್ ಕಿತ್ತೂರೆ, ತಮ್ಮಣ್ಣ ಚೌಗುಲೆ, ವಿನಾಯಕ ಶಿಂಧೆ, ರಾಜು ಮಾನೆ, ರಮೇಶ ಘೋಡಸೆ, ರಾಜು ಡೊಳ್ಳಿ, ದೀಪಕ ಕಾಂಬಳೆ, ಕೃಷ್ಣಾ ಪಾಟೀಲ, ಮಂಜುನಾಥ ಮಗದುಮ್ಮ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net