ಜನರಿಗೆ 1 ಕ್ಕೆ 4 ಪಟ್ಟು ಹಣ ತಯಾರಿಸಿ ಕೊಡುತ್ತೇವೆಂದು ನಂಬಿಸಿ, ನಾವು ಕೊಡುವ ಕಪ್ಪು ಬಣ್ಣದ ಖಾಲಿ(ಐನೂರರ ನೋಟಿನ ಗಾತ್ರ) ಹಾಳೆಗಳನ್ನು ಕೆಮಿಕಲ್‌ಗೆ ಹಾಕಿ ಮಷಿನದಲಿ ್ಲ ಸ್ವಲ್ಪ ಬಿಸಿ ಮಾಡಿ ತೊಳೆದರೆ 500ರೂ. ನೋಟು ತಯಾರಾಗುತ್ತದೆ ನಂಬಿಸಿದ್ದರು. ಇದಕ್ಕಾಗಿ ತಮ್ಮ ಬಳಿ ಬರುವವರು ಕೊಡುವ ಹಣಕ್ಕೆ ನಾಲ್ಕು ಪಟ್ಟು ಆಗುವಷ್ಟು ಖಾಲಿ ನೋಟಿನ ಹಾಳೆ, ಕೆಮಿಕಲ್ ಮತ್ತು ಬಿಸಿ ಮಾಡುವ ಮಷಿನ್, ತೊಳೆಯುವ ಬಿಳಿ ಪುಡಿ ಕೊಡುತ್ತಿದ್ದರು. ಇದನ್ನು ತೆಗೆದುಕೊಂಡು ಹೋದವರು ನೋಟು ಮಾಡಲು ಪ್ರಯತ್ನಿಸಿದಾಗ ಯಾವುದೇ ಪ್ರಯೋಜನವಾಗುತ್ತಿರಲಿಲ್ಲ. ಏಕೆಂದರೆ ಡೆಮೋ ತೋರಿಸುವಾಗ, ನಿಜವಾದ ಐನೂರು ಮುಖಬೆಲೆ ನೋಟಿಗೆ ಮೊದಲೇ ಕಪ್ಪು ಮಸಿ ಹಚ್ಚಿ ತಮ್ಮ ಬಳಿ ಇಟ್ಟುಕೊಳ್ಳುತ್ತಿದ್ದ ಈ ವಂಚಕರು, ಅದನ್ನೇ ಕೆಮಿಕಲ್‌ನಲ್ಲಿ ಹಾಕಿ, ಬಿಸಿ ಮಾಡಿ ಬಳಿಕ ಬಿಳಿ ಪುಡಿಯಿಂದ ತೊಳೆದು ನೋಟು ಮೂಡಿ ಬಂದಂತೆ ತೋರಿಸುತ್ತಿದ್ದರು. ಆದರೆ ಖರೀದಿಸಿದವರಿಗೆ ಕಪ್ಪು ಬಣ್ಣದ ಖಾಲಿ ಹಾಳೆಗಳ ಬಂಡಲ್‌ಗಳನ್ನು ಜನರಿಗೆ ಕೊಟ್ಟು ವಂಚಿಸುತ್ತಿದ್ದರು. ಅದು ತೊಳೆದಾಗ ಬಿಳಿಯಾಗುತ್ತಿತ್ತು ಹೊರತು ನೋಟುಗಳು ಮೂಡುತ್ತಿರಲಿಲ್ಲ ಎಂದು ವಿವರಿಸಿದರು.