ಬೆಳಗಾವಿ: ಆರ್‌ಎಸ್‌ಎಸ್ ಅಖಿಲ ಭಾರತೀಯ ಪ್ರಾಂತ ಪ್ರಚಾರಕರ ಸಭೆ ಹಿನ್ನೆಲೆಯಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸರಸಂಘಚಾಲಕ ಮೋಹನ ಭಾಗವತ ಸೋಮವಾರ ಬೆಳಗಾವಿಗೆ ಆಗಮಿಸಿದರು. ಹೈದರಾಬಾದ್‌ನಿಂದ ವಿಶೇಷ ವಿಮಾನದಲ್ಲಿ ಬಂದಿಳಿದ ಅವರು, ಜು.14ರವರೆಗೆ ವಾಸ್ತವ್ಯ ಮಾಡಲಿದ್ದಾರೆ. ಜು.10ರಿಂದ 12ರವರೆಗೆ ಮೂರು ದಿನ ಸಭೆ ಆಯೋಜಿಸಿದ್ದು, ಸರಸಂಘಚಾಲಕರೊಬ್ಬರು ಇಷ್ಟು ಸುದೀರ್ಘ ದಿನಗಳ ಕಾಲ ಬೆಳಗಾವಿಯಲ್ಲಿ ತಂಗುತ್ತಿರುವುದು ಇತಿಹಾಸದಲ್ಲೇ ಇದೇ ಮೊದಲು. ಭಾಗವತ ವಾಸದ ಹಿನ್ನೆಲೆಯಲ್ಲಿ ಶಾಸ್ತ್ರೀನಗರದ ಗೂಡ್ಸ್‌ಶೆಡ್ ರಸ್ತೆಯಲ್ಲಿರುವ ಸಂಘದ ಕಚೇರಿಯ ಜಗನ್ನಾಥರಾವ್ ಜೋಶಿ ಸ್ಮಾರಕ ಭವದ ಸುತ್ತಮುತ್ತ ತೀವ್ರ ನಿಗಾ ವಹಿಸಲಾಗಿದೆ. ಸಂಘದ ಕಚೇರಿ ಜತೆಗೆ ಉದ್ಯಮಬಾಗದ ೌಂಡ್ರಿ ಕ್ಲಸ್ಟರ್, ಅನಗೋಳದ ಸಂತ ಮೀರಾ ಸ್ಕೂಲ್‌ನಲ್ಲಿ ಮೂರು ದಿನ ಸಭೆಗಳಾಗಲಿದ್ದು, 2 ಕಿಮೀ ವ್ಯಾಪ್ತಿಯಲ್ಲಿ ಡ್ರೋನ್ ಹಾರಾಟ ನಿಷೇಧಿಸಲಾಗಿದೆ. ಒಟ್ಟು 250 ಪ್ರತಿನಿಧಿಗಳು ಬೈಠಕ್‌ಗಳಲ್ಲಿ ಭಾಗಿಯಾಗಲಿದ್ದಾರೆ.