ಕುಡಿಯುವ ನೀರು, ಸ್ವಚ್ಛತೆ, ರಸ್ತೆ, ವಿದ್ಯುತ್ ಸೇರಿದಂತೆ ಭಕ್ತರಿಗೆ ಅಗತ್ಯವಿರುವ ಎಲ್ಲ ಸೌಲಭ್ಯ ಒದಗಿಸಲು. ಜಾತ್ರೆ ಸಂದರ್ಭದಲ್ಲಿ ಅನ್ನದಾಸೋಹ, ಅಡುಗೆ ಅನಿಲ ಪೂರೈಕೆ ಹಾಗೂ ಸುರಕ್ಷತಾ ನಿಯಮ ಪಾಲಿಸುವ ಬಗ್ಗೆ ಕೂಡ ಚರ್ಚೆ ನಡೆಯಿತು. ಸವದತ್ತಿ ನಗರದ ಘನತೆ ಹೆಚ್ಚಿಸಲು ಸಕಲ ಸಿದ್ಧತೆ ಭರದಿಂದ ಸಾಗುತ್ತಿವೆ ಎಂದು ಶಾಸಕ ವಿಶ್ವಾಸ ವೈದ್ಯ ಹೇಳಿದರು.