ರಜಾ ದಿನಗಳಲ್ಲಿ ಮತ್ತು ಸಂಜೆ ಹೊತ್ತಿನಲ್ಲಿ ಟ್ಯೂಷನ್ ಕ್ಲಾಸ್‌ಗಳಿಗೆ ಎಸ್ಸೆಸ್ಸೆಲ್ಸಿ ಹಾಗೂ ಅದಕ್ಕಿಂತ ಕೆಳಗಿನ ತರಗತಿ ಮಕ್ಕಳು ಬೈಕ್, ಸ್ಕೂಟರ್ ತೆಗೆದುಕೊಂಡು ಬರುತ್ತಿದ್ದಾರೆ. ಹೀಗೆ ಬಂದ ಮಕ್ಕಳು ಸುಮ್ಮನೆ ಮನೆಗಳಿಗೆ ಹೋಗುತ್ತಿಲ್ಲ. ಕೆಲವು ಕಡೆ, ಬೈಕ್ ರೇಸ್, ವೀಲಿಂಗ್ ಮಾಡುವ ದುಸ್ಸಾಹಸಕ್ಕೂ ಇಳಿಯುತ್ತಿದ್ದಾರೆ. ಕೆಲ ಮಕ್ಕಳು ತಂಡ ಕಟ್ಟಿಕೊಂಡು ರಾಜಹಂಸಗಡ ಕೋಟೆ, ಕಣಬರ್ಗಿ ಸಿದ್ಧೇಶ್ವರ ದೇವಸ್ಥಾನ, ವೈಜನಾಥ ಮಂದಿರ, ಭೂತನಾಥ ಬೆಟ್ಟಗಳಿಗೆ ಬೈಕ್ ಟ್ರಿಪ್ ಮಾಡುತ್ತಿದ್ದಾರೆ. ಇವರೊಂದಿಗೆ ಅಪ್ರಾಪ್ತೆಯರೂ ತೆರಳುತ್ತಿದ್ದು ಪಾಲಕರು ಎಚ್ಚೆತ್ತುಕೊಳ್ಳುತ್ತಿಲ್ಲ.