ಬೆಳಗಾವಿಯಲ್ಲಿ ಶನಿವಾರ ಡಾ.ಪ್ರಭಾಕರ ಕೋರೆ ಅವರನ್ನು ಸಚಿವ ವಿ.ಸೋಮಣ್ಣ ಸನ್ಮಾನಿಸಿದರು. ಮಹಾಂತೇಶ ಕವಟಗಿಮಠ, ರಮೇಶ ಕತ್ತಿ, ಸುಭಾಸ ಪಾಟೀಲ ಇತರರಿದ್ದರು.
Published on:
Copied
Follow Us
ಬೆಳಗಾವಿ: ಶಿಕ್ಷಣ, ಕೃಷಿ ಹಾಗೂ ಆರೋಗ್ಯ ಕ್ಷೇತ್ರದಲ್ಲಿ ಡಾ.ಪ್ರಭಾಕರ ಕೋರೆ ಕೊಡುಗೆ ಅಪಾರವಾದುದು. ಅವರ ಸಮಾಜಮುಖಿ ಸೇವೆ, ಧಾರ್ಮಿಕತೆಯ ಮನಸ್ಸು ಅವರನ್ನು ಎತ್ತರಕ್ಕೆ ಬೆಳೆಸಿದೆ ಎಂದು ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಶ್ಲಾಘಿಸಿದರು.
ನಗರದ ಡಾ.ಪ್ರಭಾಕರ ಕೋರೆಯವರ ಸ್ವಗೃಹಕ್ಕೆ ಶನಿವಾರ ಆಗಮಿಸಿ, ಪದ್ಮಶ್ರೀಗೆ ಭಾಜನರಾಗಿದ್ದಕ್ಕಾಗಿ ಸತ್ಕರಿಸಿ ಬಳಿಕ ಕುಶಲೋಪಹರಿ ವಿಚಾರಿಸಿ ಮಾತನಾಡಿದ ಅವರು, ಕೆಎಲ್‌ಇ ಸಂಸ್ಥೆಯನ್ನು ಜಾಗತಿಕವಾಗಿ ವಿಸ್ತರಿಸಿದ ಕೋರೆ ಅವರು ಸಮಾಜ ಸೇವೆಯನ್ನು ಒಂದು ವ್ರತವನ್ನಾಗಿಸಿ ಸ್ವೀಕರಿಸಿ ಶ್ರಮಿಸಿದವರು. ಯುವಶಕ್ತಿಗೆ ಒಂದು ರೋಲ್ ಮಾಡೆಲ್ ಆಗಿರುವ ಅವರು ಶತಮಾನ ಕಂಡ ಅಭೂತರ್ಪೂವ ವ್ಯಕ್ತಿ ಎಂದು ಬಣ್ಣಿಸಿದರು.
ರಾಜ್ಯ ಸರ್ಕಾರದ ಮಾಜಿ ಮುಖ್ಯ ಸಚೇತಕ, ಕೆಎಲ್‌ಇ ಸಂಸ್ಥೆಯ ನಿರ್ದೇಶಕ ಮಹಾಂತೇಶ ಕವಟಗಿಮಠ, ಮಾಜಿ ಸಂಸದ ರಮೇಶ ಕತ್ತಿ, ಸುಭಾಸ ಪಾಟೀಲ, ಮಲ್ಲಿಕಾರ್ಜುನ ಮಾದಮ್ಮನವರ ಇತರರಿದ್ದರು.