ಎಸ್‌ಐಆರ್‌ನಲ್ಲೂ ಭಾಷಾ ಕೊಂಕು ತೆಗೆದ ಎಂಇಎಸ್

ಎಸ್‌ಐಆರ್ ನಮೂನೆಗಳನ್ನು ತ್ರಿಭಾಷೆಯಲ್ಲಿ ನೀಡುವಂತೆ ಆಗ್ರಹಿಸಿ ಅನಗೋಳ ನಿವಾಸಿಗಳು ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟಿಸಿದರು. ವಿನಾಯಕ ಗುಂಜಟಕರ, ಬಾಹು ಕಾವಳೆ, ಚಂದ್ರಕಾಂತ ಗೊಂಡವಾಡ್ಕರ, ಜ್ಯೋತಿಬಾ ಯಳ್ಳೂರಕರ ಇತರರಿದ್ದರು.
ಎಸ್‌ಐಆರ್ ನಮೂನೆಗಳನ್ನು ತ್ರಿಭಾಷೆಯಲ್ಲಿ ನೀಡುವಂತೆ ಆಗ್ರಹಿಸಿ ಅನಗೋಳ ನಿವಾಸಿಗಳು ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟಿಸಿದರು. ವಿನಾಯಕ ಗುಂಜಟಕರ, ಬಾಹು ಕಾವಳೆ, ಚಂದ್ರಕಾಂತ ಗೊಂಡವಾಡ್ಕರ, ಜ್ಯೋತಿಬಾ ಯಳ್ಳೂರಕರ ಇತರರಿದ್ದರು.
Published on
ಬೆಳಗಾವಿ : ಜಿಲ್ಲೆಯ ಮರಾಠಿ ಭಾಷಿಕ ಪ್ರದೇಶಗಳಲ್ಲಿ ಎಸ್‌ಐಆರ್ ಪ್ರಕ್ರಿಯೆಗೆ ಮರಾಠಿ ನಮೂನೆಗಳನ್ನೇ ಬಳಸಬೇಕು. ಮರಾಠಿ ಪ್ರತಿಗಳು ಲಭ್ಯವಾಗುವವರೆಗೂ ಎಸ್‌ಐಆರ್ ಪ್ರಕ್ರಿಯೆ ಸ್ಥಗಿತಗೊಳಿಸಬೇಕು ಎಂದು ಎಂಇಎಸ್ ಸರ್ಕಾರ ಹಾಗೂ ಚುನಾವಣಾ ಆಯೋಗವನ್ನು ಆಗ್ರಹಿಸಿದೆ.
ಈ ಸಂಬಂಧ ಶುಕ್ರವಾರ ಮಹಾನಗರ ಪಾಲಿಕೆ ಎದುರು ಪ್ರತಿಭಟಿಸಿದ ಪಾಲಿಕೆಯ ಎಂಇಎಸ್ ಹಾಲಿ ಮತ್ತು ಮಾಜಿ ಸದಸ್ಯರು ಮತ್ತು ಮುಖಂಡರು, ಪಾಲಿಕೆ ಆಯುಕ್ತರಿಗೆ ಮನವಿ ಸಲ್ಲಿಸಿದರು.
ಬೆಳಗಾವಿ ದಕ್ಷಿಣ ವಿಧಾನ ಸಭಾ ಕ್ಷೇತ್ರ ಸೇರಿದಂತೆ ಅನೇಕ ಕಡೆಗಳಲ್ಲಿ ಮರಾಠಿ ಭಾಷಿಕ ಪ್ರದೇಶಗಳಲ್ಲಿ ಈ ಹಿಂದೆಯೇ ಮರಾಠಿಯನ್ನು ಭಾರತದ ಚುನಾವಣಾ ಆಯೋಗವು ಅನುಮೋದಿತ ಭಾಷೆಯಾಗಿ ಪರಿಗಣಿಸಿದೆ. ಈ ಹಿಂಧೆ ಮತದಾರರ ಪಟ್ಟಿ ಮತ್ತು ಚುನಾವಣೆಗೆ ಸಂಬಂಧಿಸಿದ ಸಾಮಗ್ರಿಗಳಿಗಳನ್ನು ಮರಾಠಿಯಲ್ಲೇ ನೀಡಿದ್ದಾರೆ. ಆದರೆ ಈಗ ಎಸ್‌ಐಆರ್ ಪ್ರಕ್ರಿಯೆಗೆ ಪೂರೈಸಲಾಗಿರುವ ಗಣತಿ ನಮೂನೆಗಳು ಕನ್ನಡದಲ್ಲಿ ಮಾತ್ರ ಲಭ್ಯವಿವೆ. ಈ ಮೂಲಕ ಮರಾಠಿ ಭಾಷಿಕ ಮತದಾರರನ್ನು ಪ್ರಕ್ರಿಯೆಯಿಂದಲೇ ದೂರು ಇಡುವ ಸಂಚು ನಡೆದಿದೆ ಎಂದು ಆರೋಪಿಸಿದರು.
ತ್ರಿಭಾಷೆಯಲ್ಲಿ ನೀಡಿ
ಸದ್ಯ ನಡೆದಿರುವ ಎಸ್‌ಐಆರ್ ನಮೂನೆಗಳನ್ನು ಕನ್ನಡದ ಜತೆಗೆ ಇಂಗ್ಲಿಷ್ ಮತ್ತು ಹಿಂದಿಯಲ್ಲೂ ನೀಡಬೇಕು ಎಂದು ಆಗ್ರಹಿಸಿ ಅನಗೋಳದ ನಿವಾಸಿಗಳು ಶುಕ್ರವಾರ ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಕೇವಲ ಕನ್ನಡ ಭಾಷೆಯಲ್ಲಿ ಮಾತ್ರ ಮತದಾರರ ಪರಿಶೀಲನಾ ನಮೂನೆ ಪಡೆದುಕೊಂಡಿದ್ದೇವೆ. ನಗರದಲ್ಲಿ ಕನ್ನಡದ ಜತೆಗೆ ಮರಾಠಿ ಮಾತನಾಡುವವರೂ ಇದ್ದಾರೆ. ಹೀಗಾಗಿ, ಕನ್ನಡದ ಜತೆಗೆ ಇಂಗ್ಲಿಷ್ ಮತ್ತು ಮರಾಠಿಯಲ್ಲೂ ನಮೂನೆಗಳನ್ನು ನೀಡಬೇಕು ಎಂದು ಆಗ್ರಹಿಸಿದರು.
ವಿನಾಯಕ ಗುಂಜಟಕರ, ಬಾಹು ಕಾವಳೆ, ಚಂದ್ರಕಾಂತ ಗೊಂಡವಾಡ್ಕರ, ಜ್ಯೋತಿಬಾ ಯಳ್ಳೂರಕರ, ಪರಮೇಶ ಶಿಂಧೆ, ಓಂಕಾರ ಚೌಗಲೆ, ವಿನಯ ರಾಜಗೋಳಕರ ಇತರರಿದ್ದರು.
---
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net