ಮೀನಾಕ್ಷಿಗೆ ಸರ್ವೋತ್ತಮ ಶ್ರಾವಿಕಾ ಪ್ರಶಸ್ತಿ

ಮೀನಾಕ್ಷಿ ಪಾಟೀಲ ಅವರಿಗೆ ‘ಸರ್ವೋತ್ತಮ ಶ್ರಾವಿಕಾ’ ಪ್ರಶಸ್ತಿ ದೊರೆತ ಹಿನ್ನೆಲೆಯಲ್ಲಿ ಸನ್ಮಾನಿಸಲಾಯಿತು. ಉತ್ತಮ ಪಾಟೀಲ, ವಿನಯಶ್ರೀ ಪಾಟೀಲ, ಧನಶ್ರೀ ಪಾಟೀಲ, ಆರ್.ಟಿ.ಚೌಗಲಾ, ಆರ್.ಬಿ.ಪಾಟೀಲ, ರಾಕೇಶ ಫಿರಗನ್ನವರ ಇದ್ದರು.
ಮೀನಾಕ್ಷಿ ಪಾಟೀಲ ಅವರಿಗೆ ‘ಸರ್ವೋತ್ತಮ ಶ್ರಾವಿಕಾ’ ಪ್ರಶಸ್ತಿ ದೊರೆತ ಹಿನ್ನೆಲೆಯಲ್ಲಿ ಸನ್ಮಾನಿಸಲಾಯಿತು. ಉತ್ತಮ ಪಾಟೀಲ, ವಿನಯಶ್ರೀ ಪಾಟೀಲ, ಧನಶ್ರೀ ಪಾಟೀಲ, ಆರ್.ಟಿ.ಚೌಗಲಾ, ಆರ್.ಬಿ.ಪಾಟೀಲ, ರಾಕೇಶ ಫಿರಗನ್ನವರ ಇದ್ದರು.
Published on
ಬೋರಗಾಂವ: ಮೀನಾಕ್ಷಿ ಪಾಟೀಲ ಅವರ ಸೇವೆ ಗುರುತಿಸಿ ಭಾರತ ದಿಗಂಬರ ಜೈನ ಮಹಿಳಾ ಮಹಾಸಭಾ ಪ್ರತಿಷ್ಠಿತ ‘ಸರ್ವೋತ್ತಮ ಶ್ರಾವಿಕಾ’ ಪ್ರಶಸ್ತಿ ನೀಡಿ ಗೌರವಿಸಿದೆ ಎಂದು ಬೋರಗಾಂವ ಪಿಕೆಪಿಎಸ್ ಸಿಇಒ ಆರ್.ಟಿ.ಚೌಗುಲೆ ಹೇಳಿದರು.
ಪಟ್ಟಣದಲ್ಲಿ ಅರಿಹಂತ ಪರಿವಾರದ ವತಿಯಿಂದ ಮೀನಾಕ್ಷಿ ಪಾಟೀಲ ಅವರಿಗೆ ಶನಿವಾರ ಹಮ್ಮಿಕೊಂಡಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹಲವು ವರ್ಷಗಳಿಂದ ಸಾಮಾಜಿಕ ಮತ್ತು ಧಾರ್ಮಿಕ ಕ್ಷೇತ್ರಗಳಲ್ಲಿ ನಿಷ್ಠೆಯಿಂದ ಮೀನಾಕ್ಷಿ ಅವರು ಕೆಲಸ ಮಾಡಿದ್ದಾರೆ. ಮಹಿಳಾ ಸಬಲೀಕರಣ, ಧಾರ್ಮಿಕ ಕಾರ್ಯಕ್ರಮಗಳ ಆಯೋಜನೆ ಮತ್ತು ನಿರ್ಗತಿಕ ವರ್ಗಗಳಿಗೆ ಸಹಾಯ ಮಾಡುವಲ್ಲಿ ಅವರ ಕೊಡುಗೆ ಗಮನಾರ್ಹವಾಗಿದೆ ಎಂದರು.
ಪ್ರಾಥಮಿಕ ಕೃಷಿ ಸಂಘ, ಅರಿಹಂತ ಹಾಲಿನ ಡೇರಿ, ಅರಿಹಂತ ಸ್ಪಿನ್ನಿಂಗ್ ಮಿಲ್, ಅರಿಹಂತ ಗಾರ್ಮೆಂಟ್ಸ್, ಜೈನ ಬಸ್ತಿ ಸಮಿತಿ, ಅರಿಹಂತ ಶಾಲೆ, ಅರಿಹಂತ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ, ಆರ್.ಎ.ಪಾಟೀಲ ಪಬ್ಲಿಕ್ ಸ್ಕೂಲ್, ವಿತರಾಗ ಮಹಿಳಾ ಮಂಡಲ, ವೀರ ಸೇವಾದಲ ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರು ಮೀನಾಕ್ಷಿ ಪಾಟೀಲ ಅವರನ್ನು ಸನ್ಮಾನಿಸಿದರು. ಯುವ ನಾಯಕ ಉತ್ತಮ ಪಾಟೀಲ, ವಿನಯಶ್ರೀ ಪಾಟೀಲ, ಧನಶ್ರೀ ಪಾಟೀಲ, ಆರ್.ಬಿ. ಪಾಟೀಲ, ರಾಕೇಶ ಫಿರಗನ್ನವರ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net