ಉಜ್ವಲ ಭವಿಷ್ಯ ರೂಪಿಸಿಕೊಳ್ಳಲಿ

ಬಾವನ ಸೌಂದತ್ತಿ ಗ್ರಾಮದ ಆದರ್ಶ ಶಿಕ್ಷಣ ಸಂಸ್ಥೆಯ ಬಾಜೀರಾವ ಮಗದುಮ್ಮ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆ ಕಾರ್ಯಕ್ರಮವನ್ನು ಎಲ್.ಟಿ.ಬಬಲಿ ಉದ್ಘಾಟಿಸಿದರು. ಈರಗೌಡ ಪಾಟೀಲ, ಜಿನೇಶ್ವರ ಮಗದುಮ್ಮ, ಆರ್.ಬಿ.ಪಾಟೀಲ ಇತರರಿದ್ದರು.

Published on
ರಾಯಬಾಗ: ವಿದ್ಯಾರ್ಥಿಗಳು ಗುರು ಹಿರಿಯರ, ತಂದೆ-ತಾಯಿ ತೋರಿದ ಮಾರ್ಗದಲ್ಲಿ ಸಾಗಿ ಉಜ್ವಲ ಭವಿಷ್ಯ ನಿರ್ಮಿಸಿಕೊಳ್ಳಿ ಎಂದು ಮೊಳೆ ಸಿದ್ಧೇಶ್ವರ ಪ್ರೌಢಶಾಲೆ ಶಿಕ್ಷಕ ಎಲ್.ಟಿ.ಬಬಲಿ ಹೇಳಿದರು.
ಬಾವನ ಸೌಂದತ್ತಿ ಗ್ರಾಮದ ಆದರ್ಶ ಶಿಕ್ಷಣ ಸಂಸ್ಥೆಯ ಬಾಜೀರಾವ ಮಗದುಮ್ಮ ಪ್ರೌಢಶಾಲೆಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆ ಉದ್ಘಾಟನೆ ಸಮಾರಂಭದಲ್ಲಿ ಮಾತನಾಡಿ, ವಿದ್ಯಾರ್ಥಿಗಳು ಕಠಿಣ ಪರಿಶ್ರಮದಿಂದ ಉನ್ನತ ಸಾಧನೆ ಮಾಡಿ ಕೀರ್ತಿ ತರಬೇಕು ಎಂದರು.
ಸಂಸ್ಥೆ ಅಧ್ಯಕ್ಷ ಈರಗೌಡ ಪಾಟೀಲ ಮಾತನಾಡಿ, ವಿದ್ಯಾರ್ಥಿಗಳು ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಿ ದೈಹಿಕ ಮತ್ತು ಮಾನಸಿಕವಾಗಿ ಸದೃಢರಾಗಬೇಕು ಎಂದು ಹೇಳಿದರು.
ಸಂಸ್ಥೆ ಉಪಾಧ್ಯಕ್ಷ ಜಿನೇಶ್ವರ ಮಗದುಮ್ಮ, ಕಾರ್ಯದರ್ಶಿ ಎ.ಟಿ.ಕೂಗೆ, ಸದಸ್ಯರಾದ ಆರ್.ಬಿ.ಪಾಟೀಲ, ಅರಿಹಂತ ಕಾಮಗೌಡ, ಕುಮಾರ ಕಾಮಗೌಡ, ಮುಖ್ಯಶಿಕ್ಷಕ ಎ.ಕೆ.ಸಲಗರೆ ಇತರರಿದ್ದರು. ಶ್ರೇಯಾ ಕಾಮಗೌಡ ಸ್ವಾಗತಿಸಿದರು. ಸಂಧ್ಯಾ ಮುಚ್ಚಂಡಿ ನಿರೂಪಿಸಿದರು. ಪ್ರತೀಕ್ಷಾ ನಿಡಸೋಸಿ ವಂದಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net