ಮಹಾತ್ಮರ ತತ್ತ್ವಾದರ್ಶ ರೂಪಿಸಿಕೊಳ್ಳಲಿ

ಯರಗಟ್ಟಿ ಮಹಾಂತ ದುರದುಂಡೀಶ್ವರ ಮಠದಲ್ಲಿ ಹಮ್ಮಿಕೊಂಡಿದ್ದ ಮಹಾಂತ ಶಿವಯೋಗಿಗಳ 156ನೇ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ವಿರೂಪಾಕ್ಷ ಸ್ವಾಮೀಜಿ, ವಿಶ್ವಾಸ ವೈದ್ಯ, ಮಹಾಂತೇಶ ಜಕಾತಿ, ಎಂ.ವಿ.ಗುಂಡಪ್ಪಗೋಳ, ಅಶೋಕ ಹಾದಿಮನಿ, ವಿಠ್ಠಲ ತಡಸಲೂರ ಇತರರಿದ್ದರು.

Published on
ಯರಗಟ್ಟಿ:
ಮಹಾಂತ ದುರದುಂಡೀಶ್ವರ ಮಠದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಮಹಾಂತ ಶಿವಯೋಗಿಗಳ 156ನೇ ಜಯಂತ್ಯುತ್ಸವ ಹಾಗೂ ಸನ್ಮಾನ ಸಮಾರಂಭದಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿ, ಭಕ್ತರು ಮಹಾತ್ಮರ ಜಯಂತ್ಯುತ್ಸವ ಮಾಡುವ ಮೂಲಕ ಅವರ ತತ್ತ್ವ, ಆದರ್ಶ ಮೈಗೂಡಿಸಿಕೊಳ್ಳಬೇಕು ಎಂದರು.
ಶಾಸಕ ವಿಶ್ವಾಸ ವೈದ್ಯ ಮಾತನಾಡಿ, ಯರಗಟ್ಟಿ ಮಹಾಂತ ದುರದುಂಡಿಶ್ವರ ಮಠದ ಸಭಾ ಭವನಕ್ಕೆ ಈಗಾಗಲೇ 50 ಲಕ್ಷ ರೂ. ಅನುದಾನ ನೀಡಲಾಗಿದ್ದು, ಬರುವ ದಿನಗಳಲ್ಲಿ ಇನ್ನೂ 50 ಲಕ್ಷ ರೂ. ಅನುದಾನ ನೀಡುವ ಭರವಸೆ ನೀಡಿದರು.
ಮಠದ ಅಧ್ಯಕ್ಷ ಮಹಾಂತೇಶ ಜಕಾತಿ, ತಹಸೀಲ್ದಾರ್ ಎಂ.ವಿ.ಗುಂಡಪ್ಪಗೋಳ, ಅಶೋಕ ಹಾದಿಮನಿ, ವಿಠ್ಠಲ ತಡಸಲೂರ, ಪ್ರಕಾಶ ಸತ್ತಿಗೇರಿ, ಕುಮಾರ ಹಿರೇಮಠ, ರಾಜೇಂದ್ರ ವಾಲಿ, ಶಿವಾನಂದ ಯರಗಣವಿ, ಬಿ.ಡಿ.ಬಳಿಗಾರ, ಉಮಾದೇವಿ ಪೂರ್ವಿಮಠ, ಸುರೇಖಾ ಅಂಗಡಿ, ಕಾರ್ತಿಕ ಹೊಸುರ, ಶಿವಾನಂದ ಪಟ್ಟಣಶೆಟ್ಟಿ, ವಿಜಯ ಮರಡಿ, ಸುರೇಶ ಗಲಗಲಿ, ಕುಮಾರ ಜಕಾತಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net