ಮನೆ ನಿರ್ಮಾಣ ಯೋಜನೆಗೆ ಶಾಸಕ ವಿಶ್ವಾಸ ವೈದ್ಯ ಭೂಮಿಪೂಜೆ ನೆರವೇರಿಸಿದರು. ರತ್ನಾ ಕದಂ, ಬಸವರಾಜ ಅಯ್ಯನಗೌಡರ, ಪ್ರಕಾಶ ವಾಲಿ, ನೀಲಕಂಠ ಶಿದಬಸನ್ನವರ ಇತರರಿದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಶಾಸಕ ವೈದ್ಯ ಆಶಯ
ತಾವಲಗೇರಿಯಲ್ಲಿ ಯೋಜನೆಗೆ ಚಾಲನೆ
ಮುಗಳಿಹಾಳ:ಹಿಂದುಳಿದ ಸಮುದಾಯದವರಿಗೆ ಮನೆ ಎಂಬುದು ಕೇವಲ ಕಟ್ಟಡವಲ್ಲ ಭದ್ರತೆ, ಗೌರವ ಮತ್ತು ಭವಿಷ್ಯದ ಆಧಾರ. ಸರ್ಕಾರದ ಯೋಜನೆಗಳು ನಿಜವಾದ ಫಲಾನುಭವಿಗಳಿಗೆ ತಲುಪಿಸುವುದು ನಮ್ಮ ಕರ್ತವ್ಯ ಎಂದು ಶಾಸಕ ವಿಶ್ವಾಸ ವೈದ್ಯ ಹೇಳಿದರು.
ಸಮೀಪದ ತಾವಲಗೇರಿ ಗ್ರಾಮದಲ್ಲಿ ಹೆಳವ ಸಮುದಾಯದವರಿಗಾಗಿ ೨ ಎಕರೆ ಜಮೀನಿನಲ್ಲಿ ಮನೆ ನಿರ್ಮಾಣಕ್ಕೆ ಶುಕ್ರವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ಯರಗಟ್ಟಿ ತಹಸೀಲ್ದಾರ್ ಎಂ.ವಿ.ಗುಂಡಪ್ಪಗೊಳ ಮಾತನಾಡಿ, ಸಮಾಜದ ಹಿಂದುಳಿದ ವರ್ಗಗಳ ಬದುಕಿಗೆ ಶಾಶ್ವತ ನೆಲೆ ಒದಗಿಸುವ ಮಹತ್ವದ ಹೆಜ್ಜೆಯಾಗಿ, ಕುರುಬಗಟ್ಟಿ ಗ್ರಾಮದ ಸರ್ಕಾರಿ ೧೪೩/ಪಿ೧ ಕ್ಷೇತ್ರದ ೧೨ ಎಕರೆ ೧೨ ಗುಂಟೆ ಪೈಕಿ ೨ ಎಕರೆ ಜಮೀನನ್ನು ತಾವಲಗೇರಿ ಗ್ರಾಮದ ಹೆಳವ ಸಮುದಾಯದವರಿಗೆ ಮನೆ ನಿರ್ಮಾಣಕ್ಕಾಗಿ ಮಂಜೂರು ಮಾಡಲಾಗಿದೆ ಎಂದರು.
ಜಿಲ್ಲಾಽಕಾರಿ ಆದೇಶದಂತೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮೂಲಕ ಈ ಜಮೀನನ್ನು ಹಂಚಿಕೆ ಮಾಡಲಾಗಿದ್ದು, ಸಮುದಾಯದ ಜನರಲ್ಲಿ ಅಪಾರ ಸಂತಸ ಮೂಡಿಸಿದೆ ಎಂದರು.
ಬಿಸಿಎಂ ತಾಲೂಕು ಅಧಿಕಾರಿ ರತ್ನಾ ಕದಂ, ಪ್ರಕಾಶ ವಾಲಿ, ಬಸವರಾಜ ಅಯ್ಯನಗೌಡರ, ಎಪಿಎಂಸಿ ಅಧ್ಯಕ್ಷ ನೀಲಕಂಠ ಶಿದಬಸನ್ನವರ, ಬಂಗಾರೆಪ್ಪ ಹರಳಿ, ಮಲಿಕಸಾಬ್ ಬಾಗವಾನ, ಮಾಡಮಗೇರಿ ಮಾಜಿ ಅಧ್ಯಕ್ಷ ಲಕ್ಕಪ್ಪ ಸಣ್ಣಲಿಂಗನವರ, ಲಕ್ಷ್ಮಣ ದಳವಾಯಿ, ದ್ಯಾಮಣ್ಣ ಬಂಡಿವಡ್ಡರ ಇತರರಿದ್ದರು.