ಹಿರಿಯರ ಜೀವನ ಯುವ ಪಿಳಿಗೆಗಳಿಗೆ ಮಾರ್ಗದರ್ಶಿಯಾಗಲಿ

 ಬೆಳಗಾವಿಯಲ್ಲಿ ಶನಿವಾರ ಜರುಗಿದ ಸ್ವಾತಂತ್ರೃ ಹೋರಾಟಗಾರ ರಾಜೇಂದ್ರ ಕಲಘಟಗಿ ಜತೆಗಿನ ಸಾಧಕರ ಸಂವಾದದಲ್ಲಿ ಕೆ.ಎಚ್.ಚನ್ನೂರ, ವಿದ್ಯಾವತಿ ಭಜಂತ್ರಿ, ವೈ.ಡಿ.ಹಿಮ್ಮಡಿ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಬೆಳಗಾವಿಯಲ್ಲಿ ಶನಿವಾರ ಜರುಗಿದ ಸ್ವಾತಂತ್ರೃ ಹೋರಾಟಗಾರ ರಾಜೇಂದ್ರ ಕಲಘಟಗಿ ಜತೆಗಿನ ಸಾಧಕರ ಸಂವಾದದಲ್ಲಿ ಕೆ.ಎಚ್.ಚನ್ನೂರ, ವಿದ್ಯಾವತಿ ಭಜಂತ್ರಿ, ವೈ.ಡಿ.ಹಿಮ್ಮಡಿ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
Published on
ಬೆಳಗಾವಿ: ಹಿರಿಯ ಸ್ವಾತಂತ್ರ್ಯ ಹೋರಾಟಗಾರರು ಹಾಗೂ ಹಿರಿಯರ ಜೀವನ ಇಂದಿನ ಪೀಳಿಗೆಗೆ ಮಾರ್ಗದರ್ಶಿಯಾಗಬೇಕು. ಅವರ ಆದರ್ಶಗಳನ್ನು ಅಳವಡಿಸಿಕೊಂಡಲ್ಲಿ ಸಮೃದ್ಧ ರಾಷ್ಟ್ರ ನಿರ್ಮಾಣಕ್ಕೆ ಕೈ ಜೋಡಿಸಬಹುದು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ಕೆ.ಎಚ್.ಚನ್ನೂರ ಹೇಳಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಬಸವರಾಜ ಕಟ್ಟಿಮನಿ ಸಭಾಭವನದಲ್ಲಿ ಶನಿವಾರ ಏರ್ಪಡಿಸಿದ್ದ ಹಿರಿಯ ಸ್ವಾತಂತ್ರೃ ಹೋರಾಟಗಾರ ರಾಜೇಂದ್ರ ಕಲಘಟಗಿ ಜತೆಗಿನ ಸಾಧಕರೊಂದಿಗಿನ ಸಂವಾದ ಉದ್ಘಾಟಿಸಿ ಮಾತನಾಡಿದ ಅವರು, ದೇಶದ ಸ್ವಾತಂತ್ರ್ಯಕ್ಕಾಗಿ ಅನೇಕ ಮಹಾನ ವ್ಯಕ್ತಿಗಳು ತಮ್ಮ ಜೀವನವನ್ನೆ ಮುಡಿಪಾಗಿಟ್ಟಿರುವ ಉದಾಹರಣೆಗಳನ್ನು ತಿಳಿದಿರಬಹುದು. ಆದರೆ, ಅಂತಹ ಹೋರಾಟದಲ್ಲಿ ಭಾಗವಹಿಸಿ ಅಂದಿನ ನೈಜ ಘಟನೆಗಳನ್ನು ರಾಜೇಂದ್ರ ಕಲಘಟಗಿ ಅವರಿಂದಲೇ ಕೇಳಿ ತಿಳಿಯುತ್ತಿರುವುದು ಸಂತಸದ ಸಂಗತಿಯಾಗಿದೆ ಎಂದರು.
ಇಲಾಖೆಯ ಉಪ ನಿರ್ದೇಶಕಿ ವಿದ್ಯಾವತಿ ಭಂಜಂತ್ರಿ ಮಾತನಾಡಿ, 106 ವರ್ಷದ ರಾಜೇಂದ್ರ ಕಲಘಟಗಿ, 1940ರಲ್ಲಿಯೇ ದೇಶಕ್ಕಾಗಿ ಪ್ರಾಣ ತ್ಯಾಗಕ್ಕೂ ಸಿದ್ದ ಎಂಬ ಸಂಕಲ್ಪದೊಂದಿಗೆ ವಾಲಿ ಚನ್ನಪ್ಪವರಿಂದ ಪ್ರೇರಿತರಾಗಿ ಹೋರಾಟಕ್ಕಿಳಿದವರು. ಮುಂಬೈದಿಂದ ಬೆಳಗಾವಿಗೆ ಬರುತ್ತಿದ್ದ ಗಾಂಧಿಜಿ ಪತ್ರಗಳನ್ನು ಸ್ಥಳಿಯರಿಗೆ ಹಂಚುವ ಜವಾಬ್ದಾರಿ ವಹಿಸಿದ್ದರು. 1943ರ ಎಪ್ರಿಲ್‌ನಲ್ಲಿ ಪತ್ರ ಹಂಚುವಾಗ ಬ್ರಿಟಿಷರ ಕೈಗೆ ಸಿಕ್ಕಿಬಿದ್ದು 7 ತಿಂಗಳು ಜೈಲುವಾಸ ಅನುಭವಿಸಿದ್ದರು. ಬಿಡುಗಡೆ ಬಳಿಕವೂ ತಮ್ಮ ಹೋರಾಟವನ್ನೂ ಬಿಟ್ಟಿರಲಿಲ್ಲ ಎಂದು ವಿವರಿಸಿದರು.

ಇವತ್ತಿನ ಯುವಕರು ದುಶ್ಚಟಗಳಿಂದ ದೂರವಿರಬೇಕು. ತಪ್ಪು ದಾರಿಯಲ್ಲಿ ನಡೆಯದೆ ರಾಷ್ಟ್ರ ಪ್ರೇಮ ಬೆಳೆಸಿಕೊಳ್ಳಬೇಕು. ಸ್ವಾತಂತ್ರೃ ಹೋರಾಟದ ದಿನಗಳಲ್ಲಿ ಜೈಲಿಗೆ ಹೋದರೆ ಹೆಮ್ಮೆ ಪಡುತ್ತಿದರು. ಇಂದು ಜೈಲಿಗೆ ಹೋದರೆ ಯಾವುದೇ ಗೌರವ ಇಲ್ಲ. ಹಾಗಾಗಿ ತಪ್ಪು ದಾರಿಯಲ್ಲಿ ನಡೆಯಬಾರದು ಎಂದು ಹಿರಿಯ ಸ್ವಾತಂತ್ರ್ಯ ಯೋಧ ರಾಜೇಂದ್ರ ಧರ್ಮಪ್ಪ ಕಲಘಟಗಿ ಹೇಳಿದರು.

ಬಸವರಾಜ ಕಟ್ಟಿಮನಿ ಪ್ರತಿಷ್ಠಾನದ ಅಧ್ಯಕ್ಷ ವೈ.ಡಿ.ಹಿಮ್ಮಡಿ, ವಿವಿಧ ಶಾಲಾ-ಕಾಲೇಜು ವಿದ್ಯಾರ್ಥಿಗಳಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net