ಸರ್ಕಾರಿ ಯೋಜನೆ ಸದುಪಯೋಗವಾಗಲಿ

ಶಾಸಕ ಲಕ್ಷ್ಮಣ ಸವದಿ ಅವರ ಜನ್ಮದಿನದ ಅಂಗವಾಗಿ ಅವರಖೋಡ ಗ್ರಾಮದ ಸರ್ಕಾರಿ ಪ್ರೌಢಶಾಲೆಯ 10ನೇ ತರಗತಿ ವಿದ್ಯಾರ್ಥಿಗಳಿಗೆ ಕೆಎಂಎ್ ನಿರ್ದೇಶಕ ಮಹಾದೇವ ಬಿಳಿಕುರಿ ಪರೀಕ್ಷಾ ಸಾಮಗ್ರಿ ವಿತರಿಸಿದರು. ಪಾಂಡುರಂಗ ನಿಕ್ಕಂ, ಅರಿಹಂತ ರಾಮತೀರ್ಥ, ಪ್ರಕಾಶ ವಾಣಿ, ಶಿವಾನಂದ ಪೋಳ ಇತರರಿದ್ದರು.

Published on
ಅಥಣಿ ಗ್ರಾಮೀಣ: ಜನಪ್ರತಿನಿಧಿಗಳು ಸಾರ್ವಜನಿಕರ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಕಾರ್ಯ ಕೈಗೊಂಡರೆ ಜನರ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿಯಬಲ್ಲರು. ಅಂತಹ ಕಾರ್ಯವನ್ನು ಶಾಸಕ ಲಕ್ಷ್ಮಣ ಸವದಿ ಮಾಡುತ್ತಿದ್ದಾರೆ ಎಂದು ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟ ನಿರ್ದೇಶಕ ಮಹಾದೇವ ಬಿಳಿಕುರಿ ಹೇಳಿದರು.
ಅಥಣಿ ತಾಲೂಕಿನ ಅವರಖೋಡ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಶಾಸಕ ಲಕ್ಷ್ಮಣ ಸವದಿ ಅವರ ಜನ್ಮದಿನದ ಅಂಗವಾಗಿ ಮಂಗಳವಾರ 10ನೇ ತರಗತಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಸಾಮಗ್ರಿ ವಿತರಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳಿಗೆ ಸರ್ಕಾರ ಅನೇಕ ಯೋಜನೆ ತಂದಿದ್ದು, ಸದುಪಯೋಗಪಡಿಸಿಕೊಂಡು ಗುಣಮಟ್ಟದ ಶಿಕ್ಷಣ ಪಡೆಯಬೇಕು. ಶಾಸಕ ಸವದಿ ಅವರ ಸತತ ಪ್ರಯತ್ನದಿಂದ ಗ್ರಾಮಕ್ಕೆ ನೂತನ ಪ್ರೌಢಶಾಲೆ ಮಂಜೂರಾಗಿದೆ. ನೀರಾವರಿ, ರಸ್ತೆ, ಪಶುವೈದ್ಯಕೀಯ ಮಹಾವಿದ್ಯಾಲಯಗಳು ಕ್ಷೇತ್ರಕ್ಕೆ ಮೆರುಗು ತಂದಿವೆ ಎಂದರು.
ಮುಖ್ಯ ಶಿಕ್ಷಕ ಅರಿಹಂತ ರಾಮತೀರ್ಥ ಮಾತನಾಡಿದರು.ಎಸ್‌ಡಿಎಂಸಿ ಅಧ್ಯಕ್ಷ ಪಾಂಡುರಂಗ ನಿಕ್ಕಂ, ಉಪಾಧ್ಯಕ್ಷ ಪ್ರಕಾಶ ವಾಣಿ, ಶಿವಾನಂದ ಪೋಳ, ಎಂ.ಪಿ.ಚನ್ನಾಪುರ, ಬಾಹುಬಲಿ ಹಳಿಂಗಳಿ, ಎಸ್.ಕೆ.ಬಾಳಪ್ಪನವರ, ಎಚ್.ಎಂ.ತೇಲಿ, ಬಿ.ಎಸ್.ಅಂಬಿ ಇತರರಿದ್ದರು.
10-2
----------------------
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net