ಬೆಳೆಗೆ ಸೂಕ್ತ ಬೆಲೆ ಸಿಗುವಂತಾಗಲಿ

ಕೊಟ್ಟಲಗಿ ಗ್ರಾಮದ ಬಹುದಿನಗಳ ಬೇಡಿಕೆಯಾಗಿದ್ದ ಕರ್ನಾಟಕ ಪಬ್ಲಿಕ್ ಸ್ಕೂಲ್ ಮಂಜೂರಾದ ಹಿನ್ನೆಲೆಯಲ್ಲಿ ಶಾಸಕ ಲಕ್ಷ್ಮಣ ಸವದಿ ಅವರನ್ನು ಸನ್ಮಾನಿಸಲಾಯಿತು. ಸಿದ್ದರಾಯ ಯಲ್ಲಡಗಿ, ಅಪ್ಪಾಸಾಬ ಬಿರಾದರ ಇತರರಿದ್ದರು.
ಕೊಟ್ಟಲಗಿ ಗ್ರಾಮದ ಬಹುದಿನಗಳ ಬೇಡಿಕೆಯಾಗಿದ್ದ ಕರ್ನಾಟಕ ಪಬ್ಲಿಕ್ ಸ್ಕೂಲ್ ಮಂಜೂರಾದ ಹಿನ್ನೆಲೆಯಲ್ಲಿ ಶಾಸಕ ಲಕ್ಷ್ಮಣ ಸವದಿ ಅವರನ್ನು ಸನ್ಮಾನಿಸಲಾಯಿತು. ಸಿದ್ದರಾಯ ಯಲ್ಲಡಗಿ, ಅಪ್ಪಾಸಾಬ ಬಿರಾದರ ಇತರರಿದ್ದರು.
Published on
ತೆಲಸಂಗ: ಗ್ರಾಮೀಣ ಭಾಗದ ಪ್ರತಿಯೊಬ್ಬರಿಗೂ ಮೂಲ ಸೌಕರ್ಯ ತಲುಪಿಸುವ ಮೂಲಕ ಅಥಣಿ ಕ್ಷೇತ್ರವನ್ನು
ಮಾದರಿಯಾಗಿ ರೂಪಿಸುವುದೇ ನನ್ನ ಸಂಕಲ್ಪ ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು.
ಕೊಟ್ಟಲಗಿ ಗ್ರಾಮಕ್ಕೆ ಕರ್ನಾಟಕ ಪಬ್ಲಿಕ್ ಸ್ಕೂಲ್ ಮಂಜೂರಾದ ಹಿನ್ನೆಲೆಯಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿ, ಗ್ರಾಮೀಣ ಜನರಿಗೆ ನಿರಂತರ ಕುಡಿಯುವ ನೀರು, ಕೃಷಿ ಪಂಪ್‌ಸೆಟ್‌ಗಳಿಗೆ ಸಮರ್ಪಕ ವಿದ್ಯುತ್ ಪೂರೈಕೆ ಹಾಗೂ ಹಳ್ಳಿಗಳನ್ನು ಸಂಪರ್ಕಿಸುವ ಸುಸಜ್ಜಿತ ರಸ್ತೆ ನಿರ್ಮಾಣಕ್ಕೆ ಬದ್ಧರಾಗಿದ್ದೇವೆ. ರೈತರ ಬೆಳೆಗೆ ಮಾರುಕಟ್ಟೆಯಲ್ಲಿ ಸೂಕ್ತ ಬೆಲೆ ಹಾಗೂ ನ್ಯಾಯಯುತ ಪರಿಹಾರ ಸಿಗುವಂತಾಗಬೇಕು.
ಈ ಹಿಂದೆ ಪ್ರಯತ್ನದ ಲವಾಗಿ ಸತ್ತಿ, ಕೋಹಳ್ಳಿ ಹಾಗೂ ಕೊಕಟನೂರ ಗ್ರಾಮಗಳಲ್ಲಿ 3 ಕೆಪಿಎಸ್ ಶಾಲೆ ಸ್ಥಾಪಿಸಲಾಗಿತ್ತು. ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಅಂತಾರಾಷ್ಟ್ರೀಯ ಮಟ್ಟದ ಉಚಿತ ಶಿಕ್ಷಣ ಸಿಗಬೇಕೆಂಬ ಉದ್ದೇಶದಿಂದ ರಾಜ್ಯ ಸರ್ಕಾರಕ್ಕೆ ವಿಶೇಷ ಪ್ರಸ್ತಾವ ಸಲ್ಲಿಸಿ, ಈಗ ಹೊಸದಾಗಿ 9 ಕೆಪಿಎಸ್ ಶಾಲೆಗಳಿಗೆ ಅನುಮೋದನೆ ತರಲಾಗಿದೆ. ಕೊಟ್ಟಲಗಿ ಗ್ರಾಮಕ್ಕೆ ಮಂಜೂರಾಗಿರುವ ಕೆಪಿಎಸ್ ಶಾಲೆಗೆ 4 ಎಕರೆ ಲಭ್ಯ ಭೂಮಿ ಇದ್ದು, ಎಲ್‌ಕೆಜಿಯಿಂದ ಹಿಡಿದು ಪಿಯುಸಿವರೆಗೆ ಸುಸಜ್ಜಿತ ಸೌಲಭ್ಯ ಸಿಗಲಿವೆ. ಕೊಟ್ಟಲಗಿ ಮಾತ್ರವಲ್ಲದೆ ಶೇಗುಣಸಿ, ಕನ್ನಾಳ, ಮಸರಗುಪ್ಪಿ, ತೆಲಸಂಗ, ಬಸವೇಶ್ವರ ಗುಡಿ, ಹಲ್ಯಾಳ, ಬಾಡಗಿ, ಪಾರ್ಥನಹಳ್ಳಿ ಹಾಗೂ ಬಡಚಿ ಗ್ರಾಮಗಳ ಸರ್ಕಾರಿ ಶಾಲೆಗಳೂ ಸಹ ಕೆಪಿಎಸ್ ಆಗಿ ಮೇಲ್ದರ್ಜೆಗೇರಲಿವೆ ಎಂದರು.
ಮಾಜಿ ಜಿಪಂ ಸದಸ್ಯ ಸಿದ್ದರಾಯ ಯಲ್ಲಡಗಿ, ಅಪ್ಪಾಸಾಬ ಬಿರಾದರ, ಸಿದ್ದು ದೊಡ್ಡಸಿಂಗಪ್ಪಗೋಳ, ಶಿವು ತೇಲಿ, ನಿಂಗಪ್ಪ ಸತ್ತಿ, ರವಿ ಹಂಜಿ, ಸತೀಶ ಉಪಾಸೆ, ಸುರೇಶ ಖಡಕಿ, ಸಿದ್ದು ಬಡವಗೋಳ, ರಘು ದೊಡ್ಡನಿಂಗಪ್ಪಗೋಳ, ಶ್ರೀಶೈಲ ಪೋಪಡಿ, ಶಿವಪ್ರಭು ಅಥಣಿ, ಬಾವು ಝುಳಕಿ, ರವಿ ಮಾಳಿ, ಗಿರೀಶ ಸಿಂಧೂರ, ಗಣಪ್ಪ ದಾನಪ್ಪಗೋಳ, ರಮೇಶ ಪಾಟೀಲ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net