ಸಮುದಾಯ ಭವನ ಸದುಪಯೋಗವಾಗಲಿ

ಶೇಗುಣಸಿಯಿಂದ ಹಳಿಂಗಳಿ ತೋಟದವರೆಗಿನ ರಸ್ತೆ ನಿರ್ಮಾಣ ಕಾಮಗಾರಿ ಚಾಲನೆ ನೀಡಿದ ಚಿದಾನಂದ ಸವದಿ ಅವರನ್ನು ಗ್ರಾಮಸ್ಥರು ಸನ್ಮಾನಿಸಿದರು. ಈರಪ್ಪ ವಾಲಿ, ಕುಮಾರ ಗಸ್ತಿ, ದೇವಪ್ಪ ದೊಡವಾಡ, ಗೌಡಪ್ಪ ಅವಕನವರ ಇತರರಿದ್ದರು.
ಶೇಗುಣಸಿಯಿಂದ ಹಳಿಂಗಳಿ ತೋಟದವರೆಗಿನ ರಸ್ತೆ ನಿರ್ಮಾಣ ಕಾಮಗಾರಿ ಚಾಲನೆ ನೀಡಿದ ಚಿದಾನಂದ ಸವದಿ ಅವರನ್ನು ಗ್ರಾಮಸ್ಥರು ಸನ್ಮಾನಿಸಿದರು. ಈರಪ್ಪ ವಾಲಿ, ಕುಮಾರ ಗಸ್ತಿ, ದೇವಪ್ಪ ದೊಡವಾಡ, ಗೌಡಪ್ಪ ಅವಕನವರ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಚಿದಾನಂದ ಸವದಿ ಅನಿಸಿಕೆ
  • ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ
ಅಥಣಿ ಗ್ರಾಮೀಣ: ಅಥಣಿ ಕ್ಷೇತ್ರದ ಗ್ರಾಮೀಣ ಭಾಗದ ಸರ್ವತೋಮುಖ ಅಭಿವೃದ್ಧಿಯೇ ಶಾಸಕ ಲಕ್ಷ್ಮಣ ಸವದಿ ಮೊದಲ ಆದ್ಯತೆಯಾಗಿದ್ದು, ಹಳ್ಳಿಗಳಿಗೆ ಮೂಲಸೌಕರ್ಯ ಕಲ್ಪಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿರುವುದಾಗಿ ಮುಖಂಡ ಚಿದಾನಂದ ಸವದಿ ಹೇಳಿದರು. 
ಅಥಣಿ ತಾಲೂಕಿನ ಶೇಗುಣಸಿ, ತಂಗಡಿ, ಕೊಟ್ಟಲಗಿ, ಶಿರಹಟ್ಟಿ ಹಾಗೂ ಶಿರಹಟ್ಟಿ ಪುನರ್ವಸತಿ ಕೇಂದ್ರಗಳಲ್ಲಿ ೧.೬೫ ಕೋಟಿ ರೂ. ವೆಚ್ಚದಲ್ಲಿ ತೋಟದ ರಸ್ತೆ ಹಾಗೂ ಸಮುದಾಯ ಭವನಗಳ ನಿರ್ಮಾಣ ಕಾಮಗಾರಿಗೆ ಶನಿವಾರ ಚಾಲನೆ ನೀಡಿ ಮಾತನಾಡಿ, ಅಥಣಿ ಕ್ಷೇತ್ರದ ಎಲ್ಲ ಗ್ರಾಮಗಳಲ್ಲಿ ತೋಟದ ರಸ್ತೆ, ಸಮುದಾಯ ಭವನ, ಸಿಸಿ ರಸ್ತೆ, ನೀರಾವರಿ ಸೇರಿದಂತೆ ಹಲವು ಕಾಮಗಾರಿ ಕೈಗೊಳ್ಳಲಾಗುವುದು. ತೋಟದ ರಸ್ತೆ ನಿರ್ಮಾಣದಿಂದ ಸಂಚಾರಕ್ಕೆ ಅನುಕೂಲವಾಗಲಿದೆ. ಸಮುದಾಯ ಭವನ ಸಾಮಾಜಿಕ, ಸಾಂಸ್ಕೃತಿಕ ಹಾಗೂ ಸಾರ್ವಜನಿಕ ಕಾರ್ಯಗಳಿಗೆ ಉಪಯುಕ್ತವಾಗಲಿದೆ ಎಂದರು.
ರಘು ದೊಡ್ಡನಿಂಗಪ್ಪಗೋಳ ಮಾತನಾಡಿದರು. ಜಿಪಂ ಎಇಇ ಈರಪ್ಪ ವಾಲಿ, ಕುಮಾರ ಗಸ್ತಿ, ದೇವಪ್ಪ ದೊಡವಾಡ, ಗೌಡಪ್ಪ ಅವಕನವರ, ತಿಪ್ಪಣ್ಣ ತೇಲಿ, ಅಶೋಕ ಅಮ್ಮಣಗಿ, ಅರ್ಜುನ ನಾಯಿಕ, ಕುಮಾರ ಚೆನ್ನರೆಡ್ಡಿ, ರಾವಸಾಬ ನಾಯಿಕ, ಸುರೇಶ ಗೂಳಪ್ಪನವರ, ಗುರು ದಾಶ್ಯಾಳ, ಅಪ್ಪಾಸಾಬ ಬಿರಾದಾರ, ಶಿವು ತೇಲಿ, ಗುರುಬಸು ಬಂಡಗೋಟಿ, ಸಿದ್ರಾಮ ಬಿಳ್ಳೂರ, ಪ್ರದೀಪ ಕರಡಿ, ಶ್ರೀಶೈಲ ಸತ್ತಿಗೇರಿ, ಗಿರಿಮಲ್ಲ ಜನಗೌಡ, ರಾಜು ವಾಲಿ, ಶಿವಾನಂದ ಗೊಲಬಾವಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net