ಅನುದಿನವೂ ಪರಿಸರ ದಿನವಾಗಲಿ

ಬೆಳಗಾವಿ ನಗರದ ಲಿಂಗರಾಜ ಕಾಲೇಜಿನಲ್ಲಿ ಶುಕ್ರವಾರ ಎನ್​ಸಿಸಿ ಟಕ ವತಿಯಿಂದ ವಿಶ್ವ ಪರಿಸರ ದಿನ ಜರುಗಿತು. ಡಾ.ಎಚ್​.ಎಸ್​.ಮೇಲಿನಮನಿ, ಡಾ.ಮಹೇಶ ಗುರನಗೌಡರ ಇತರರಿದ್ದರು.
ಬೆಳಗಾವಿ ನಗರದ ಲಿಂಗರಾಜ ಕಾಲೇಜಿನಲ್ಲಿ ಶುಕ್ರವಾರ ಎನ್​ಸಿಸಿ ಟಕ ವತಿಯಿಂದ ವಿಶ್ವ ಪರಿಸರ ದಿನ ಜರುಗಿತು. ಡಾ.ಎಚ್​.ಎಸ್​.ಮೇಲಿನಮನಿ, ಡಾ.ಮಹೇಶ ಗುರನಗೌಡರ ಇತರರಿದ್ದರು.
Published on
ಬೆಳಗಾವಿ: ನಾವು ಪರಿಸರವನ್ನು ಸಂರಸಿದರೆ, ಪರಿಸರ ನಮ್ಮನ್ನು ಸಂರಸುತ್ತದೆ. ಪರಿಸರ ಸಂರಕ್ಷಣೆ ಹೊಣೆ ಪ್ರತಿಯೊಬ್ಬರದ್ದಾಗಿದೆ ಎಂದು ಪ್ರಾಚಾರ್ಯ ಡಾ.ಎಚ್​.ಎಸ್​.ಮೇಲಿನಮನಿ ಹೇಳಿದರು.
ನಗರದ ಲಿಂಗರಾಜ ಕಾಲೇಜಿನ ಎನ್​ಸಿಸಿ ಟಕದಿಂದ ಆಯೋಜಿಸಿದ್ದ ವಿಶ್ವ ಪರಿಸರ ದಿನ ಕಾರ್ಯಕ್ರಮದಲ್ಲಿ ಮಾತನಾಡಿ, ಜಾಗತಿಕ ತಾಪಮಾನ ಹೆಚ್ಚಳದಿಂದ ಪರಿಸರದಲ್ಲಿ ಅಸಮತೋಲನ ಹೆಚ್ಚಿದೆ. ಇದರಿಂದ ಸಾಕಷ್ಟು ತೊಂದರೆ ಉಂಟಾಗುತ್ತಿದ್ದು. ಪರಿಸರ ಸಂರಕ್ಷಣೆ ಅರಿವು ಎಲ್ಲರಲ್ಲೂ ಮೂಡಬೇಕು ಎಂದರು.
ಪ್ರತಿಯೊಬ್ಬರಲ್ಲೂ ಪರಿಸರ ಉಳಿಸುವ ಕಾಳಜಿ ಇರಬೇಕು. ಬಹುಭಾಗ ಕಾಡು ಇಂದು ಅಳಿವಿನಂಚಿಗೆ ತಲುಪಿದೆ. ಪರಿಸ್ಥಿತಿ ಹೀಗೆಯೇ ಮುಂದುವರಿದರೆ ಜೀವಸಂಕುಲದ ಅಳಿವು ನಿಶ್ಚಿತ. ಹೆಚ್ಚು ಮರಗಳನ್ನು ಬೆಳೆಸಿ, ಪರಿಸರವನ್ನು ನಾವೆಲ್ಲರೂ ಸಂರಸೋಣ ಎಂದರು.
ಎನ್​ಸಿಸಿ ಅಧಿಕಾರಿ ಮೇಜರ್​ ಡಾ.ಮಹೇಶ ಗುರನಗೌಡರ ಮಾತನಾಡಿ, ಹಸಿರೇ ಉಸಿರು, ನಮ್ಮ ಪರಿಸರವನ್ನು ಹಸಿರು ಹೊನ್ನಾಗಿ ಮಾಡಬೇಕಿದೆ. ಸಾಲುಮರದ ತಿಮ್ಮಕ್ಕನಂಥವರು ನಮಗೆ ಆದರ್ಶರಾಗಬೇಕಿದೆ. ಪರಿಸರವನ್ನು ಉಳಿಸುವುದು ನಮ್ಮ ಆದ್ಯಕರ್ತವ್ಯವಾಗಿದೆ. ಅನುದಿನವೂ ಪರಿಸರ ದಿನವಾಗಿರಬೇಕೆಂದು ತಿಳಿಸಿದರು.
ಎನ್​ಸಿಸಿ ಕೆಡೆಟ್​ಗಳು ಲಿಂಗರಾಜ ಕಾಲೇಜು ರಸ್ತೆಯಲ್ಲಿ ಪರಿಸರ ಜಾಗೃತಿಯ ರ್ಯಾಲಿ ಕೈಗೊಂಡು ಭಿತ್ತಿಪತ್ರಗಳ ಮೂಲಕ ೂಷಣೆ ಕೂಗಿದರು. ಪಿಯು ಪ್ರಾಚಾಯೆರ್ ಗಿರಿಜಾ ಹಿರೇಮಠ, ಡಾ.ಎಚ್​.ಎಂ.ಚನ್ನಪ್ಪಗೋಳ, ಪೊ.ಎಚ್​.ಪಿ.ನಂದಿನಿ, ಪೊ.ವಿ.ಪಿ.ಹಿರೇಮಠ, ಸಾರಿಕಾ ನಗರೆ, ಶ್ರದ್ಧಾ ಜೋಶಿ, ಸಿ.ಎಸ್​.ಪಾಟೀಲ, ಸುನೀತ ಮೂಡಲಗಿ, ವಿಶ್ವನಾಥ ಖೋತ, ವಿಜಯಲಕ್ಷಿ$್ಮ ಬಬಲಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net