ಬೆಳಗಾವಿ:ಕಾಯಕವೇ ಕೈಲಾಸ ಎಂಬ ಬಸವವಾಣಿ ಅಳವಡಿಸಿಕೊಳ್ಳುವ ಮೂಲಕ ಬಸವಣ್ಣನವರ ಆದರ್ಶ ಪಾಲಿಸಿ ಉತ್ತಮ ಸಮಾಜ ನಿರ್ಮಿಸಬೇಕು ಎಂದು ನಂದಿಕುರಳಿ ಪಂಚಲಿಂಗೇಶ್ವರ ಮಠದ ವೀರಭದ್ರ ಸ್ವಾಮೀಜಿ ಹೇಳಿದರು.
ರಾಯಬಾಗ ತಾಲೂಕಿನ ಬಾವನಸೌಂದತ್ತಿ ಗ್ರಾಮದ ಬಸವ ವೃತ್ತದಲ್ಲಿ ಬಸವ ಜಯಂತಿ ನಿಮಿತ್ತ ಸೋಮವಾರ ಬಸವೇಶ್ವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು.
ಮಹಾದೇವ ಮಂದಿರದಲ್ಲಿ ಮಹಿಳೆಯರಿಂದ ತೊಟ್ಟಿಲು ಪೂಜೆ ಹಾಗೂ ಶಿವಭಜನೆ ಕಾರ್ಯಕ್ರಮ ಜರಗಿತು. ಸಂಜೆ ಸಾವಿರಾರು ಮಹಿಳೆಯರಿಂದ ಕುಂಭಮೆರವಣಿಗೆ ಹಾಗೂ ವಾದ್ಯ ಮೇಳದೊಂದಿಗೆ ಬಸವ ಭಾವಚಿತ್ರದ ಮೆರವಣಿಗೆ ನಡೆಸಲಾಯಿತು. ರಾತ್ರಿ ಅನ್ನಪ್ರಸಾದ ನೆರವೇರಿತು.