ಅರಿಶಿಣ ಕೆರೆಯಲ್ಲಿ ಸಾವಿರಾರು ಮೀನುಗಳು ಮೃತಪಟ್ಟಿದ್ದು, ಕೂಡಲೇ ಪರಿಹಾರ ನೀಡಬೇಕೆಂದು ಆಗ್ರಹಿಸಿ ಮೀನುಗಾರರು ಚನ್ನಮ್ಮನ ಕಿತ್ತೂರು ಪಟ್ಟಣದಲ್ಲಿ ಪಪಂ ಮುಖ್ಯಾಧಿಕಾರಿ ಮಲ್ಲಯ್ಯ ಹಿರೇಮಠಗೆ ಮನವಿ ಸಲ್ಲಿಸಿದರು. ಜಿತೇಂದ್ರ ಕಟ್ಟಿಮನಿ, ಪುಂಡಲೀಕ ಯಕ್ಕುಂಡಿ, ಮಡವಾಳಿ ಕಟ್ಟಿಮನಿ ಇತರರಿದ್ದರು.
Published on:
Copied
Follow Us
ಚನ್ನಮ್ಮನ ಕಿತ್ತೂರು:
ರಾಣಿ ಚನ್ನಮ್ಮ ಮೆಮೊರಿಯಲ್ ಮೀನುಗಾರಿಕೆ ಸಹಕಾರ ಸಂಘದ ಅಧ್ಯಕ್ಷ ಬಸವರಾಜ ಬೋವಿ ಮಾತನಾಡಿ, ಕೆರೆ ಬಳಿಯಿರುವ ಕಸಾಯಿಖಾನೆಯ ತ್ಯಾಜ್ಯ ಕೆರೆಯಲ್ಲಿ ಎಸೆಯುತ್ತಾರೆ. ಸುತ್ತಮುತ್ತಲಿನ ಜನರು ಎಸೆಯುವ ಸತ್ತ ಪ್ರಾಣಿ, ವಿವಿಧ ತ್ಯಾಜ್ಯ ಹಾಗೂ ಚರಂಡಿ ನೀರಿನಿಂದ ಕೆರೆ ಗಬ್ಬೆದ್ದು ಹೋಗಿದೆ.
ಹೀಗಾಗಿ, ಮೀನುಗಾರರಿಗೆ ಸರ್ಕಾರ ಶೀಘ್ರವೇ ಪರಿಹಾರ ವಿತರಿಸಬೇಕೆಂದು ಒತ್ತಾಯಿಸಿದರು. ಮುಖಂಡರಾದ ಜಿತೇಂದ್ರ ಕಟ್ಟಿಮನಿ, ಪುಂಡಲೀಕ ಯಕ್ಕುಂಡಿ, ಮಡವಾಳಿ ಕಟ್ಟಿಮನಿ, ಮಂಜುನಾಥ ಬೋವಿ, ರವಿ ಭೋವಿ ಇತರರಿದ್ದರು.