ಬೆಳಗಾವಿ: ಮಾರ್ಚ್ ತಿಂಗಳ ಗೃಹಲಕ್ಷ್ಮಿ ಕಂತು ನಾಲ್ಕೈದು ದಿನದಲ್ಲಿ ಹಾಗೂ ಏಪ್ರಿಲ್ ತಿಂಗಳ ಕಂತು 8-10 ದಿನಗಳಲ್ಲಿ ಫಲಾನುಭ ವಿಗಳ ಖಾತೆಗೆ ಜಮೆಯಾಗಲಿದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದರು. ತಾಲೂಕಿನ ಬಾಕನೂರು ಗ್ರಾಮದಲ್ಲಿ ಸೋಮವಾರ ಜಾತ್ರೆಯಲ್ಲಿ ಪಾಲ್ಗೊಂಡ ಅವರು ಮಹಾಲಕ್ಷ್ಮೀ ದೇವಿಗೆ ಪೂಜೆ ಸಲ್ಲಿಸಿ ಮಾತನಾಡಿದರು. ಈ ಕ್ಷೇತ್ರದಲ್ಲಿ ಹಿಂದೆ ಆಯ್ಕೆಯಾದವರು ಕೇವಲ ಹಿಂದುತ್ವ ಎನ್ನುತ್ತ ಓಡಾಡಿರುವುದು ಬಿಟ್ಟು ಬೇರೇನೂ ಮಾಡಿಲ್ಲ. ಪ್ರತಿ ಸಮುದಾಯಕ್ಕೆ ಸಹಾಯ ವಾಗುವ ರೀತಿ ಕೆಲಸ ಮಾಡುತ್ತಿದ್ದೇನೆ. ಸರ್ವ ಭಾಷಿಕ, ಸರ್ವ ಜಾತಿ ಜನರ ಕೆಲಸ ಮಾಡುತ್ತಿದ್ದೇನೆ. ಕ್ಷೇತ್ರದ ರೈತರು ವರ್ಷಕ್ಕೆ ಎರಡ್ಮೂರು ಬೆಳೆ ತೆಗೆಯಲು ಅನುಕೂಲ ವಾಗುವಂತೆ ನೀರಾವರಿ ಸೌಲಭ್ಯ ಒದಗಿ ಸುವ ಕಸನು ಹೊಂದಿದ್ದೇನೆ ಎಂದರು.ಕಾಡಾ ಅಧ್ಯಕ್ಷ ಯುವರಾಜ ಕದಂ, ಯುವ ಮುಖಂಡ ಮೃಣಾಲ ಹೆಬ್ಬಾಳ್ಕರ್ ಇದ್ದರು.