ಅನ್ನೋತ್ಸವ ಪ್ರದರ್ಶನ ಮಳಿಗೆಗೆ ಭೂಮಿಪೂಜೆ

ಬೆಳಗಾವಿಯ ಸಾವಗಾವಿ ರಸ್ತೆಯ ಅಂಗಡಿ ಕಾಲೇಜ್ ಮೈದಾನದಲ್ಲಿ ಈಚೆಗೆ ಜರುಗಿದ ಅನ್ನೋತ್ಸವ ಮಳಿಗೆ ಭೂಮಿಪೂಜೆಯಲ್ಲಿ ಮನೋಜ ಮೈಕಲ್, ವಿನಾಯಕ ನಾಯ್ಕ, ಸಂತೋಷ ಪಾಟೀಲ, ಶರದ ಪೈ ಇತರರಿದ್ದರು.
ಬೆಳಗಾವಿಯ ಸಾವಗಾವಿ ರಸ್ತೆಯ ಅಂಗಡಿ ಕಾಲೇಜ್ ಮೈದಾನದಲ್ಲಿ ಈಚೆಗೆ ಜರುಗಿದ ಅನ್ನೋತ್ಸವ ಮಳಿಗೆ ಭೂಮಿಪೂಜೆಯಲ್ಲಿ ಮನೋಜ ಮೈಕಲ್, ವಿನಾಯಕ ನಾಯ್ಕ, ಸಂತೋಷ ಪಾಟೀಲ, ಶರದ ಪೈ ಇತರರಿದ್ದರು.
Published on
ಬೆಳಗಾವಿ: ರೋಟರಿ ಕ್ಲಬ್ ಆಫ್ ಬೆಳಗಾವಿಯಿಂದ ಜ.9ರಿಂದ 18ರವರೆಗೆ ಸಾವಗಾವಿ ರಸ್ತೆಯ ಅಂಗಡಿ ಕಾಲೇಜ್ ಮೈದಾನದಲ್ಲಿ 28ನೇ ‘ಅನ್ನೋತ್ಸವ-2026’ ಆಯೋಜಿಸಲಾಗಿದೆ ಎಂದು ಕಾರ್ಯಕ್ರಮದ ಅಧ್ಯಕ್ಷ ಮನೋಜ ಮೈಕಲ್ ತಿಳಿಸಿದರು.
ಈಚೆಗೆ ಜರುಗಿದ ಅನ್ನೋತ್ಸವ ಮಳಿಗೆ ನಿರ್ಮಾಣದ ಭೂಮಿಪೂಜೆ ಸಮಾರಂಭದಲ್ಲಿ ಮಾತನಾಡಿ, ಈ ಸಲ ಸಾರ್ವಜನಿಕರ ಅನುಕೂಲಕ್ಕಾಗಿ ಆನ್‌ಲೈನ್ ಟಿಕೆಟ್ ಬುಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ. ಪ್ರದರ್ಶನದಲ್ಲಿ ಗೃಹೋಪಯೋಗಿ ವಸ್ತುಗಳ ಜನತೆ ವಿವಿಧ ಖಾದ್ಯ ಸೇರಿ ಒಟ್ಟು 181 ಸ್ಟಾಲ್‌ಗಳಿರಲಿವೆ.
ಮಿಸ್ಟರ್ ಮತ್ತು ಮಿಸ್ ಬೆಳಗಾವಿ ಸ್ಪರ್ಧೆ ಜತೆಗೆ ವಿವಿಧ ಮನರಂಜನಾ ಕಾರ್ಯಕ್ರಮಗಳಿರುತ್ತವೆ ಎಂದರು. ರೋಟರಿ ಕ್ಲಬ್ ಅಧ್ಯಕ್ಷ ವಿನಾಯಕ ನಾಯ್ಕ, ಕಾರ್ಯದರ್ಶಿ ಸಂತೋಷ ಪಾಟೀಲ, ಶರದ ಪೈ, ಜಯದೀಪ ಸಿದ್ದಣ್ಣವರ, ಪರಾಗ ಭಂಡಾರಿ, ನಿರಂಜನ ಸಂತ, ಮನೋಜ ಪೈ, ಉಮೇಶ ಸರ್ನೋಬತ್, ರಾಜು ಪೋತದಾರ, ಅಕ್ಷಯ ಕುಲಕರ್ಣಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net