ಮಕ್ಕಳನ್ನೇ ದೇಶದ ಆಸ್ತಿಯನ್ನಾಗಿ ರೂಪಿಸಿ

ಮಲ್ಲಮ್ಮನ ಬೆಳವಡಿ ಗ್ರಾಮದ ಆದರ್ಶ ಶಿಕ್ಷಣ ಸಂಸ್ಥೆಯ ಸ್ನೇಹಸಮ್ಮೇಳನದಲ್ಲಿ ಶಿವಾನಂದ ಗುರೂಜಿ, ಡಾ.ಅಯ್ಯನಗೌಡ ಪಾಟೀಲ, ರುದ್ರಯ್ಯ ರೊಟ್ಟಯ್ಯನವರ, ಚಂದ್ರಶೇಖರಯ್ಯ ಕಾರಿಮನಿ, ಪ್ರವೀಣ ಗಂಗೋಳ, ಮಹಾಂತೇಶ ಕಮತ ಇತರರಿದ್ದರು.
ಮಲ್ಲಮ್ಮನ ಬೆಳವಡಿ ಗ್ರಾಮದ ಆದರ್ಶ ಶಿಕ್ಷಣ ಸಂಸ್ಥೆಯ ಸ್ನೇಹಸಮ್ಮೇಳನದಲ್ಲಿ ಶಿವಾನಂದ ಗುರೂಜಿ, ಡಾ.ಅಯ್ಯನಗೌಡ ಪಾಟೀಲ, ರುದ್ರಯ್ಯ ರೊಟ್ಟಯ್ಯನವರ, ಚಂದ್ರಶೇಖರಯ್ಯ ಕಾರಿಮನಿ, ಪ್ರವೀಣ ಗಂಗೋಳ, ಮಹಾಂತೇಶ ಕಮತ ಇತರರಿದ್ದರು.
Published on
ಗ್ರಾಮದ ಆದರ್ಶ ಶಿಕ್ಷಣ ಸಂಸ್ಥೆಯ ಪೂರ್ವ ಪ್ರಾಥಮಿಕ, ಹಿರಿಯ ಪ್ರಾಥಮಿಕ ಹಾಗೂ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಈಚೆಗೆ ಹಮ್ಮಿಕೊಂಡಿದ್ದ 23ನೇ ವಾರ್ಷಿಕ ಸ್ನೇಹಸಮ್ಮೇಳನದ ಸಾನ್ನಿಧ್ಯವಹಿಸಿ ಮಾತನಾಡಿದರು.
ವೀರರಾಣಿ ಮಲ್ಲಮ್ಮ ಬ್ಯಾಂಕ್ ಅಧ್ಯಕ್ಷ ರುದ್ರಯ್ಯ ರೊಟ್ಟಯ್ಯನವರ ಮಾತನಾಡಿ, ಗುಣಮಟ್ಟದ ಶಿಕ್ಷಣ, ಮೂಲಸೌಕರ್ಯ, ಡಿಜಿಟಲ್ ಸೌಲಭ್ಯ ಮತ್ತು ನುರಿತ ಶಿಕ್ಷಕರಿಂದ ಶಿಕ್ಷಣ ಸಂಸ್ಥೆ ಹೆಮ್ಮರವಾಗಿ ಬೆಳೆಯಲು ಸಾಧ್ಯ ಎಂದರು.  ಗ್ರಾಪಂ ಅಧ್ಯಕ್ಷ ಚಂದ್ರಶೇಖರಯ್ಯ ಕಾರಿಮನಿ ಮಾತನಾಡಿ, ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿ ತಂದೆ-ತಾಯಿ, ವಿದ್ಯಾಸಂಸ್ಥೆಗೆ ಕೀರ್ತಿ ತರಬೇಕು ಎಂದು ಹೇಳಿದರು.
ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಾ.ಅಯ್ಯನಗೌಡ ಪಾಟೀಲ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಾಧಕ ವಿದ್ಯಾರ್ಥಿಗಳಿಗೆ ನಗದು ಬಹುಮಾನ ನೀಡಿ ಸತ್ಕರಿಸಲಾಯಿತು. ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಪೊಲೀಸ್ ಅಧಿಕಾರಿ ಪ್ರವೀಣ ಗಂಗೋಳ, ರೈತಸಂಘದ ಸ್ಥಾನಿಕ ಅಧ್ಯಕ್ಷ ಮಹಾಂತೇಶ ಕಮತ, ಗ್ರಾಪಂ ಸದಸ್ಯರಾದ ಬಸವರಾಜ ದೇಗಾವಿ, ವಿಶ್ವನಾಥ ಕರಿಕಟ್ಟಿ, ವಿಜಯಕುಮಾರ ಹೊಸಮನಿ, ಬಸನಗೌಡ ಪಾಟೀಲ, ನಿರ್ದೇಶಕಿ ಡಾ.ಮಂಗಳಾದೇವಿ ಪಾಟೀಲ, ಪ್ರಾಚಾರ್ಯ ಸುಜಾತಾ ಹಿರೇಮಠ, ಪ್ರಧಾನ ಕಾರ್ಯದರ್ಶಿ ಪ್ರವೀಣ ರಾನೋಜಿ ಉಪಸ್ಥಿತರಿದ್ದರು. ಮಲ್ಲಿಕಾರ್ಜುನಗೌಡ ಪಾಟೀಲ ನಿರೂಪಿಸಿದರು. ಚಂದ್ರಶೇಖರ ಪಾಟೀಲ ವಂದಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net