ದಿ.ಬಿ.ಆರ್.ಸಂಗಪ್ಪಗೋಳ ಹಾಕಿ ಕೊಟ್ಟ ಭದ್ರ ಬುನಾದಿಯೊಂದಿಗೆ ರಾಜ್ಯದಲ್ಲಿ ವಿಶೇಷ ಛಾಪು ಮೂಡಿಸುತ್ತಿರುವ ಮಜಲಟ್ಟಿ ಸರ್ಕಾರಿ
ಕಾಲೇಜು ಅಭಿವೃದ್ಧಿಗೆ ಸದಾ ಸಿದ್ಧ ಎಂದು ಶಾಸಕ ಡಿ.ಎಂ.ಐಹೊಳೆ ಹೇಳಿದರು.
ಮಜಲಟ್ಟಿ ಗ್ರಾಮದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಪಿಯುಸಿಯಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ವಿತರಣೆ, ನಿವೃತ್ತ ಪ್ರಾಂಶುಪಾಲ ಆನಂದ ಕೊಳಿಗೆ ಸನ್ಮಾನ ಹಾಗೂ ಸ್ವಾಗತ
ಸಮಾರಂಭದಲ್ಲಿ ಮಾತನಾಡಿ, ಸ್ಥಳೀಯರ ಸಹಕಾರ, ಶಿಕ್ಷಣ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿರುವವರ ಶ್ರಮದಿಂದಾಗಿ ಕಾಲೇಜು ಗುಣಮಟ್ಟದ ಶಿಕ್ಷಣಕ್ಕೆ ಗುರುತಿಸುವಂತಾಗಿದೆ ಎಂದರು.
ನಿವೃತ್ತ ಪ್ರಾಂಶುಪಾಲ ಆನಂದ ಕೋಳಿ ಸನ್ಮಾನ ಸ್ವೀಕರಿಸಿ ಮಾತನಾಡಿ, ಕಾಲೇಜಿನ ಯಶಸ್ಸಿಗೆ ಪ್ರತಿಯೊಬ್ಬರೂ ಕಾರಣೀಕರ್ತರಾಗಿರುತ್ತಾರೆ. ಕಾಲೇಜಿನ ಅಭಿವೃದ್ಧಿ ಕಾರ್ಯಕ್ಕೆ ಅನುದಾನ ನೀಡಿದ ಶಾಸಕರ ಕಾರ್ಯ ಶ್ಲಾಘನೀಯ ಎಂದರು.
ಚಂದರಗಿ ಕ್ರೀಡಾ ಶಾಲೆ ಉಪಾಧ್ಯಕ್ಷ ಮಹೇಶ ಬಾತೆ ಮಾತನಾಡಿ, ಶಿಕ್ಷಣದ ಸಸಿ ನೆಟ್ಟು ಬಡ ಮಕ್ಕಳಿಗೆ ಶಿಕ್ಷಣ ಕಲ್ಪಿಸುವ ಮಹದಾಸೆ ಹೊಂದಿದ್ದ ದಿ.ಬಿ.ಆರ್.ಸಂಗಪ್ಪಗೋಳ ಕಾರ್ಯ ಮಾದರಿ ಎಂದರು.
ದ್ವಿತೀಯ ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ 5 ವಿದ್ಯಾರ್ಥಿನಿಯರಿಗೆ ಲಾಪ್‌ಟಾಪ್ ವಿತರಿಸಲಾಯಿತು.
ಪ್ರಭಾರ ಡಿಡಿಪಿಯು ಬಸವರಾಜ ಹಾದಿಮನಿ, ನಿವೃತ್ತ ಡಿಡಿಪಿಐ ಪಿ.ಐ.ಭಂಡಾರೆ, ವಿ.ಎನ್.ಶಿರಗಾಂವಕರ, ಸದಾಶಿವ ೋರ್ಪಡೆ, ಚಿಕ್ಕೋಡಿ ಜಿಲ್ಲಾ ಸರ್ಕಾರಿ ನೌಕರ ಸಂಘದ ಅಧ್ಯಕ್ಷ ಬಿ.ಎ.ಕುಂಬಾರ,
ಕೆ.ಪಿ.ತಂಗಡಿ, ವಿಜಯ ಕೋಠಿವಾಲೆ, ದುಂಡಪ್ಪ ಉಪ್ಪಾರ, ವಿಶ್ವನಾಥ ಚೌಗಲಾ, ರವೀಂದ್ರ ಕಾಗಲೆ, ಹನುಮಂತ ಟಕ್ಕನ್ನವರ, ಉಪನ್ಯಾಸಕ ಜಿ.ಆರ್.ಬಿರಾದಾರ, ವಿಜಯ ಶೆಟ್ಟಿ ಇತರರಿದ್ದರು.