ಮಹಾದೇವ ಸ್ವಾಮಿ ಜಾತ್ರೆ 23ರಿಂದ

ಜನವಾಡ ಗ್ರಾಮದಲ್ಲಿ ಮಹದೇವಸ್ವಾಮಿ ಜಾತ್ರೆ ಕುರಿತು ಗ್ರಾಪಂ ಮಾಜಿ ಸದಸ್ಯ ಉದಯಕುಮಾರ ಪಾಟೀಲ ಮಾಹಿತಿ ನೀಡಿದರು. ಪಿರಗೊಂಡಾ ಮಗದುಮ್ಮ, ಸುಭಾಸ ಪಾಟೀಲ, ಪೀರಗೊಂಡಾ ಚೌಗುಲೆ, ಜೀವನ ಮಡಿವಾಳ ಇದ್ದಾರೆ.
ಜನವಾಡ ಗ್ರಾಮದಲ್ಲಿ ಮಹದೇವಸ್ವಾಮಿ ಜಾತ್ರೆ ಕುರಿತು ಗ್ರಾಪಂ ಮಾಜಿ ಸದಸ್ಯ ಉದಯಕುಮಾರ ಪಾಟೀಲ ಮಾಹಿತಿ ನೀಡಿದರು. ಪಿರಗೊಂಡಾ ಮಗದುಮ್ಮ, ಸುಭಾಸ ಪಾಟೀಲ, ಪೀರಗೊಂಡಾ ಚೌಗುಲೆ, ಜೀವನ ಮಡಿವಾಳ ಇದ್ದಾರೆ.
Published on
ಬೋರಗಾಂವ: ಸಮೀಪದ ಜನವಾಡ ಗ್ರಾಮದ ಧರ್ಮರ ಮಠದ ಮಹಾದೇವ ಸ್ವಾಮಿ ಜಾತ್ರೆ ಫೆ.23ರಿಂದ ಮಾ.1ರ ವರೆಗೆ ನಡೆಯಲಿದೆ ಎಂದು ಗ್ರಾಪಂ ಮಾಜಿ ಸದಸ್ಯ ಉದಯಕುಮಾರ ಪಾಟೀಲ ಹೇಳಿದರು.
ಜನವಾಡ ಗ್ರಾಮದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಫೆ.23ರಂದು ಬೆಳಗ್ಗೆ ಮಹಾದೇವ ಸ್ವಾಮಿ ದಂಡವತ ಮತ್ತು ನೈವೇದ್ಯ, ಫೆ.24ರಂದು ಆದಿಶಕ್ತಿ ದೇವಿ ಪೂಜೆ, ನೈವೇದ್ಯ ಮತ್ತು ಉಡಿತುಂಬುವ ಕಾರ್ಯಕ್ರಮ, ಫೆ.25ರಂದು ಬೆಳಗ್ಗೆ ಮಹಾಪ್ರಸಾದ, ಫೆ.26ರಂದು ಮಧ್ಯಾಹ್ನ ಜಾನುವಾರು ಪ್ರದರ್ಶನ ಜರುಗಲಿದ್ದು, ಜಾತ್ರೆಗೆ ಸಕಲ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದರು.
ಸುಭಾಸ ಪಾಟೀಲ, ಪಿರಗೊಂಡಾ ಮಗದುಮ್ಮ, ಪೀರಗೊಂಡಾ ಚೌಗುಲೆ, ಜೀವನ ಮಡಿವಾಳ, ಲಿಂಗನಗೌಡ ಪಾಟೀಲ, ಲಕ್ಷ್ಮಣ ಘಾಟಗೆ, ಸುಭಾಸ ಮಧಾಳೆ, ಸಂತೋಷ ಹಂಡೆ, ಶರದ ಭಂಡಾರಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net