ಬರಹಗಾರರಿಗೆ ಮಹಾಭಾರತ ಅಕ್ಷಯ ಪಾತ್ರೆ

ಬೆಳಗಾವಿಯಲ್ಲಿ ಶನಿವಾರ ಆಯೋಜಿಸಿದ್ದ ನಾಟಕೋತ್ಸವ ಉದ್ಘಾಟನೆಯಲ್ಲಿ ಝಾಕೀರ ನದ್ಾ, ಶಿರೀಷ ಜೋಶಿ, ಎಲ್.ಎಸ್.ಶಾಸಿ, ಡಾ.ಅರವಿಂದ ಕುಲಕರ್ಣಿ ಇತರರಿದ್ದರು.
ಬೆಳಗಾವಿಯಲ್ಲಿ ಶನಿವಾರ ಆಯೋಜಿಸಿದ್ದ ನಾಟಕೋತ್ಸವ ಉದ್ಘಾಟನೆಯಲ್ಲಿ ಝಾಕೀರ ನದ್ಾ, ಶಿರೀಷ ಜೋಶಿ, ಎಲ್.ಎಸ್.ಶಾಸಿ, ಡಾ.ಅರವಿಂದ ಕುಲಕರ್ಣಿ ಇತರರಿದ್ದರು.
Published on
ಬೆಳಗಾವಿ : ಬಹಳಷ್ಟು ಲೇಖಕರು ಮಹಾಭಾರತವನ್ನಿಟ್ಟುಕೊಂಡು ಕತೆ, ಕಾದಂಬರಿ ನಾಟಕ ಬರೆದಿದ್ದು, ಮಹಾಭಾರತವೆನ್ನುವುದು ಬರೆಹಗಾರರಿಗೆ ಒಂದು ಅಕ್ಷಯ ಪಾತ್ರೆಯಾಗಿದೆ ಎಂದು ಹಿರಿಯ ರಂಗಕರ್ಮಿ ಶಿರೀಷ ಜೋಶಿ ಹೇಳಿದರು.
ಕೋನವಾಳ ಬೀದಿಯ ಲೋಕಮಾನ್ಯ ರಂಗಮಂದಿರದಲ್ಲಿ ಶನಿವಾರ ರಂಗಸಂಪದ ಏರ್ಪಡಿಸಿದ್ದ ಅಧಿಕಮಾಸ ನಾಟಕೋತ್ಸವದ ಉದ್ಘಾಟನೆಯಲ್ಲಿ ಅವರು ಅವರು ಮಾತನಾಡಿದರು. ರಂಗ ನಿರ್ದೇಶಕ ಝಾಕೀರ ನದ್ಾ ನಾಟಕೋತ್ಸವ ಉದ್ಘಾಟಿಸಿದರು.
ಬಳಿಕ ಎಲ್.ಎಸ್.ಶಾಸ್ತ್ರಿ ರಚನೆಯ ‘ಭಾನುಮತಿ’ ನಾಟಕವು ಡಾ.ಅರವಿಂದ ಕುಲಕರ್ಣಿ ನಿರ್ದೇಶನದಲ್ಲಿ ಪ್ರದರ್ಶನಗೊಂಡಿತು. ಪದ್ಮಾ ಕುಲಕರ್ಣಿ ಭಾನುಮತಿ ಪಾತ್ರದಲ್ಲಿ ಮನೋಜ್ಞ ಅಭಿನಯ ನೀಡಿದರು. ಪ್ರಸಾದ ಕಾರಜೋಳ, ವಿನುತ ಗೆಜ್ಜ, ಅರವಿಂದ ಪಾಟೀಲ, ಶರಣಯ್ಯ ಮಠಪತಿ, ಅಂಜನಾ, ಉಜ್ವಲಾ, ಸೌರಭ, ಶಿವಾನಂದ ವಿವಿಧ ಪಾತ್ರಗಳನ್ನು ನಿರ್ವಹಿಸಿದರು.
ಭಾನುವಾರ ಸಂಜೆ ಬೆಂಗಳೂರಿನ ರಂಗ ಬದುಕು ಟ್ರಸ್ಟ್‌ನಿಂದ ಪ್ರೊ..ರಹಮತ ತರೀಕೇರೆ ಕೃತಿ ಆಧಾರಿತ ‘ಅಮೀರಬಾಯಿ ಕರ್ನಾಟಕಿ’ ನಾಟಕ ಪ್ರದರ್ಶನಗೊಂಡಿತು. ಡಾ.ಬೇಲೂರು ರಘುನಂದನರ ರಂಗಪಠ್ಯ, ವಿನ್ಯಾಸ ಮತ್ತು ನಿರ್ದೇಶನವಿತ್ತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net