ಮದ್ಲೂರ ಕಲ್ಮೇಶ್ವರ ಜಾತ್ರೆ

ಕಲ್ಮೇಶ್ವರ ದೇವರು
ಕಲ್ಮೇಶ್ವರ ದೇವರು
Published on
ಬೆಳಗಾವಿ: .ಯರಗಟ್ಟಿ ತಾಲೂಕಿನ ಮದ್ಲೂರು ಗ್ರಾಮದ ಶ್ರೀ ಕಲ್ಮೇಶ್ವರ ಜಾತ್ರಾ ಮಹೋತ್ಸವ ಪ್ರಯುಕ್ತ ಫೆ.14ರಿಂದ 16ರವರೆಗೆ ವಿವಿಧ ಕಾರ್ಯಕ್ರಮ ಆಯೋಜಿಸಲಾಗಿದೆ.
ಫೆ. 14ರಂದು ಕಲ್ಮೇಶ್ವರ ಗದ್ದುಗೆ ಪೂಜೆ, ಫೆ.  15ರಂದು ಕಲ್ಮೇಶ್ವರ ದೇವರಿಗೆ ರುದ್ರಾಭಿಷೇಕ,  ಕಳಸಾರೋಹಣ, ಫೆ. 16ರಂದು ಕಲ್ಮೇಶ್ವರ ಪಲ್ಲಕ್ಕಿ ಉತ್ಸವವು ನಂದಿಕೋಲು ಡೊಳ್ಳು ವಾದನ ಭಜನೆ ಜತೆಗೆ ಶ್ರೀ ವಿಠಲಮಂದಿರದಿಂದ ಪ್ರಾರಂಭವಾಗಿ ಕಲ್ಮೇಶ್ವರ ದೇವಸ್ಥಾನವರೆಗೆ ನಡೆಯುವುದು.
ಬಳಿಕ ಮಧ್ಯಾಹ್ನ ಸಾಮೂಹಿಕ ವಿವಾಹ, ಸಂಜೆ  ಕಲ್ಮೇಶ್ವರ ರಥೋತ್ಸವದಲ್ಲಿ ಮುನವಳ್ಳಿ ಸೋಮಶೇಖರಮಠದ ಮುರಗೇಂದ್ರ ಸ್ವಾಮೀಜಿ, ಇಂಚಗೇರಿ ಮಠದ ಪ್ರಭು ಮಹಾರಾಜ,  ಶಿವಾನಂದ ಸ್ವಾಮೀಜಿ,  ಸುವರ್ಣ ತಾಯಿ ಹೊಸಮಠ, ಪ್ರೇಮಾ,  ಭೀಮಾನಂದ ಸ್ವಾಮೀಜಿ,  ಹಿರೇಮಠ ಬಸಯ್ಯ ಸ್ವಾಮಿ ಪೂಜಾರಿ ಪಾಲ್ಗೊಳ್ಳುವರು ಎಂದ ಪ್ರಕಟಣೆ ತಿಳಿಸಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net