ಮಾನವ ಜೀವನದ ಶ್ರೇಷ್ಠ ಮೌಲ್ಯ ಪ್ರೀತಿ

ರಡ್ಡೇರಹಟ್ಟಿಯಲ್ಲಿ ಅಭಿನವ ಮೃತ್ಯುಂಜಯ ಸ್ವಾಮೀಜಿ ಮಾತನಾಡಿದರು. ಡಾ.ಮಹಾಂತಪ್ರಭು ಸ್ವಾಮೀಜಿ, ಅಮರೇಶ್ವರ ಮಹಾರಾಜರು, ಅಭಿನವ ಸಿದ್ಧಾರೂಢ ಸ್ವಾಮೀಜಿ ಇತರರಿದ್ದರು.
ರಡ್ಡೇರಹಟ್ಟಿಯಲ್ಲಿ ಅಭಿನವ ಮೃತ್ಯುಂಜಯ ಸ್ವಾಮೀಜಿ ಮಾತನಾಡಿದರು. ಡಾ.ಮಹಾಂತಪ್ರಭು ಸ್ವಾಮೀಜಿ, ಅಮರೇಶ್ವರ ಮಹಾರಾಜರು, ಅಭಿನವ ಸಿದ್ಧಾರೂಢ ಸ್ವಾಮೀಜಿ ಇತರರಿದ್ದರು.
Published on

ಅಥಣಿ ಗ್ರಾಮೀಣ: ಹಣ, ಆಸ್ತಿ, ಆಭರಣಗಳಿಂದ ಬದುಕು ಬಂಗಾರವಾಗುವುದಿಲ್ಲ. ಪರಮಾತ್ಮನ ಕರುಣೆ ಲಭಿಸಬೇಕಾದರೆ ಭಕ್ತಿ, ಸತ್ಯ, ನಿಸ್ವಾರ್ಥ ಸೇವೆ, ಸಹಾನುಭೂತಿ, ಪ್ರೀತಿ, ಕರುಣೆ ಮಾರ್ಗದಲ್ಲಿ ನಡೆಯಬೇಕು ಎಂದು ಮಣಕವಾಡ ಅನ್ನದಾನೇಶ್ವರ ಮಹಾಮಠದ ಅಭಿನವ ಮೃತ್ಯುಂಜಯ ಸ್ವಾಮೀಜಿ ಹೇಳಿದರು.

ಅಥಣಿ ತಾಲೂಕಿನ ರಡ್ಡೇರಹಟ್ಟಿ ಗ್ರಾಮದ ಮರಡಿ ಬಸವೇಶ್ವರ ಜಾತ್ರಾ ಮಹೋತ್ಸವ ನಿಮಿತ್ತ ಶನಿವಾರ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಭಜನಾ ಪಂದ್ಯಾವಳಿ ಉದ್ಘಾಟನೆ ಸಮಾರಂಭದಲ್ಲಿ ಮಾತನಾಡಿದ ಅವರು, ದಯೆ, ಪ್ರೀತಿ ಮಾನವ ಜೀವನದ ಶ್ರೇಷ್ಠ ಮೌಲ್ಯಗಳಾಗಿವೆ. ಭಾರತ ವೈವಿಧ್ಯಮಯ ಸಂಸ್ಕೃತಿ, ಪರಂಪರೆ ಹಾಗೂ ಆಧ್ಯಾತ್ಮಿಕ ಹಿನ್ನೆಲೆ ಹೊಂದಿರುವ ಪುಣ್ಯಭೂಮಿ ಎಂದರು.
ಶೇಗುಣಸಿ ವೀರಕ್ತಮಠದ ಡಾ.ಮಹಾಂತಪ್ರಭು ಸ್ವಾಮೀಜಿ ಮಾತನಾಡಿ, ಜೀವನದಲ್ಲಿ ದೇವರ ಮೇಲಿನ ನಂಬಿಕೆಯೊಂದಿಗೆ ಸತ್ಯ, ಧರ್ಮ, ಪ್ರೀತಿ, ದಯೆ ಮತ್ತು ಸೇವಾ ಮನೋಭಾವದಿಂದ ನಡೆದಾಗ ಜೀವನ ಸಾರ್ಥಕವಾಗುತ್ತದೆ. ಭಕ್ತರು ಆಧ್ಯಾತ್ಮಿಕ ಚಿಂತನೆಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸಮಾಜದ ಒಳಿತಿಗೆ ಶ್ರಮಿಸಬೇಕು ಎಂದರು.
ಕೌಲಗುಡ್ಡದ ಸಿದ್ಧಸಿರಿ ಅಮರೇಶ್ವರ ಮಹಾರಾಜರು, ಹುಬ್ಬಳ್ಳಿ ಶಾಂತಾಶ್ರಮದ ಅಭಿನವ ಸಿದ್ಧಾರೂಢ ಸ್ವಾಮೀಜಿ ಆಶೀರ್ವಚನ ನೀಡಿದರು. ಮುಖಂಡ ಗಜಾನನ ಮಂಗಸೂಳಿ ಮಾತನಾಡಿದರು. ಇಂಚಗೇರಿಯ ರೇವಣಸಿದ್ಧೇಶ್ವರ ಮಹಾರಾಜರು, ಆಲಕನೂರಿನ ಬಸವಾನಂದ ಸ್ವಾಮೀಜಿ, ಗಿರೀಶ ಬಳ್ಳಗೇರಿ, ವಿಲಾಸರಾವ ಮಹಾರಾಜರು, ಗಿರೀಶ ಮಹಾರಾಜರು, ಗಿರೀಶ ನಾಯಿಕ, ಸಂಗಮೇಶ್ವರ ಖೋತ, ಈಶ್ವರ ವಜ್ರವಾಡ, ಅಶೋಕ ಯಲಡಗಿ, ಸಿದ್ದಪ್ಪ ಸಿಜೋಳಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net