ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕ್ಯಾಂಟೀನ್‌ಗಳಿಗೆ ಮೂರು ಹೊತ್ತು ಸೇರಿ ಪ್ರತಿದಿನ 1,500 ಪ್ಲೇಟ್ ಆಹಾರ ಪೂರೈಸುತ್ತಿವೆ. ಐ ಕ್ಯಾಂಟೀನ್‌ಗಳಲ್ಲಿ ಕ್ಯಾಂಟೀನ್‌ಗಳಲ್ಲಿ ಪ್ರತಿದಿನ ಒಬ್ಬ ವ್ಯಕ್ತಿಯ ಉಪಹಾರ, ಮಧ್ಯಾಹ್ನದ ಊಟ ಹಾಗೂ ರಾತ್ರಿಯ ಭೋಜನಕ್ಕೆ ಸೇರಿ ಒಟ್ಟು 61 ರೂ. ದರ ನಿಗದಿಪಡಿದೆ. ಇದರಲ್ಲಿ ಗ್ರಾಹಕರು ಬೆಳಗಿನ ಉಪಹಾರಕ್ಕೆ 5 ರೂ.ಮಧ್ಯಾಹ್ನ, ರಾತ್ರಿ ಊಟಕ್ಕೆ ತಲಾ 10 ರೂ. ದರ ನಿಗದಿ ಪಡಿಸಿದೆ. ಬಾಕಿ ಉಳಿದ 36 ರೂ. ನಗರ ಸ್ಥಳೀಯ ಸಂಸ್ಥೆಗಳು ಪಾವತಿಸುತ್ತಿವೆ. ಆದರೆ, ಗುರಿ ತಲುಪಿಸುವ ಹೆಸರಿನಲ್ಲಿ ನೈಜ ಗ್ರಾಹಕರಿಗಿಂತ ಹೆಚ್ಚಿನ ಸಂಖ್ಯೆಯನ್ನು ಲೆಕ್ಕದಲ್ಲಿ ತೋರಿಸಲಾಗುತ್ತಿದೆಯೇ ಎಂಬ ಅನುಮಾನಕ್ಕೆ ಇದೀಗ ಹೊಸ ನೋಂದಣಿ ವ್ಯವಸ್ಥೆ ಜಾರಿಗೆ ಬರಲಿದೆ ಎನ್ನುತ್ತಾರೆ ಅಧಿಕಾರಿಗಳು.