ಟ್ರ್ಯಾಕ್ಟರ್ ಬಾಡಿಗೆ, ಕಬ್ಬು ಕಟಾವು ಕಾರ್ಮಿಕರ ವೇತನ ನೀಡುವಂತೆ ಆಗ್ರಹಿಸಿ ಬೀರೇಶ್ವರ ಸಕ್ಕರೆ ಕಾರ್ಖಾನೆ ಕಚೇರಿಗೆ ಬೀಗ ಹಾಕಿ ಪ್ರತಿಭಟನೆ ನಡೆಸಿಸಲಾಯಿತು. ಬಾಬುರಾವ ಪಾಟೀಲ, ಬಸವರಾಜ ತಳವಾರ, ವಿಠ್ಠಲ ನಡಹಟ್ಟಿ, ಕರಿಯಪ್ಪ ಬಬಲ್ಯಾಗೋಳ ಇತರರಿದ್ದರು.
ಅಳಗವಾಡಿ: ಬೀರೇಶ್ವರ ಸಕ್ಕರೆ ಕಾರ್ಖಾನೆ ಟ್ರ್ಯಾಕ್ಟರ್ ಬಾಡಿಗೆ ಹಾಗೂ ಕಬ್ಬು ಕಟಾವು ಕಾರ್ಮಿಕರ ವೇತನ ಸುಮಾರು 24 ಕೋಟಿ ರೂ. ಬಾಕಿ ಉಳಿಸಿಕೊಂಡಿದೆ. ಕೂಡಲೇ ಬಾಕಿ ಉಳಿಸಿಕೊಂಡ ಬಿಲ್ ವಿತರಿಸಬೇಕೆಂದು ಆಗ್ರಹಿಸಿ ಮಂಗಳವಾರ ರೈತ ಸಂಘಟನೆ ಸದಸ್ಯರು, ಟ್ರಾೃಕ್ಟರ್ ಮಾಲೀಕರು ಹಾಗೂ ಕಬ್ಬು ಕಟಾವು ಕಾರ್ಮಿಕರು ಕಾರ್ಖಾನೆ ಕಾರ್ಯಾಲಯಕ್ಕೆ ಬೀಗ ಹಾಕಿ ಪ್ರತಿಭಟನೆ ನಡೆಸಿದರು.
ರಾಜ್ಯ ರೈತ ಸಂಘದ ಅಧ್ಯಕ್ಷ ಬಾಬುರಾವ ಪಾಟೀಲ ಮಾತನಾಡಿ, ಕಾರ್ಖಾನೆ ದುಡಿದ ಹಣ ನೀಡದಿರುವುದರಿಂದ ಟ್ರಾೃಕ್ಟರ್ ಮಾಲೀಕರು ಹಾಗೂ ಕಬ್ಬು ಕಟಾವು ಕಾರ್ಮಿಕರು ಜೀವನ ನಡೆಸುವುದು ಕಷ್ಟವಾಗಿದೆ. ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ. ಟ್ರ್ಯಾಕ್ಟರ್ ಹಾಗೂ ಕಾರ್ಮಿಕರ ವೇತನ ಬ್ಯಾಂಕ್ ಖಾತೆಗೆ ಜಮೆ ಮಾಡುವವರೆಗೂ ಇಲ್ಲಿಂದ ಕದಲುವುದಿಲ್ಲ ಎಂದು ತಿಳಿಸಿದರು.
ಕರಿಯಪ್ಪ ಬಬಲ್ಯಾಗೋಳ, ಬಸವರಾಜ ತಳವಾರ, ವಿಠ್ಠಲ ನಡಹಟ್ಟಿ, ದುಂಡಪ್ಪ ಮಗದುಮ್ಮ, ಗಂಗಾಧರ ಪಾಟೀಲ, ಸಚಿನ ಬಂತಿ, ಹಾಲಪ್ಪ ಜೋಡಟ್ಟಿ, ಸದಾಶಿವ ನಾಯಿಕ ಸೇರಿದಂತೆ ಇತರರು ಪಾಲ್ಗೊಂಡಿದ್ದರು.