ಅಕ್ಷರ ಜ್ಞಾನದ ಅರಿವು ಅಸ್ತಿತ್ವದ ಸಂಕೇತ

ಕಕಮರಿ ಶ್ರೀ ಗುರುದೇವ ಜ್ಞಾನಯೋಗಿ ಗುರುಕುಲ ಕನ್ನಡ ಮಾಧ್ಯಮ ಪ್ರಾಥಮಿಕ ಹಾಗೂ ಪ್ರೌಢಶಾಲೆಯ ಅಕ್ಷರಾಭ್ಯಾಸ ಕಾರ್ಯಕ್ರಮದಲ್ಲಿ ಆತ್ಮಾರಾಮ ಸ್ವಾಮೀಜಿ ಮಾತನಾಡಿದರು. ಅಪ್ಪಾಸಾಬ ವಾಲಿ, ಈರಪ್ಪ ದಳವಾಯಿ, ಶಂಕರ ಹೂಗಾರ, ಗುರುದೇವ ಪುಠಾಣಿ, ಸಂಗಮೇಶ ಬಿಳ್ಳೂರ, ಎಂ.ಬಿ.ಕರಡಿ ಇತರರಿದ್ದರು.
ಕಕಮರಿ ಶ್ರೀ ಗುರುದೇವ ಜ್ಞಾನಯೋಗಿ ಗುರುಕುಲ ಕನ್ನಡ ಮಾಧ್ಯಮ ಪ್ರಾಥಮಿಕ ಹಾಗೂ ಪ್ರೌಢಶಾಲೆಯ ಅಕ್ಷರಾಭ್ಯಾಸ ಕಾರ್ಯಕ್ರಮದಲ್ಲಿ ಆತ್ಮಾರಾಮ ಸ್ವಾಮೀಜಿ ಮಾತನಾಡಿದರು. ಅಪ್ಪಾಸಾಬ ವಾಲಿ, ಈರಪ್ಪ ದಳವಾಯಿ, ಶಂಕರ ಹೂಗಾರ, ಗುರುದೇವ ಪುಠಾಣಿ, ಸಂಗಮೇಶ ಬಿಳ್ಳೂರ, ಎಂ.ಬಿ.ಕರಡಿ ಇತರರಿದ್ದರು.
Published on
ಕಕಮರಿ: ಅಕ್ಷರಾಭ್ಯಾಸವು ಕೇವಲ ಒಂದು ಕಾರ್ಯಕ್ರಮವಲ್ಲ, ಅದು ಮಗುವಿನ ಜೀವನದಲ್ಲಿ ಜ್ಞಾನದ ದೀಪ ಬೆಳಗಿಸುವ ಪವಿತ್ರ ಕ್ಷಣವಾಗಿದೆ. ತಾಯಿಯ ಕೈಯಿಂದ ಆರಂಭವಾದ ಈ ಜ್ಞಾನಯಾತ್ರೆ ಮಕ್ಕಳನ್ನು ಉತ್ತಮ ಸಂಸ್ಕಾರವಂತರಾಗಿ, ಜವಾಬ್ದಾರಿಯುತ ನಾಗ ರಿಕರಾಗಿ ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ ಎಂದು ಗುರುದೇವ ಆಶ್ರಮದ ಪೀಠಾಧ್ಯಕ್ಷ ಆತ್ಮಾರಾಮ ಸ್ವಾಮೀಜಿ ಹೇಳಿದರು.
ಗ್ರಾಮದ ಶ್ರೀ ಗುರುದೇವ ಜ್ಞಾನಯೋಗಿ ಗುರುಕುಲ ಕನ್ನಡ ಮಾಧ್ಯಮ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಅಕ್ಷರಾಭ್ಯಾಸ ಕಾರ್ಯಕ್ರಮದ ದಿವ್ಯಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಮಗುವಿನ ಮೊದಲ ತೊದಲ ನುಡಿಯು ‘ಅ’ ಅಕ್ಷರದಿಂದಲೇ ಆರಂಭವಾಗುತ್ತದೆ. ಕನ್ನಡ ವರ್ಣಮಾಲೆಯ ಮೊದಲ ಅಕ್ಷರ ‘ಅ’ ಜ್ಞಾನ, ಅರಿವು ಮತ್ತು ಅಸ್ತಿತ್ವದ ಸಂಕೇತವಾಗಿದೆ ಎಂದರು.
ಪ್ರಶಾಂತ ವಾಲಿ ಮಾತನಾಡಿ, ಮಕ್ಕಳ ಶಿಕ್ಷಣದ ಆರಂಭವನ್ನು ಇಂತಹ ಸಂಸ್ಕಾರಯುತ ರೀತಿಯಲ್ಲಿ ಆಚರಿಸುತ್ತಿರುವುದು ಶ್ಲಾಘನೀಯವಾಗಿದೆ ಎಂದರು.
ಸಾನ್ನಿಧ್ಯವನ್ನು ಅದ್ವೈತಾನಂದ ಸ್ವಾಮೀಜಿ ವಹಿಸಿದ್ದರು. ಅಪ್ಪಾಸಾಬ ವಾಲಿ, ಈರಪ್ಪ ದಳವಾಯಿ, ಶಂಕರ ಹೂಗಾರ, ಗುರುದೇವ ಪುಠಾಣಿ, ಮುಖ್ಯಶಿಕ್ಷಕ ಸಂಗಮೇಶ ಬಿಳ್ಳೂರ, ಎಂ.ಬಿ.ಕರಡಿ, ಸುಧಾಕರ ಕೋಳಿ, ಮಹಾಂತೇಶ ಮಠಪತಿ,
ಹಣಮಂತ ಸಿಂಧೂರ ಇತರರು ಇದ್ದರು. ಪವಿತ್ರಾ ಒಡೆಯರ ನಿರೂಪಿಸಿದರು. ಶಿಕ್ಷಕ ರಮೇಶ ಪೂಜಾರಿ ವಂದಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net