ಏಕಾಗ್ರತೆಯಿಂದ ಪಾಠ ಆಲಿಸಿರಿ

ನಿಪ್ಪಾಣಿಯ ವಿಎಸ್‌ಎಂ ಸ್ವತಂತ್ರ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆ ಸಮಾರಂಭವನ್ನು ಚಂದ್ರಕಾಂತ ಕೋಠಿವಾಲೆ, ಪ್ರೊ.ಗಣೇಶ ಲೋಳಗೆ ಉದ್ಘಾಟಿಸಿದರು. ರಾವಸಾಹೇಬ ಪಾಟೀಲ, ಸಮೀರ ಬಾಗೇವಾಡಿ, ರೂಪೇಶ ಪಾಟೀಲ, ಅವಿನಾಶ ಪಾಟೀಲ ಇತರರಿದ್ದರು.
ನಿಪ್ಪಾಣಿಯ ವಿಎಸ್‌ಎಂ ಸ್ವತಂತ್ರ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆ ಸಮಾರಂಭವನ್ನು ಚಂದ್ರಕಾಂತ ಕೋಠಿವಾಲೆ, ಪ್ರೊ.ಗಣೇಶ ಲೋಳಗೆ ಉದ್ಘಾಟಿಸಿದರು. ರಾವಸಾಹೇಬ ಪಾಟೀಲ, ಸಮೀರ ಬಾಗೇವಾಡಿ, ರೂಪೇಶ ಪಾಟೀಲ, ಅವಿನಾಶ ಪಾಟೀಲ ಇತರರಿದ್ದರು.
Published on
ನಿಪ್ಪಾಣಿ: ಶಿಕ್ಷಣ ಪಡೆಯುತ್ತಿರುವ ಸಂಸ್ಥೆಯನ್ನು ಮನೆಯಂತೆ ನೋಡಬೇಕು. ಶಿಕ್ಷಕ ವೃಂದಕ್ಕೆ ಪಾಲಕರಂತೆ ಗೌರವ ನೀಡಬೇಕು ಎಂದು ಸ್ಥಳೀಯ ವಿದ್ಯಾ ಸಂವರ್ಧಕ ಮಂಡಳದ ಕಾರ್ಯಾಧ್ಯಕ್ಷ ಚಂದ್ರಕಾಂತ ಕೋಠಿವಾಲೆ ಹೇಳಿದರು. ವಿಎಸ್‌ಎಂ ಸ್ವತಂತ್ರ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳ ಉದ್ಘಾಟನೆ, ಸ್ವಾಗತ ಸಮಾರಂಭದಲ್ಲಿ ಮಾತನಾಡಿ, ಜೀವನದಲ್ಲಿ ಯಶಸ್ಸು ಕಾಣಲು ಶಿಕ್ಷಣಕ್ಕೆ ಪರ್ಯಾಯ ಇಲ್ಲ. ಉಪನ್ಯಾಸಕರು ಹೇಳುವ ಪಾಠವನ್ನು ಏಕಾಗ್ರತೆಯಿಂದ ಆಲಿಸಿ, ಭವಿಷ್ಯ ಉಜ್ವಲಗೊಳಿಸಿಕೊಳ್ಳಿ ಎಂದರು.
ವಾಗ್ಮಿ ಪ್ರೊ.ಗಣೇಶ ಲೋಳಗೆ ಮಾತನಾಡಿ, ನಿಮ್ಮಲ್ಲಿರುವ ಸಾಮರ್ಥ್ಯ, ಶಕ್ತಿ ಗುರುತಿಸಿಕೊಳ್ಳಬೇಕು. ಇರುವ ಅವಕಾಶ ಬಳಸಿಕೊಂಡು ಯಶಸ್ವಿಯಾಗಬೇಕು ಎಂದರು. ಪ್ರಾಚಾರ್ಯ ರೂಪೇಶ ಪಾಟೀಲ ಮಾತನಾಡಿದರು. ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಸಾಧನೆಗೈದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಮಂಡಳದ ಉಪಾಧ್ಯಕ್ಷ ರಜತ ಢೋಲೆ, ಕಾರ್ಯದರ್ಶಿ ಸಮೀರ ಬಾಗೇವಾಡಿ, ಸಂಚಾಲಕ ಸಂಜಯ ಮೊಳವಾಡೆ, ರಾವಸಾಹೇಬ ಪಾಟೀಲ, ಅವಿನಾಶ ಪಾಟೀಲ, ಪತ್ರಕರ್ತ ದಾದಾ ಜನವಾಡೆ, ಪ್ರಾಚಾರ್ಯ ಬಸವರಾಜ ಕರೋಶಿ, ಉಪನ್ಯಾಸಕ ರಮೇಶ ಗೋಡ್ಸೆ ಇತರರಿದ್ದರು. ಸಮೀರಾ ಬಾಗೇವಾಡಿ ನಿರೂಪಿಸಿದರು. ಸಿಇಒ ಡಾ.ಸಿದ್ಧಗೌಡ ಪಾಟೀಲ ಸ್ವಾಗತಿಸಿದರು. ಪ್ರೊ.ಕೈಲಾಸ ಪಠಾಡೆ ಅತಿಥಿ ಪರಿಚಯಿಸಿದರು. ವಿಕಾಸ ಶರ್ಮಾ ವಂದಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net