ಭಕ್ತಿ ಮಾರ್ಗದಲ್ಲಿ ನಡೆದರೆ ಜೀವನ ಪಾವನ

ನಾಗರಮುನ್ನೋಳಿ ಗ್ರಾಮದ ನಾಗರಾಳ ಕೋಡಿಯ ಗುತ್ತೆಪ್ಪ ದೇವರ ಜಾತ್ರಾ ಮಹೋತ್ಸವಕ್ಕೆ ಶಿವನಗೌಡ ಪಾಟೀಲ ಡೊಳ್ಳು ಬಾರಿಸುವ ಮೂಲಕ ಚಾಲನೆ ನೀಡಿದರು. ಸಿದ್ದಪ್ಪ ರ‍್ಯಾಯಿ, ಮಿಲನ ಪಾಟೀಲ, ಶಂಕರಗೌಡ ಪಾಟೀಲ, ಶಿವಪುತ್ರ ಮನಗೂಳಿ ಇತರರಿದ್ದರು.
ನಾಗರಮುನ್ನೋಳಿ ಗ್ರಾಮದ ನಾಗರಾಳ ಕೋಡಿಯ ಗುತ್ತೆಪ್ಪ ದೇವರ ಜಾತ್ರಾ ಮಹೋತ್ಸವಕ್ಕೆ ಶಿವನಗೌಡ ಪಾಟೀಲ ಡೊಳ್ಳು ಬಾರಿಸುವ ಮೂಲಕ ಚಾಲನೆ ನೀಡಿದರು. ಸಿದ್ದಪ್ಪ ರ‍್ಯಾಯಿ, ಮಿಲನ ಪಾಟೀಲ, ಶಂಕರಗೌಡ ಪಾಟೀಲ, ಶಿವಪುತ್ರ ಮನಗೂಳಿ ಇತರರಿದ್ದರು.
Published on
ನಾಗರಮುನ್ನೋಳಿ: ಭಕ್ತಿ ಮಾರ್ಗದಲ್ಲಿ ನಡೆದಾಗ ಜೀವನ ಪಾವನವಾಗುತ್ತದೆ ಎಂದು ಕಬ್ಬೂರಿನ ಗೌರಿಶಂಕರ ಮಠದ ರೇವಣಸಿದ್ಧ ಸ್ವಾಮೀಜಿ ಹೇಳಿದರು.
ಗ್ರಾಮದ ನಾಗರಾಳ ಕೋಡಿಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಗುತ್ತೆಪ್ಪ ದೇವರ ಜಾತ್ರೋತ್ಸವದಲ್ಲಿ ಮಾತನಾಡಿ, ಮನುಷ್ಯ ಧರ್ಮದಿಂದ ನಡೆದುಕೊಂಡರೆ ಜೀವನದಲ್ಲಿ ನೆಮ್ಮದಿ ಲಭಿಸುತ್ತದೆ ಎಂದರು.
ಸಚಿವ ಸತೀಶ ಜಾರಕಿಹೊಳಿ ಆಪ್ತ ಕಾರ್ಯದರ್ಶಿ ಶಿವನಗೌಡ ಪಾಟೀಲ ಮಾತನಾಡಿ, ಜಾತ್ರೆ ಆಚರಣೆ ಮಾಡುವುದರಿಂದ ಸಂಬAಧ ಗಟ್ಟಿಯಾಗುತ್ತವೆ ಎಂದರು.
ಗ್ರಾಪಂ ಮಾಜಿ ಅಧ್ಯಕ್ಷ ಸಿದ್ದಪ್ಪ ರ‍್ಯಾಯಿ, ತಾಪಂ ಮಾಜಿ ಸದಸ್ಯ ಶಂಕರಗೌಡ ಪಾಟೀಲ, ಗಣೇಶ ಮೊಹಿತೆ ಮಾತನಾಡಿದರು. ಮಿಲನ ಪಾಟೀಲ, ರಾಜು ಕುಂಬಾರ, ಶಿವಪುತ್ರ ಮನಗೂಳಿ, ಎಂ.ಕೆ.ಪೂಜೇರಿ, ಭೀರಪ್ಪ ನಾಗರಾಳೆ, ಸಿದ್ಧರಾಮ ಹಿರೇಕುರಬರ, ಮಾಯಪ್ಪ ನಾಗರಾಳೆ, ಶಿವಾನಂದ ರ‍್ಯಾಯಿ, ಭೀರು ನಾಗರಾಳೆ, ಖಾನಪ್ಪ ನಾಗರಾಳೆ, ದೀಲಿಪ ಜಮಾದಾರ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net