ನಂದೇಶ್ವರ: ವಚನ ಸಾಹಿತ್ಯ ಎಲ್ಲರಿಗೂ ದೊರೆತ ಅಮೂಲ್ಯ ಕೊಡುಗೆಯಾಗಿದ್ದು, ಇದರಿಂದ ಬಾಳು ಬೆಳಕಾಗುತ್ತದೆ ಎಂದು .ಸವದಿ ಇಲಕಲ್ಲ ಮಠದ ಗುರು ಮಹಾಂತ ಸ್ವಾಮೀಜಿ ಹೇಳಿದರು..ಸಮೀಪದ ಸವದಿ ಗ್ರಾಮದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಶರಣ ಸಂಸ್ಕೃತಿ ಮಹೋತ್ಸವದಲ್ಲಿ ಮಾತನಾಡಿ, ಬಸವಾದಿ ಶರಣರ ವಚನ ಸಾಹಿತ್ಯ ಅರಿತುಕೊಂಡು ಮಕ್ಕಳಿಗೂ ತಿಳಿಸಬೇಕು ಎಂದರು..ಸಾಲೋಟಗಿ ಜ್ಞಾನ ಯೋಗಾಶ್ರಮದ ಸಂಗಮೇಶ್ವರ ಸ್ವಾಮೀಜಿ ಮಾತನಾಡಿ, ಸಹಕಾರದಿಂದ ಬದುಕುವುದೇ ಶರಣ ಧರ್ಮವಾಗಿದೆ ಎಂದರು..ಎಸ್‌ಎಸ್‌ಎಲ್‌ಸಿ ಹಾಗೂ ಪಿಯು ಸಾಧಕರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಸಂಗನ ಬಸವಮಠದ ಭಜನಾ ಮಂಡಳಿಯವರು ವಚನ ಸಂಗೀತ ಸೇವೆ ಸಲ್ಲಿಸಿದರು..ನಿಪ್ಪಾಣಿಯ ಬಸವ ಮಲ್ಲಿಕಾರ್ಜುನ ಸ್ವಾಮೀಜಿ, ಗ್ರಾಪಂ ಮಾಜಿ ಅಧ್ಯಕ್ಷ ಮಲ್ಲನಗೌಡ ಪಾಟೀಲ, ಗ್ರಾಮ ಆಡಳಿತಾಧಿಕಾರಿ ಶ್ರೀಕಾಂತ ಹೊಸೂರ, ರಮೇಶ ಅವಟಿ, ಚಲುವರಾಜ ರಾಜಮಾನಿ, ಬಸವರಾಜ ಬಾಳಿಕಾಯಿ, ಪ್ರಕಾಶ ಪಾಟೀಲ ಇತರರಿದ್ದರು.