ರಂಗಕಲೆ ಉಳಿಸಿ, ಬೆಳೆಸುವ ಕೆಲಸವಾಗಲಿ

ಮಬನೂರ ಗ್ರಾಮದಲ್ಲಿ ನಾಟಕ ಪ್ರದರ್ಶನಕ್ಕೆ ಶಾಸಕ ವಿಶ್ವಾಸ ವೈದ್ಯ ಚಾಲನೆ ನೀಡಿದರು. ಆರ್.ಕೆ.ಪಟಾತ, ಪಡೆಪ್ಪ ನರಿ,  ಅಭಿನವ ನಾಗಲಿಂಗ ಸ್ವಾಮೀಜಿ, ಕರೆಪ್ಪ ಮುರಗೋಡ, ಯಲ್ಲಪ್ಪ ನರಿ ಇತರರಿದ್ದರು.
ಮಬನೂರ ಗ್ರಾಮದಲ್ಲಿ ನಾಟಕ ಪ್ರದರ್ಶನಕ್ಕೆ ಶಾಸಕ ವಿಶ್ವಾಸ ವೈದ್ಯ ಚಾಲನೆ ನೀಡಿದರು. ಆರ್.ಕೆ.ಪಟಾತ, ಪಡೆಪ್ಪ ನರಿ, ಅಭಿನವ ನಾಗಲಿಂಗ ಸ್ವಾಮೀಜಿ, ಕರೆಪ್ಪ ಮುರಗೋಡ, ಯಲ್ಲಪ್ಪ ನರಿ ಇತರರಿದ್ದರು.
Published on
ಸಮೀಪದ ಮಬನೂರ ಗ್ರಾಮದಲ್ಲಿ ಗ್ರಾಮದೇವಿ ಜಾತ್ರಾ ಮಹೋತ್ಸವ ಅಂಗವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಬನೂರಿನ ಮಾಧವಾನಂದ ಕಲಾವಿದರ ನಾಟ್ಯ ಸಂಘ ಆಶ್ರಯದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಕುರುಕ್ಷೇತ್ರ ಪೌರಾಣಿಕ ನಾಟಕ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿ, ರಂಗಕಲೆ ಪೂರ್ವಿಕರ ಕೊಡುಗೆಯಾಗಿದ್ದು, ಎಲ್ಲರೂ ಪ್ರೋತ್ಸಾಹ ನೀಡಿ ಬೆಳೆಸಬೇಕಿದೆ ಎಂದರು.
ಕಾಂಗ್ರೆಸ ಮುಖಂಡ ಆರ್.ಕೆ.ಪಟಾತ ಮಾತನಾಡಿ, ರಂಗಭೂಮಿ ಪ್ರಾಚೀನ ಕಲೆ ಹಾಗೂ ಸಂಸ್ಕೃತಿಯ ಒಂದು ಭಾಗ ಇದಕ್ಕೆ ಪ್ರೋತ್ಸಾಹ ಅಗತ್ಯ ಎಂದರು.
ಪಿಕೆಪಿಎಸ್ ಅಧ್ಯಕ್ಷ ಪಡೆಪ್ಪ ನರಿ ಮಾತನಾಡಿ, ದೃಶ್ಯ ಮಾಧ್ಯಮಗಳ ಹಾವಳಿಯಿಂದ ರಂಗಭೂಮಿ ಕಲೆಗೆ ಧಕ್ಕೆ ಉಂಟಾಗುತ್ತಿದ್ದು, ಕಲೆ ಉಳಿಯಲು ಪ್ರತಿಯೊಬ್ಬರೂ ಶ್ರಮಿಸಬೇಕು ಎಂದರು.
ಚಿಕ್ಕುಂಬಿ ಅಜಾತನಾಗಲಿಂಗ ಮಠದ ಅಭಿನವ ನಾಗಲಿಂಗ ಸ್ವಾಮೀಜಿ ಸಾನ್ನಿಧ್ಯವಹಿಸಿದ್ದರು,
ಗ್ರಾಪಂ ಮಾಜಿ ಸದಸ್ಯ ಕರೆಪ್ಪ ಮುರಗೋಡ, ಪಿಕೆಪಿಎಸ್ ಮಾಜಿ ಅಧ್ಯಕ್ಷ ಯಲ್ಲಪ್ಪ ನರಿ, ಸವದತ್ತಿ ಎಪಿಎಂಸಿ ಮಾಜಿ ಅಧ್ಯಕ್ಷ ಪ್ರಕಾಶ ನರಿ, ಸರ್ಕಾರಿ ಪ್ರೌಢಶಾಲೆ ಎಸ್‌ಡಿಎಂಸಿ ಅಧ್ಯಕ್ಷ ಉದಯ ನರಿ, ಗ್ರಾಪಂ ಮಾಜಿ ಸದಸ್ಯರು ಯಲ್ಲಪ್ಪ ನರಿ, ವಿಠ್ಠಲ ಪಟಾತ, ಭೀಮಪ್ಪ ಮುರಗೋಡ, ನಿಂಗಪ್ಪ ಹಟ್ಟಿ, ಮಂಜು ಪಾಚಂಗಿ, ವಿಠ್ಠಲ ಚುಂಚನೂರ, ಮಾರುತಿ ನೇಗಿನಾಳ, ಆನಂದ ಪಾಟೀಲ, ಹನಮಂತಗೌಡ ಪಾಟೀಲ, ಭೀಮಪ್ಪ ಮಳಗಲಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net