ಕಲೆಗೆ ಪ್ರೋತ್ಸಾಹಿಸುವ ಕೆಲಸವಾಗಲಿ

ಬೆಳಗಾವಿ ನಗರದ ನಾಗನೂರು ರುದ್ರಾ ಮಠದ ಎಸ್​ಜಿಬಿಐಟಿ ಕಾಲೇಜು ಸಭಾಂಗಣದಲ್ಲಿ ಸೋಮವಾರ ಕಲಾ ಸಂತೆ ಜನಪದ ಜಾತ್ರೆ ಕಾರ್ಯಕ್ರಮವನ್ನು ಡಾ. ಅಲ್ಲಮಪ್ರಭು ಸ್ವಾಮೀಜಿ ಉದ್ಘಾಟಿಸಿದರು. ಆಸೀಫ್​ ಸೇಠ್​, ಮಧುಮತಿ ಹಿರೇಮಠ ಇತರರಿದ್ದರು.
ಬೆಳಗಾವಿ ನಗರದ ನಾಗನೂರು ರುದ್ರಾ ಮಠದ ಎಸ್​ಜಿಬಿಐಟಿ ಕಾಲೇಜು ಸಭಾಂಗಣದಲ್ಲಿ ಸೋಮವಾರ ಕಲಾ ಸಂತೆ ಜನಪದ ಜಾತ್ರೆ ಕಾರ್ಯಕ್ರಮವನ್ನು ಡಾ. ಅಲ್ಲಮಪ್ರಭು ಸ್ವಾಮೀಜಿ ಉದ್ಘಾಟಿಸಿದರು. ಆಸೀಫ್​ ಸೇಠ್​, ಮಧುಮತಿ ಹಿರೇಮಠ ಇತರರಿದ್ದರು.
Published on
ಬೆಳಗಾವಿ: ಪ್ರಸಕ್ತ ದಿನಗಳಲ್ಲಿ ಸ್ಥಳಿಯ ಕಲೆ, ಸಂಸತಿ ಮತ್ತು ಗ್ರಾಮೀಣ ಉದ್ಯಮಿತ್ವ ಉತ್ತೇಜಿಸುವ ಪ್ರಮುಖ ಕೆಲಸ ಆಗಬೇಕಿದೆ ಎಂದು ನಾಗನೂರು ರುದ್ರಾಕ್ಷಿ ಮಠದ ಡಾ. ಅಲ್ಲಮಪ್ರಭು ಸ್ವಾಮೀಜಿ ಹೇಳಿದರು.
ನಗರದ ನಾಗನೂರು ರುದ್ರಾ ಮಠದ ಎಸ್​ಜಿಬಿಐಟಿ ಕಾಲೇಜು ಸಭಾಂಗಣದಲ್ಲಿ ಸೋಮವಾರ ಲಿಂಗಾಯುತ ಮಹಿಳಾ ಸಮಾಜ ಅಂತಾರಾಷ್ಟ್ರೀಯ ಮಹಿಳಾ ದಿನ ಅಂಗವಾಗಿ ಆಯೋಜಿಸಿದ್ದ ಕಲಾ ಸಂತೆ& 2026 ಜನಪದ ಜಾತ್ರೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ನಾಡಿನ ಕಲಾವಿದರು ತಯಾರಿಸಿದ ಹಸ್ತಕಲಾ ವಸ್ತುಗಳು, ಆಹಾರ ಪದಾರ್ಥಗಳು ಹಾಗೂ ಜನಪದ ಪರಂಪರೆಯ ಉತ್ಪನ್ನಗಳನ್ನು ಪ್ರದರ್ಶಿಸಿ ಮಾರಾಟ ಮಾಡಲು ಅವಕಾಶ ನೀಡುವ ಕಲಾ ಸಂತೆ ವಿಭಿನ್ನ ಜನಪದ ಜಾತ್ರೆಗೆ ವೇದಿಕೆಯಾಗಿದೆ ಎಂದರು.
ಶಾಸಕ ಆಸೀಫ್​ ಸೇಠ್​, ಲಿಂಗಾಯುತ ಮಹಿಳಾ ಸಮಾಜದ ಅಧ್ಯಕ್ಷೆ ಮಧುಮತಿ ಹಿರೇಮಠ, ನಯನಾ ಗಿರಿಗೌಡರ, ರಕ್ಷಾ ದೇಗಿನಹಾಳ, ಲತಾ ಬಿಜಾಪುರೆ, ಶಾರದಾ ಭೋಜ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net