ಮಕ್ಕಳ ಆರೋಗ್ಯದತ್ತ ಗಮನ ಹರಿಸಲಿ

ಮುರಗೋಡ ಹೊರಟ್ಟಿ ಓಣಿಯ 3 ನಂಬರ್​ ಅಂಗನವಾಡಿ ನೂತನ ಕಟ್ಟಡವನ್ನು ಶಾಸಕ ಮಹಾಂತೇಶ ಕೌಜಲಗಿ ಉದ್ಘಾಟಿಸಿದರು. ಗ್ರಾಪಂ ಅಧ್ಯೆ ಸಂಕೇತ ಹಟ್ಟಿಹೊಳಿ, ಸಂಗಪ್ಪ ಬೆಳಗಾವಿ, ರಾಜು ಕಲಾಲ ಇದ್ದರು.
ಮುರಗೋಡ ಹೊರಟ್ಟಿ ಓಣಿಯ 3 ನಂಬರ್​ ಅಂಗನವಾಡಿ ನೂತನ ಕಟ್ಟಡವನ್ನು ಶಾಸಕ ಮಹಾಂತೇಶ ಕೌಜಲಗಿ ಉದ್ಘಾಟಿಸಿದರು. ಗ್ರಾಪಂ ಅಧ್ಯೆ ಸಂಕೇತ ಹಟ್ಟಿಹೊಳಿ, ಸಂಗಪ್ಪ ಬೆಳಗಾವಿ, ರಾಜು ಕಲಾಲ ಇದ್ದರು.
Published on
ಮುರಗೋಡ: ಗ್ರಾಮೀಣ ಪ್ರದೇಶಗಳಲ್ಲಿ ಜನಸಾಮಾನ್ಯರಿಗೆ, ರೈತರಿಗೆ ಸರ್ಕಾರ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದೆ. ಅದರಂತೆ ಮಕ್ಕಳ ಆರೋಗ್ಯ ಸುಧಾರಣೆಗೆ ಅಂಗನವಾಡಿ ಕಾರ್ಯಕರ್ತೆಯರು ಹೆಚ್ಚಿನ ಗಮನ ಹರಿಸಬೇಕು ಎಂದು ಶಾಸಕ ಮಹಾಂತೇಶ ಕೌಜಲಗಿ ಹೇಳಿದರು.
ಇಲ್ಲಿನ ಹೊರಟ್ಟಿ ಓಣಿಯ 3 ನಂಬರ್​ ಅಂಗನವಾಡಿ ನೂತನ ಕಟ್ಟಡವನ್ನು ಗುರುವಾರ ಉದ್ಘಾಟಿಸಿ ಮಾತನಾಡಿದರು. ಗ್ರಾಪಂ ಅಧ್ಯಕ್ಷ ಸಂಕೇತ ಹಟ್ಟಿಹೊಳಿ, ಉಪಾಧ್ಯೆ ಮಹಾದೇವಿ ಮಬನೂರ, ಪಿಡಿಒ ಡಿ.ಎಸ್​.ಕಂಕಣ್ಣವರ, ಎಪಿಎಂಸಿ ಸದಸ್ಯ ರಾಜು ಕಲಾಲ, ಗ್ರಾಪಂ ಮಾಜಿ ಅಧ್ಯ ಸಂಗಪ್ಪ ಬೆಳಗಾವಿ, ಶಿವು ಚೌಡಕನವರ, ಸಂತೋಷ ಶೆಟ್ಟರ, ಶಿವಲಿಂಗ ಕಿತ್ತೂರ, ಪ್ರಕಾಶ ಹಟ್ಟಿಹೊಳಿ, ರಾಜು ತೊರಗಲ ಇತರರಿದ್ದರು.
ಪಾನ್​ ಬೀಡಾ ಅಂಗಡಿಯಲ್ಲಿ ಈ ಅಂಗನವಾಡಿ ಕೇಂದ್ರ ಕಾರ್ಯನಿರ್ವಹಿಸುತ್ತಿರುವ ಕುರಿತು ವಿಜಯವಾಣಿ ದಿನಪತ್ರಿಕೆ ವರದಿ ಪ್ರಕಟಿಸಿ ಗಮನ ಸೆಳೆದಿತ್ತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net