ಪಾಟೀಲರ ಹಾದಿಯಲ್ಲಿ ಸಾಗೋಣ

ಬೋರಗಾಂವ ಅರಿಹಂತ ಸಂಸ್ಥೆಯಲ್ಲಿ ಹಮ್ಮಿಕೊಂಡಿದ್ದ ರಾವಸಾಹೇಬ ಪಾಟೀಲ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಅಭಿನಂದನ ಪಾಟೀಲ, ಉತ್ತಮ ಪಾಟೀಲ, ದಿಗಂಬರ ಕಾಂಬಳೆ, ಅಶೋಕ ಬಂಕಾಪುರೆ, ಆರ್.ಟಿ.ಚೌಗುಲಾ ಇತರರಿದ್ದರು.
ಬೋರಗಾಂವ ಅರಿಹಂತ ಸಂಸ್ಥೆಯಲ್ಲಿ ಹಮ್ಮಿಕೊಂಡಿದ್ದ ರಾವಸಾಹೇಬ ಪಾಟೀಲ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಅಭಿನಂದನ ಪಾಟೀಲ, ಉತ್ತಮ ಪಾಟೀಲ, ದಿಗಂಬರ ಕಾಂಬಳೆ, ಅಶೋಕ ಬಂಕಾಪುರೆ, ಆರ್.ಟಿ.ಚೌಗುಲಾ ಇತರರಿದ್ದರು.
Published on
ಬೋರಗಾಂವ: ದಿ.ರಾವಸಾಹೇಬ ಪಾಟೀಲ ಅವರು ಸಹಕಾರ ಕ್ಷೇತ್ರದ ನಾಯಕರಷ್ಟೇ ಅಲ್ಲ, ಜನರ ಕಷ್ಟದಲ್ಲಿ ಭಾಗಿಯಾದ ಜನನಾಯಕರಾಗಿದ್ದರು. ಸಹಕಾರ, ಶಿಕ್ಷಣ, ಸಾಮಾಜಿಕ ಮತ್ತು ಗ್ರಾಮೀಣಾಭಿವೃದ್ಧಿಗೆ ಅವರ ಕಾರ್ಯ ಸ್ಫೂರ್ತಿದಾಯಕವಾಗಿತ್ತು ಎಂದು ಮಾಜಿ ಸಚಿವ ವೀರಕುಮಾರ ಪಾಟೀಲ ಹೇಳಿದರು.
ಅರಿಹಂತ ಸಭಾಗೃಹದಲ್ಲಿ ಗುರುವಾರ ಹಮ್ಮಿಕೊಂಡಿದ್ದ ದಿ.ರಾವಸಾಹೇಬ ಪಾಟೀಲ ಅವರ ದ್ವಿತೀಯ ಪುಣ್ಯಸ್ಮರಣೆಯಲ್ಲಿ ಗೌರವ ಸಲ್ಲಿಸಿ ಮಾತನಾಡಿ, ಅವರ ದೂರದೃಷ್ಟಿ, ಆಲೋಚನೆ ಮತ್ತು ಆದರ್ಶದಿಂದ ಸಾಮಾಜಿಕ ಸೇವೆಯ ಹಾದಿ ಮುನ್ನಡೆಸಲು ಸಂಕಲ್ಪ ಮಾಡಿದರೆ, ಅವರಿಗೆ ನಿಜವಾದ ಶ್ರದ್ಧಾಂಜಲಿ ಕೋರಿದಂತೆ ಎಂದರು.
ಅರಿಹಂತ ಕೋ-ಆಪ್ ಸೊಸೈಟಿ, ಪ್ರಾಥಮಿಕ ಕೃಷಿ ಸಂಘ, ಅರಿಹಂತ ಶಾಲಾ-ಕಾಲೇಜು, ನೂಲು ಗಿರಣಿ, ಸಕ್ಕರೆ ಕಾರ್ಖಾನೆ ಮತ್ತು ಪಾಟೀಲ ಕುಟುಂಬ ದಿ.ರಾವಸಾಹೇಬ ಪಾಟೀಲ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು. ಪಟ್ಟಣದ ಸರ್ಕಾರಿ ಕನ್ನಡ, ಉರ್ದು, ಮರಾಠಿ ಬಾಲಕರ ಶಾಲೆ ಮತ್ತು ಬಾಲಕಿಯರ ಶಾಲೆಗೆ ನೋಟ್‌ಬುಕ್ ಹಾಗೂ ಪೆನ್ ವಿತರಿಸಲಾಯಿತು.
ಪಟ್ಟಣ ಪಂಚಾಯಿತಿ ಅಧ್ಯಕ್ಷ ದಿಗಂಬರ ಕಾಂಬಳೆ ಮಾತನಾಡಿ, ಅಭಿವೃದ್ಧಿ ಮತ್ತು ಸಹಕಾರ ವಲಯದ ಬಲವರ್ಧನೆಗೆ ದಿ.ಪಾಟೀಲ ನೀಡಿದ ಕೊಡುಗೆ ಅವಿಸ್ಮರಣೀಯ. ಅವರ ನೆನಪು ಯಾವಾಗಲೂ ಜೀವಂತವಾಗಿದೆ ಎಂದರು.
ದತ್ತ ಸಕ್ಕರೆ ಕಾರ್ಖಾನೆ ನಿರ್ದೇಶಕ ಸಂಜಯ ದೇಸಾಯಿ ಮಾತನಾಡಿದರು. ಯುವ ಮುಖಂಡ ಉತ್ತಮ ಪಾಟೀಲ, ಅರಿಹಂತ ಸಂಸ್ಥೆ ಅಧ್ಯಕ್ಷ ಅಭಿನಂದನ ಪಾಟೀಲ, ಉಪಾಧ್ಯಕ್ಷ ಸತೀಶ ಪಾಟೀಲ, ಸಿಇಒ ಅಶೋಕ ಬಂಕಾಪುರೆ, ಕೃಷಿ ಸಂಘದ ಉಪಾಧ್ಯಕ್ಷ ಸುಮಿತ ರೊಡ್ಡ, ಅರುಣ ಬೋನೆ, ಹಬೀಬ್ ಜಮಾದಾರ, ಚಂದು ಪಾಟೀಲ, ಅಬ್ದುಲ್ ಪಟೇಲ, ಸಂಜಯ ಪಾಟೀಲ, ವರ್ಧಮಾನ ಪಾಟೀಲ, ಸ್ಥಾಯಿ ಸಮಿತಿ ಅಧ್ಯಕ್ಷ ಪ್ರದೀಪ ಮಾಳಿ, ಕೃಷಿ ಸಂಸ್ಥೆ ಸಿಇಒ ಆರ್.ಟಿ.ಚೌಗುಲಾ, ಸಹಾಯಕ ವ್ಯವಸ್ಥಾಪಕ ಅಭಯಕುಮಾರ ಖೋತ, ಅಭಿನಂದನ ಬೆನಾಡೆ, ಭರತ ಗುಂಡೆ, ರಾಕೇಶ ಫಿರಗನ್ನವರ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net