ಗರ್ಭಗುಡಿ ನಿರ್ಮಾಣಕ್ಕೆ ಬದ್ಧರಾಗೋಣ

ಅಡಹಳ್ಳಿ ಗ್ರಾಮದ ಪ್ರವಚನ ಕಾರ್ಯಕ್ರಮಕ್ಕೆ ಗಣ್ಯರು ಚಾಲನೆ ನೀಡಿದರು. ಗುರುಪಾದ ಸ್ವಾಮೀಜಿ, ಘನಲಿಂಗ ದೇವರು, ಪಂಚಾಕ್ಷರಯ್ಯ ಹಿರೇಮಠ, ಅಡಿವೆಪ್ಪ ಕೆಂಚಣ್ಣವರ, ಈರಗೌಡ ಪಾಟೀಲ ಇತರರಿದ್ದರು.
ಅಡಹಳ್ಳಿ ಗ್ರಾಮದ ಪ್ರವಚನ ಕಾರ್ಯಕ್ರಮಕ್ಕೆ ಗಣ್ಯರು ಚಾಲನೆ ನೀಡಿದರು. ಗುರುಪಾದ ಸ್ವಾಮೀಜಿ, ಘನಲಿಂಗ ದೇವರು, ಪಂಚಾಕ್ಷರಯ್ಯ ಹಿರೇಮಠ, ಅಡಿವೆಪ್ಪ ಕೆಂಚಣ್ಣವರ, ಈರಗೌಡ ಪಾಟೀಲ ಇತರರಿದ್ದರು.
Published on
ಅಥಣಿ ಗ್ರಾಮೀಣ: ಧರ್ಮ ಕಾರ್ಯಗಳಲ್ಲಿ ಪಾಲ್ಗೊಂಡು ಸತ್ಯ, ಅಹಿಂಸೆ, ಪ್ರೀತಿ ಸಹಬಾಳ್ವೆಯಿಂದ ಬದುಕಬೇಕು ಎಂದು ಯಕ್ಕಂಚಿ ಗುರುದೇವ ತಪೋವನದ ಗುರುಪಾದ ಸ್ವಾಮೀಜಿ ಹೇಳಿದರು.
ಅಥಣಿ ತಾಲೂಕಿನ ಅಡಹಳ್ಳಿ ಗ್ರಾಮದಲ್ಲಿ ಶ್ರೀ ಮಲ್ಲಿಕಾರ್ಜುನ ಕಂಬಿ ಐದೇಶಿ ನಿಮಿತ್ತ ಈಚೆಗೆ ಹಮ್ಮಿಕೊಂಡಿದ್ದ ಪ್ರವಚನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕಠಿಣ ಪರಿಶ್ರಮ ಮತ್ತು ಆತ್ಮವಿಶ್ವಾಸ ಯಶಸ್ಸು ಗಳಿಸಿಕೊಡುತ್ತದೆ. ಅನ್ನ, ನೀರು ಬದುಕಲು ಅವಶ್ಯವಾದರೆ, ಶರಣರ ಮಾತು ಜೀವನ ನಿರ್ವಹಣೆ ಕಲಿಸಿಕೊಡುತ್ತದೆ. ವಚನ-ಪ್ರವಚನ ಕೇಳಿದರೆ ಸಾಲದು ಅದನ್ನು ಆಚರಣೆಗೆ ತರಬೇಕು. ಮಲ್ಲಿಕಾರ್ಜುನ ದೇವಸ್ಥಾನ ಗರ್ಭಗುಡಿ ನಿರ್ಮಾಣ ಹಾಗೂ ಜೀರ್ಣೋದ್ಧಾರಕ್ಕೆ ಎಲ್ಲರೂ ಕಂಕಣ ಬದ್ಧರಾಗಬೇಕು. ತನು, ಮನ, ಧನ ಸಹಾಯ ಮೂಲಕ ದೇವರ ಕೃಪೆಗೆ ಪಾತ್ರರಾಗಬೇಕು ಎಂದರು.
ವಿಜಯಪುರದ ಘನಲಿಂಗ ದೇವರು ಮಾತನಾಡಿ, ಅಧ್ಯಾತ್ಮ ನುಡಿ, ಶರಣರ, ಸಂತರ ದರ್ಶನದಿಂದ ನೆಮ್ಮದಿ ಸಿಗುತ್ತದೆ. ಮನಸಿನ ಮಲಿನ ನಿವಾರಣೆಗೆ ಪುರಾಣ, ಪ್ರವಚನ ಸಹಕಾರಿ. ಪ್ರವಚನ ಆಲಿಸಿ ಪುನೀತರಾಗೋಣ ಎಂದರು. ಪಂಚಾಕ್ಷರಯ್ಯ ಹಿರೇಮಠ, ಅಡಿವೆಪ್ಪ ಕೆಂಚಣ್ಣವರ, ಈರಗೌಡ ಪಾಟೀಲ, ಪರಸಪ್ಪ ಅಥಣಿ, ಸಿದರಾಯ ಕೋಹಳ್ಳಿ, ಮಹಾದೇವ ಪಾಟೀಲ, ಸತ್ಯಪ್ಪ ಸನದಿ, ಮೋಹನ ಸೂರ್ಯವಂಶಿ, ಅಪ್ಪುಗೌಡ ಪಾಟೀಲ, ನಿಂಗಪ್ಪ ರೂಗಿ, ಬಸವರಾಜ ಪಾಟೀಲ, ಮಹಾದೇವ ಖೋಬ್ರಿ, ವಿಠ್ಠಲ ಶೇಗಾಂವಿ, ಮಹೇಶ, ಮಹಾಂತೇಶ ನರಿಬೋಳ ಇತರರಿದ್ದರು. ಪ್ರಕಾಶ ಪೂಜಾರಿ ಸ್ವಾಗತಿಸಿದರು. ಸುರೇಶ ಅಥಣಿ ನಿರೂಪಿಸಿದರು. ಕಿರಣ ಕೆಂಚಣ್ಣವರ ವಂದಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net