ಗ್ರಾಮಾಭಿವೃದ್ಧಿಗೆ ಒಗ್ಗೂಡಿ ಶ್ರಮಿಸೋಣ

ಹೊಸಟ್ಟಿ ಗ್ರಾಮದಲ್ಲಿ ಹಾಲು ಉತ್ಪಾದಕ ಸಹಕಾರ ಸಂಘದ ಕಟ್ಟಡವನ್ನು ಶಾಸಕ ಬಾಲಚಂದ್ರ ಜಾರಕಿಹೊಳಿ ಉದ್ಘಾಟಿಸಿದರು. ಶಿವಾನಂದ ಸ್ವಾಮೀಜಿ, ಪ್ರಕಾಶ ಹಿರೇಮಠ, ಯಲ್ಲಪ್ಪ ಗದಾಡಿ, ಜಗದೀಶ ಡೊಳ್ಳಿ ಇತರರಿದ್ದರು.
ಹೊಸಟ್ಟಿ ಗ್ರಾಮದಲ್ಲಿ ಹಾಲು ಉತ್ಪಾದಕ ಸಹಕಾರ ಸಂಘದ ಕಟ್ಟಡವನ್ನು ಶಾಸಕ ಬಾಲಚಂದ್ರ ಜಾರಕಿಹೊಳಿ ಉದ್ಘಾಟಿಸಿದರು. ಶಿವಾನಂದ ಸ್ವಾಮೀಜಿ, ಪ್ರಕಾಶ ಹಿರೇಮಠ, ಯಲ್ಲಪ್ಪ ಗದಾಡಿ, ಜಗದೀಶ ಡೊಳ್ಳಿ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ವಿವಿಧ ಕಾಮಗಾರಿಗೆ ಭೂಮಿಪೂಜೆ
  • ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿಕೆ
ಮೂಡಲಗಿ: ಗ್ರಾಮದ ಅಭಿವೃದ್ಧಿಯಲ್ಲಿ ನಾಗರಿಕರ ಸಹಕಾರ ಅಗತ್ಯವಾಗಿದೆ. ಈ ದಿಸೆಯಲ್ಲಿ ಹೊಸಟ್ಟಿ ಗ್ರಾಮಸ್ಥರು ಒಗ್ಗೂಡಿ ಗ್ರಾಮಾಭಿವೃದ್ಧಿಗೆ ಶ್ರಮಿಸುತ್ತಿರುವ ಕಾರ್ಯ ಮಾದರಿಯಾಗಿದೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.
ತಾಲೂಕಿನ ಹೊಸಟ್ಟಿ ಗ್ರಾಮದಲ್ಲಿ 1.16 ಕೋಟಿ ರೂ. ವೆಚ್ಚದ ವಿವಿಧ ಕಾಮಗಾರಿಗಳಿಗೆ ಸೋಮವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ಅಭಿವೃದ್ಧಿಯೇ ಮೂಲ ಧ್ಯೇಯವಾಗಿದ್ದು, ಹೊಸಟ್ಟಿ ಗ್ರಾಮದ ಅಭಿವೃದ್ಧಿಗೆ ಹತ್ತು ಹಲವು ಯೋಜನೆ ರೂಪಿಸಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಹೊಸಟ್ಟಿ ಮತದಾರರು ಅತಿ ಹೆಚ್ಚಿನ ಮತ ನೀಡಿ ಆಶೀರ್ವದಿಸಿದ್ದಾರೆ. ಗ್ರಾಮೀಣ ಭಾಗದ ಸಮಗ್ರ ಏಳಿಗೆಗೆ ಎಲ್ಲರೂ ಒಟ್ಟಾಗಿ ದುಡಿಯೋಣ ಎಂದರು.
ಗ್ರಾಮದಲ್ಲಿ ಅಂಗನವಾಡಿ ಕಟ್ಟಡ, ಗರಡಿಮನೆ, ಗ್ರಂಥಾಲಯ, ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಭೋಜನಾಲಯ, ಎರಡು ಹೊಸ ಶಾಲಾ ಕೊಠಡಿ ಹಾಗೂ ಕ್ರಾಸ್ ಬಳಿ ನಿರ್ಮಿಸಿರುವ ಹಾಲು ಉತ್ಪಾದಕ ಸಹಕಾರಿ ಸಂಘದ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿದ ಶಾಸಕ ಬಾಲಚಂದ್ರ ಜಾರಕಿಹೊಳಿ, ರೈತರು ದೇಶದ ಬೆನ್ನೆಲುಬಾಗಿದ್ದಾರೆ. ಗುಣಮಟ್ಟದ ಹಾಲು ಪೂರೈಸುವ ಮೂಲಕ ಜಿಲ್ಲಾ ಹಾಲು ಒಕ್ಕೂಟ ಬಲಗೊಳಿಸಬೇಕು. ಜಿಲ್ಲಾ ಹಾಲು ಒಕ್ಕೂಟದ ಅಭಿವೃದ್ಧಿಗೆ ಶ್ರಮಿಸುವ ಜತೆಗೆ ಹಲವಾರು ಯೋಜನೆ ರೂಪಿಸಲಾಗಿದೆ. ಒಕ್ಕೂಟಕ್ಕೆ ಬಂದ ಲಾಭದಲ್ಲಿ ಶೇ. 60ರಷ್ಟು ರಿಯಾಯಿತಿಯೊಂದಿಗೆ ರೈತರಿಗೆ ವಿವಿಧ ಸಲಕರಣೆ ನೀಡಲಾಗುತ್ತಿದೆ ಎಂದು ತಿಳಿಸಿದರು. ತಲಾ 10 ಲಕ್ಷ ರೂ. ವೆಚ್ಚದ ಲಕ್ಷ್ಮೀ, ದುರ್ಗಾದೇವಿ ಹಾಗೂ ಎಸ್ಸಿ ಕಾಲನಿಯ ದುರ್ಗವ್ವ ದೇವಸ್ಥಾನ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದರು.
ಸುಣಧೋಳಿ ಶಿವಾನಂದ ಸ್ವಾಮೀಜಿ, ಬಿಇಒ ಪ್ರಕಾಶ ಹಿರೇಮಠ, ಸಿಡಿಪಿಒ ಯಲ್ಲಪ್ಪ ಗದಾಡಿ, ಗ್ರಾಪಂ ಮಾಜಿ ಅಧ್ಯಕ್ಷ ಜಗದೀಶ ಡೊಳ್ಳಿ, ಸದಾಶಿವ ನಾಯಿಕ, ಮಲ್ಲಪ್ಪ ಕಬ್ಬೂರ, ಕೃಷ್ಣ ತಳವಾರ, ಪ್ರಕಾಶ ಕಬ್ಬೂರ, ವೆಂಕಪ್ಪ ಗಡ್ಡೇದ, ಬಸಪ್ಪ ಕುಬ್ಬನ್ನವರ, ಯಲ್ಲಪ್ಪ ಕಂಬಳಿ, ಯಲ್ಲಪ್ಪ ಬಗರನಾಳ, ಸಿದ್ದಪ್ಪ ಹೊಸಮನಿ, ಮಲ್ಲಪ್ಪ ನಾಯಿಕ, ಕಲ್ಲಪ್ಪ ದೊಡ್ಡಸಿನ್ನಿ, ಭೀಮಶಿ ಕೊಪ್ಪದ, ಯಮನಪ್ಪ ಗಡ್ಡೇದ, ಶ್ರೀಶೈಲ ಬೆಳಗಿ, ಶಂಕರ ಕೊಪ್ಪದ, ಬಸಪ್ಪ ಮೆಚ್ಚನವರ, ಪಿಡಿಒ ಉದಯ ಬೆಳ್ಳುಂಡಗಿ, ಮುಖ್ಯಶಿಕ್ಷಕ ಮಾರುತಿ ಸಿದ್ದಾಪುರ, ಗೋಪಾಲ ಗುಡ್ಲಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net