ವ್ಯಸನಮುಕ್ತ ಸಮಾಜ ನಿರ್ಮಾಣಕ್ಕೆ ಎಲ್ಲರೂ ಕೈಜೋಡಿಸೋಣ

ಮಾದಕ ದ್ರವ್ಯ ವಿರೋಧಿ ಜಾಗೃತಿ ಕಾರ್ಯಕ್ರಮದಲ್ಲಿ ಪಿಎಸ್‌ಐ ವಿಠ್ಠಲ ನಾಯಕ ಮಾತನಾಡಿದರು. ಜಿ.ಸಿ.ಕೋಟಗಿ, ಡಾ.ಡಿ.ಎಸ್.ಕಾಂಬಳೆ, ಡಾ.ಎಸ್.ಐ.ಮಡಿವಾಳಪ್ಪಗೋಳ ಇತರರು ಇದ್ದರು.
ಮಾದಕ ದ್ರವ್ಯ ವಿರೋಧಿ ಜಾಗೃತಿ ಕಾರ್ಯಕ್ರಮದಲ್ಲಿ ಪಿಎಸ್‌ಐ ವಿಠ್ಠಲ ನಾಯಕ ಮಾತನಾಡಿದರು. ಜಿ.ಸಿ.ಕೋಟಗಿ, ಡಾ.ಡಿ.ಎಸ್.ಕಾಂಬಳೆ, ಡಾ.ಎಸ್.ಐ.ಮಡಿವಾಳಪ್ಪಗೋಳ ಇತರರು ಇದ್ದರು.
Published on
ಸಂಕೇಶ್ವರ: ಯುವಜನರು ದುಶ್ಚಟಗಳಿಂದ ದೂರವಿದ್ದು, ಆರೋಗ್ಯವಂತ ಮತ್ತು ವ್ಯಸನಮುಕ್ತ ಸಮಾಜ ನಿರ್ಮಾಣಕ್ಕೆ ಕೈಜೋಡಿಸಬೇಕು ಎಂದು ಪಿಎಸ್‌ಐ ವಿಠ್ಠಲ ನಾಯಕ ಹೇಳಿದರು.
ಪಟ್ಟಣದ ಎಸ್‌ಡಿವಿಎಸ್ ಸಂಘದ ಎಸ್.ಎಸ್.ಆರ್ಟ್ಸ್, ಟಿ.ಪಿ.ಸೈನ್ಸ್ ಇನ್‌ಸ್ಟಿಟ್ಯೂಟ್ ಹಾಗೂ ಎಲ್.ಕೆ.ಖೋತ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಮಾದಕ ದ್ರವ್ಯ ವಿರೋಽ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಇತ್ತೀಚಿನ ದಿನಗಳಲ್ಲಿ ಮಾದಕ ವಸ್ತುಗಳ ಆಕರ್ಷಣೆಗೆ ಒಳಗಾಗಿ ಅನೇಕರು ಭವಿಷ್ಯ ಹಾಳು ಮಾಡಿಕೊಳ್ಳುತ್ತಿದ್ದಾರೆ. ದುಶ್ಚಟಗಳಿಂದ ದೂರವಿರಲು ಪಾಲಕರ ಮತ್ತು ಶಿಕ್ಷಕರ ಮಾರ್ಗದರ್ಶನ ಅಗತ್ಯವಾಗಿದೆ ಎಂದರು.
ಎಸ್‌ಡಿವಿಎಸ್ ಸಂಘದ ಕಾರ್ಯದರ್ಶಿ ಜಿ.ಸಿ.ಕೋಟಗಿ ಮಾತನಾಡಿ, ಕ್ಷಣಿಕ ಸುಖಕ್ಕಾಗಿ ಯುವಕರು ಕೆಟ್ಟ ಚಟಗಳಿಗೆ ಬಲಿಯಾಗುತ್ತಿರುವುದು ಕಳವಳಕಾರಿ ಸಂಗತಿ. ವಿದ್ಯಾರ್ಥಿಗಳು ತಮ್ಮ ಗುರಿಯತ್ತ ಗಮನಹರಿಸಿ ಸಮಾಜಕ್ಕೆ ಮಾದರಿಯಾಗಬೇಕು ಎಂದು ಹೇಳಿದರು.
ಪ್ರಾಚಾರ್ಯರಾದ ಡಾ.ಡಿ.ಎಸ್.ಕಾಂಬಳೆ, ಡಾ.ಎಸ್.ಐ.ಮಡಿವಾಳಪ್ಪಗೋಳ, ಎಂ.ಆರ್.ಪಾಟೀಲ, ಡಾ.ಸುನೀಲಕುಮಾರ, ಡಾ. ಜಿ.ಎಲ್.ರಜಪೂತ, ಶ್ರೀಕಾಂತ ಚೌಹಾಣ, ಗೌರಿಶಂಕರ ಚಿಗರಿ, ಕುಮಾರ ಮರಾಠೆ, ಪ್ರೊ.ದೇಮಣ್ಣ ಸೊಗಲದ, ಡಾ.ಸುನೀಲಕುಮಾರ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net