ನಿಸರ್ಗ ಉಳಿಸುವ ಕಾರ್ಯವಾಗಲಿ

ಬೈಲಹೊಂಗಲದಲ್ಲಿ ಹಮ್ಮಿಕೊಂಡಿದ್ದ ಸಸಿ ನೆಡುವ ಕಾರ್ಯಕ್ರಮಕ್ಕೆ ಗಣ್ಯರು ಚಾಲನೆ ನೀಡಿದರು. ಶಂಕರ ಬೋಳನ್ನವರ, ಸುನೀಲ ಮರಕುಂಬಿ, ಗುರು ಮೆಟಗುಡ್ಡ, ಜಗದೀಶ ಬೂದಿಹಾಳ ಇತರರಿದ್ದರು.
ಬೈಲಹೊಂಗಲದಲ್ಲಿ ಹಮ್ಮಿಕೊಂಡಿದ್ದ ಸಸಿ ನೆಡುವ ಕಾರ್ಯಕ್ರಮಕ್ಕೆ ಗಣ್ಯರು ಚಾಲನೆ ನೀಡಿದರು. ಶಂಕರ ಬೋಳನ್ನವರ, ಸುನೀಲ ಮರಕುಂಬಿ, ಗುರು ಮೆಟಗುಡ್ಡ, ಜಗದೀಶ ಬೂದಿಹಾಳ ಇತರರಿದ್ದರು.
Published on
ಬೈಲಹೊಂಗಲ:

ಸಣ್ಣ ಪ್ರಯತ್ನವೂ ಪರಿಸರ ಸಂರಕ್ಷಣೆಯಲ್ಲಿ ದೊಡ್ಡ ಬದಲಾವಣೆ ತರಬಲ್ಲದು. ಇಂದು ಮಾ ಭಾರತಿ ಸೇವಾ

ಫೌಂ

ಡೇಷನ್ ಮಾಡುತ್ತಿರುವ ಕಾರ್ಯ ಶ್ಲಾಘನೀಯವಾಗಿದೆ ಎಂದು ಪ್ರಗತಿಪರ ರೈತ ಶಂಕರ ಬೋಳಣ್ಣವರ ಹೇಳಿದರು.


ಬೋಳಣ್ಣವರ ಬಡಾವಣೆ ಉದ್ಯಾನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸಸಿ ನೆಡುವ ಕಾರ್ಯಕ್ರಮದಲ್ಲಿ ಮಾತನಾಡಿ, ಪರಿಸರ ನಾಶ, ಅರಣ್ಯ ಪ್ರದೇಶಗಳ ಕ್ಷೀಣತೆ, ಹೆಚ್ಚುತ್ತಿರುವ ಮಾಲಿನ್ಯ ಹಾಗೂ ಹವಾಮಾನ ಬದಲಾವಣೆಯಿಂದ ಪ್ರಕೃತಿ ಅಸಮತೋಲಿತವಾಗುತ್ತಿದೆ. ಮುಂದಿನ ಪೀಳಿಗೆಗೆ ನೆರಳು, ಶುದ್ಧ ಗಾಳಿ ಮತ್ತು ಸುಂದರ ಪರಿಸರ ನೀಡುವ ಅಮೂಲ್ಯ ಕೊಡುಗೆ ನಮ್ಮದಾಗಲಿ ಎಂದರು.
ಸುನೀಲ ಮರಕುಂಬಿ ಮಾತನಾಡಿ, ಮಾತೃಭೂಮಿ ಹಸಿರಿಗಾಗಿ ‘ನಮ್ಮೆಲ್ಲರ ಸಹಕಾರ ಅಗತ್ಯ’ ಆಶಯದೊಂದಿಗೆ ಕಾರ್ಯಕ್ರಮವನ್ನು ನಡೆಸುತ್ತಿದ್ದು, ಪ್ರತಿಯೊಬ್ಬರೂ ಪರಿಸರ ಸಂರಕ್ಷಣೆ ಜವಾಬ್ದಾರಿ ಅರಿತು ಸಸಿಗಳನ್ನು ನೆಟ್ಟು ಪೋಷಿಸುವುದು ಅಗತ್ಯವಾಗಿದೆ. ಹಸಿರು ಬೈಲಹೊಂಗಲ ಸುಂದರ ಬೈಲಹೊಂಗಲ ನಿರ್ಮಾಣಕ್ಕೆ

ಫೌಂ

ಡೇಷನ್ ಬದ್ಧವಾಗಿದೆ ಎಂದರು.

ಕೃಷಿಕ ಸಮಾಜದ ತಾಲೂಕಾಧ್ಯಕ್ಷ ಗುರು ಮೆಟಗುಡ್ಡ, ತಾಪಂ ಮಾಜಿ ಸದಸ್ಯ ಜಗದೀಶ ಬೂದಿಹಾಳ, ರಾಜೇಶ ಹಿರೇಮಠ, ಸುಭಾಸ ತುರಮರಿ, ಅಭಿಷೇಕ ಬೋಳಣ್ಣವರ, ಸಂತೋಷ ಹಡಪದ, ಸಿಎ ಈರಣ್ಣ ಮುರಗೋಡ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net